ಸೋಮವಾರಪೇಟೆ,ಮಾ.೩೧: ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸೋಮವಾರಪೇಟೆ ಮಂಡಲ ವತಿಯಿಂದ ಯುಗಾದಿ ಅಂಗವಾಗಿ ಪಟ್ಟಣದಲ್ಲಿ ಗಣವೇಷಧಾರಿ ಸ್ವಯಂ ಸೇವಕರಿಂದ ಪಥ ಸಂಚಲನ ನಡೆಯಿತು.

ರಾಷ್ಟಿçÃಯ ಸ್ವಯಂ ಸೇವಕ ಸಂಘವು ೧೦೦ ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆ, ಸಂಘದ ಸ್ವಯಂ ಸೇವಕರು ಯುಗಾದಿ ಹಬ್ಬದಂದು ಆಕರ್ಷಕ ಘೋಷ್ ವಾದ್ಯಕ್ಕೆ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಆರಂಭಗೊAಡ ಪಥ ಸಂಚಲನ ಬಸವೇಶ್ವರ ರಸ್ತೆ, ಮುಖ್ಯರಸ್ತೆ, ಕ್ಲಬ್ ರಸ್ತೆ, ಮಡಿಕೇರಿ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಎಂ.ಜಿ. ರಸ್ತೆಯ ಮೂಲಕ ಸಾಗಿ ನಂತರ ಮೈದಾನದಲ್ಲಿ ಸಮಾಪನಗೊಂಡಿತು.