ಮಡಿಕೇರಿ, ಮಾ. ೩೧ : ನಗರದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ತಾ. ೩೧ರಂದು ನಡೆದ ಪಂದ್ಯಾವಳಿಯಲ್ಲಿ ಚೆಯ್ಯಂಡ ಹಾಗೂ ಬೊಪ್ಪಂಡ ತಂಡಗಳು ಭರ್ಜರಿಯಾಗಿ ಜಯಭೇರಿ ಬಾರಿಸಿವೆ.

ಮೈದಾನ ಸಂಖ್ಯೆ ೧ರಲ್ಲಿ ಪುಚ್ಚಿಮಾಡ ಮತ್ತು ಮಂಡಿರ (ಮಾದಾಪುರ) ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಪುಚ್ಚಿಮಾಡ ತಂಡ ೩ ಗೋಲುಗಳನ್ನು ಬಾರಿಸಿ ಮಂಡಿರ ತಂಡವನ್ನು ಪರಾಭವಗೊಳಿಸಿತು. ಪುಚ್ಚಿಮಾಡ ತಂಡದ ಯಶ್ವಿನ್ ಗಣಪತಿ ೨ ಹಾಗೂ ಭವನ್ ಬೋಪಣ್ಣ ೧ ಗೋಲು ದಾಖಲಿಸಿದರು. ಮಂಡಿರ ತಂಡದ ದ್ಯಾನ್ ದೇವಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮುಕ್ಕಾಟಿರ (ಮೂವತ್ತೊಕ್ಲು) ಮತ್ತು ಚೆಯ್ಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಯ್ಯಂಡ ತಂಡ ಭರ್ಜರಿ ೫ ಗೋಲುಗಳನ್ನು ದಾಖಲಿಸುವ ಮೂಲಕ ಗೆಲುವು ಸಾಧಿಸಿತು. ಚೆಯ್ಯಂಡ ತಂಡದ ನಂದ ನಾಚಪ್ಪ ೨, ಪೂವಣ್ಣ ಬಿ., ಅಪ್ಪಚ್ಚು ಹಾಗೂ ಶಂಕರಿ ತಲಾ ೧ ಗೋಲು ಬಾರಿಸಿದರು. ಮುಕ್ಕಾಟಿರ ಕಾರ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

ಪುಚ್ಚಿಮಂಡ ಮತ್ತು ಕಂಗಾAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಂಗಾAಡ ತಂಡ ೨-೦ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕಂಗಾAಡ ತಂಡದ ಪುನೀತ್ ೨ ಗೋಲು ದಾಖಲಿಸಿದರು. ತಂಡದ ದೇವಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕುಪ್ಪಂಡ (ನಾಂಗಾಲ) ಮತ್ತು ಬೊಳ್ಳೆಪಂಡ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಕುಪ್ಪಂಡ ತಂಡ ೨-೧ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕುಪ್ಪಂಡ ತಂಡದ ಗೌರವ್ ಗಣಪತಿ ೨ ಹಾಗೂ ಬೊಳ್ಳೆಪಂಡ ತಂಡದ ಗ್ಯಾನ್ ಗಣಪತಿ ೧ ಗೋಲು ದಾಖಲಿಸಿದರು. ಬೊಳ್ಳೆಪಂಡ ನಿತಿನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

ಮಾರ್ಚಂಡ ಮತ್ತು ಮಾಣಿರ ತಂಡಗಳ ನಡುವಿನ ಪಂದ್ಯಾಟದಲ್ಲಿ ೫-೦ ಗೋಲುಗಳ ಅಂತರದಲ್ಲಿ ಮಾರ್ಚಂಡ ತಂಡ ಗೆಲುವು ದಾಖಲಿಸಿತು. ಮಾರ್ಚಂಡ ತಂಡದ ಪಳಂಗಪ್ಪ ಹಾಗೂ ಸುಬ್ರಮಣಿ ತಲಾ ೨ ಮತ್ತು ಸಚಿತ್ ಸೋಮಣ್ಣ ೧ ಗೋಲು ದಾಖಲಿಸಿದರು. ಮಾರ್ಚಂಡ ತಂಡದ ದರ್ಶನ್ ಚಂಗಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಗೌಡಂಡ ಮತ್ತು ಪಳೆಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಳೆಯಂಡ ೩-೦ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಪಳೆಯಂಡ ತಂಡದ ಸೂರಿ ಸುಬ್ಬಯ್ಯ, ಪಾರ್ಥ ಚಿಣ್ಣಪ್ಪ ಹಾಗೂ ಬೋಪಣ್ಣ ಪಿ.ಕೆ., ತಲಾ ೧ ಗೋಲು ದಾಖಲಿಸಿದರು. ಗೌಡಂಡ ತಂಡದ ಪೊನ್ನಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.

ಚೆಟ್ಟಿಯಾರಂಡ ಮತ್ತು ಚಿಕ್ಕಂಡ ತಂಡಗಳ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಚೆಟ್ಟಿಯಾರಂಡ ಗೆಲುವು ಸಾಧಿಸಿತು. ಚೆಟ್ಟಿಯಾರಂಡ ತಂಡದ ಬಿನ್ನು ಕಾವೇರಪ್ಪ ೧ ಗೋಲು ದಾಖಲಿಸಿದರು. ಚಿಕ್ಕಂಡ ತಂಡದ ಡಾಲು ಮೊಣ್ಣಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.

ಮೈದಾನ ಸಂಖ್ಯೆ ೨ರಲ್ಲಿ ನಂದೇಟಿರ ಹಾಗೂ ಕಲ್ಲೇಂಗಡ (ನಾಪೋಕ್ಲು) ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ನಂದೇಟಿರ ತಂಡ ೨-೧ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ನಂದೇಟಿರ ತಂಡದ ಧ್ಯಾನ್ ಮುತ್ತಣ್ಣ ಹಾಗೂ ನಿತಿನ್ ಪೂವಯ್ಯ ತಲಾ ೧ ಗೋಲು ದಾಖಲಿಸಿದರು. ಕಲ್ಲೆಂಗಡ ತಂಡದ ಹರ್ಷ ಅಯ್ಯಪ್ಪ ೧ ಗೋಲು ಬಾರಿಸಿದರು. ಕಲ್ಲೆಂಗಡ ತಂಡದ ಚೇತನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ದಾಸಂಡ ಮತ್ತು ಪಾಸುರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ದಾಸಂಡ ತಂಡ ೪-೦ ಗೋಲುಗಳ ಅಂತರದಿAದ ಗೆಲುವು ದಾಖಲಿಸಿತು. ದಾಸಂಡ ತಂಡದ ಚಂಗಪ್ಪ ಹಾಗೂ ಆಕಾಶ್ ಅಚ್ಚಯ್ಯ ತಲಾ ೨ ಗೋಲು ದಾಖಲಿಸಿದರು. ಪಾಸುರ ತಂಡದ ಕಿಶೋರ್ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.

ಬೊಪ್ಪಂಡ ಮತ್ತು ಕರ್ತುರ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ೫-೧ ಗೋಲುಗಳ ಅಂತರದಿAದ ಬೊಪ್ಪಂಡ ತಂಡ ಗೆಲುವು ಸಾಧಿಸಿತು. ಬೊಪ್ಪಂಡ ತಂಡದ ವಿಖ್ಯಾತ್ ಮಂದಣ್ಣ ಭರ್ಜರಿ ೫ ಗೋಲುಗಳನ್ನು ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಕರ್ತುರ ತಂಡದ ಕಾರ್ತಿಕ್ ಪೆಮ್ಮಯ್ಯ ೧ ಗೋಲು ದಾಖಲಿಸಿದರು. ಕರ್ತುರ ತಂಡದ ದರ್ಶನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಐಚಂಡ ಮತ್ತು ಮುಂಡ್ಯೋಳAಡ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ ೧ ಗೋಲುಗಳನ್ನು ಪಡೆಯುವ ಮೂಲಕ ಪಂದ್ಯ ಡ್ರಾ ನಲ್ಲಿ ಮುಕ್ತಾಯವಾಯಿತು. ಐಚಂಡ ತಂಡದ ಪವನ್ ಪೊನ್ನಪ್ಪ ಹಾಗೂ ಮುಂಡ್ಯೋಳAಡ ಬ್ರಿಜೇಶ್ ಗಣಪತಿ ತಲಾ ೧ ಗೋಲು ಬಾರಿಸಿದರು. ಮುಂಡ್ಯೋಳAಡ ನಿರನ್ ನಾಣಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ನಾಟೋಳಂಡ ಮತ್ತು ಕರ್ತಚ್ಚಿರ ತಂಡಗಳ ನಡುವೆ ನಡೆದ ಪಂದ್ಯ ತಲಾ ೨ ಗೋಲು ಪಡೆಯುವ ಮೂಲಕ ಡ್ರಾ ಆಯಿತು. ಟೈಬ್ರೆಕರ್‌ನಲ್ಲಿ ಕರ್ತಚ್ಚಿರ ತಂಡ ಗೆಲುವು ದಾಖಲಿಸಿತು. ಕರ್ತಚ್ಚಿರ ತಂಡದ ಧ್ಯಾನ್ ಪೂಣಚ್ಚ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕರ್ತಚ್ಚಿರ ತಂಡದ ಡ್ಯಾನಿ ಕಾಳಪ್ಪ ಹಾಗೂ ತನುಷ್ ತಮ್ಮಯ್ಯ ತಲಾ ೧ ಮತ್ತು ನಾಟೋಳಂಡ ತಂಡದ ಚಿಣ್ಣಪ್ಪ ಹಾಗೂ ಕೀರ್ತನ್ ಪೂವಣ್ಣ ೧ ಗೋಲು ದಾಖಲಿಸಿದರು.

ಮೈಂದÀಪAಡ ಮತ್ತು ಕೂಪದಿರ ತಂಡಗಳ ನಡುವಿನ ಪಂದ್ಯದಲ್ಲಿ ೩-೨ ಗೋಲುಗಳ ಅಂತರದಲ್ಲಿ ಮೈಂದಪÀAಡ ತಂಡ ಗೆಲುವು ದಾಖಲಿಸಿತು. ಮೈಂದಪAಡ ತಂಡದ ಚಿಣ್ಣಪ್ಪ ೩, ಕೂಪದಿರ ತಂಡದ ಬೋಪಣ್ಣ ೨ ಗೋಲು ದಾಖಲಿಸಿದರು. ಕೂಪದಿರ ತಂಡದ ಬೋಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮಲ್ಲಜಿರ ಮತ್ತು ಮಲ್ಲಮಾಡ ತಂಡಗಳ ನಡುವಿನ ಪಂದ್ಯದಲ್ಲಿ ೫-೨ ಗೋಲುಗಳ ಅಂತರದಲ್ಲಿ ಮಲ್ಲಮಾಡ ತಂಡ ಗೆಲುವು ದಾಖಲಿಸಿತು. ಮಲ್ಲಮಾಡ ತಂಡದ ಗುಲ್ಶನ್ ಗಣಪತಿ, ಕರುಂಬಯ್ಯ ಹಾಗೂ ಶನತ್ ಪೂಣಚ್ಚ ತಲಾ ೧ ಗೋಲು ದಾಖಲಿಸಿದರೆ ಸಂದೇಶ್ ಬೆಳ್ಯಪ್ಪ ೨ ಗೋಲು ಬಾರಿಸಿದರು. ಮಲ್ಲಜಿರ ತಂಡ ೨ ಗೋಲು ದಾಖಲಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮೈದಾನ ಸಂಖ್ಯೆ ೩ರಲ್ಲಿ ತೆನ್ನಿರ ಮತ್ತು ಕೆಳಪಂಡ ತಂಡಗಳ ನಡುವೆ ಪಂದ್ಯಾವಳಿ ನಡೆದಿದ್ದು, ಕೇಳಪಂಡ ತಂಡ ತೆನ್ನಿರ ತಂಡದ ವಿರುದ್ಧ ೬ ಗೋಲು ದಾಖಲಿಸಿ ಜಯಗಳಿಸಿತು. ಕೇಳಪಂಡ ತಂಡದ ಶಿರಾಗ್ ತಮ್ಮಯ್ಯ ಹಾಗೂ ನಾಣಯ್ಯ ತಲಾ ೩ ಗೋಲುಗಳನ್ನು ದಾಖಲಿಸಿದರು. ತೆನ್ನಿರ ಗಗನ್ ಬೋಪಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕೇಕಡ ಮತ್ತು ಮಾದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾದಂಡ ತಂಡ ೪-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮಾದಂಡ ತಂಡದ ಸಂದೇಶ್ ಅಪ್ಪಯ್ಯ ೨, ಲಿಖಿತ್ ಅಪ್ಪಣ್ಣ ಹಾಗೂ ಮಿಲನ್ ಪೂಣಚ್ಚ ತಲಾ ೧ ಗೋಲು ದಾಖಲಿಸಿದರು. ಕೇಕಡ ತರುಣ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಚಂಗುಲAಡ ಮತ್ತು ಕಬ್ಬಚ್ಚಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಚಂಗುಲAಡ ತಂಡ ಜಯ ಸಾಧಿಸಿತು. ಚಂಗುಲAಡ ತಂಡದ ಈಶ್ ಅಯ್ಯಪ್ಪ, ಬೆನ್ ಬೊಪ್ಪಣ್ಣ ಹಾಗೂ ಗೌತಮ್ ತಲಾ ೧ ಗೋಲು ದಾಖಲಿಸಿದರು. ಕಬ್ಬಚ್ಚಿರ ತಂಡದ ಪ್ರಜ್ವಲ್ ೧ ಗೋಲು ದಾಖಲಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕೀತಿಯಂಡ ಮತ್ತು ಮೇಚಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೇಚಂಡ ತಂಡ ೪-೦ ಗೋಲುಗಳ ಅಂತರದಿAದ ಗೆಲುವು ದಾಖಲಿಸಿತು. ಮೇಚಂಡ ತಂಡದ ಚಿರನ್ ಮೇದಪ್ಪ ೩ ಹಾಗೂ ತನು ನಂಜಪ್ಪ ೧ ಗೋಲು ದಾಖಲಿಸಿದರು. ಕೀತಿಯಂಡ ಶಶಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.

ಕೇಟೋಳಿರ ಮತ್ತು ವಾಟೇರಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ವಾಟೇರಿರ ತಂಡ ೩-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ವಾಟೇರಿರ ತಂಡದ ಕಾರ್ತಿಕ್ ಕಾರ್ಯಪ್ಪ ಭರ್ಜರಿ ೩ ಗೋಲು ದಾಖಲಿಸಿದರು. ಕೇಟೋಳಿರ ಮನೀಶ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕೋದೇಂಗಡ ಮತ್ತು ಕೆಚ್ಚೆಟಿರ (ಕಡಗದಾಳು) ತಂಡಗಳ ನಡುವಿನ ಪಂದ್ಯದಲ್ಲಿ ಕೆಚ್ಚೆಟಿರ ತಂಡ ೨-೧ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕೆಚ್ಚೆಟಿರ ತಂಡದ ವಿಜಯ್ ಉತ್ತಯ್ಯ ಹಾಗೂ ಮಿತುನ್ ತಲಾ ೧ ಗೋಲು ದಾಖಲಿಸಿದರು. ಕೊದೆಂಗಡ ತಂಡದ ನಿತಿನ್ ಚಿಣ್ಣಪ್ಪ ೧ ಗೋಲು ದಾಖಲಿಸಿದರು. ಕೋದೇಂಗಡ ತಂಡದ ದಿಲನ್ ಕಾವೇರಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.