ಮಡಿಕೇರಿ, ಮಾ.೩೧: ಮಡಿಕೇರಿಯ ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕೊಡಗಿನ ಕ್ರೀಡಾಕ್ಷೇತ್ರದ ದ್ರೋಣಾಚಾರ್ಯ ದಿ. ಸಿ.ವಿ. ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಏರ್ಪಡಿಸಿಕೊಂಡು ಬರಲಾಗುತ್ತಿರುವ ೩೧ನೇ ವರ್ಷದ ಮಕ್ಕಳ ಉಚಿತ ಬೇಸಿಗೆ ತರಬೇತಿ ಶಿಬಿರದ ಉದ್ಘಾಟನೆ ತಾ.೧ರಂದು (ಇಂದು) ನಡೆಯಲಿದೆ.
ಬೆಳಿಗ್ಗೆ ೮.೩೦ ಗಂಟೆಗೆ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಶಿಬಿರದ ಉದ್ಘಾಟನೆಯನ್ನು ಅಂತರರಾಷ್ಟಿçÃಯ ಬಾಸ್ಕೆಟ್ಬಾಲ್ ಆಟಗಾರ್ತಿ, ಫೀ.ಮಾ. ಕಾರ್ಯಪ್ಪ ಕಾಲೇಜು ನಿವೃತ್ತ ಪ್ರಾಂಶುಪಾಲೆ ಡಾ. ಪುಷ್ಪ ಕುಟ್ಟಣ್ಣ ನೆರವೇರಿಸಲ್ಲಿದ್ದಾರೆ. ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಕೋಟೇರ ಎನ್. ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅತಿಥಿಗಳಾಗಿ ಶಕ್ತಿ ಪತ್ರಿಕೆ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಉಪಸ್ಥಿತರಿಲ್ಲಿದ್ದಾರೆ.
ಈಗಾಗಲೇ ಕಳೆದ ತಾ. ೨೪ರಿಂದ ಶಿಬಿರ ಆರಂಭಗೊAಡಿದ್ದು ನುರಿತ ತರಬೇತುದಾರರಾದ ಕೇನೇರ ಕಾವ್ಯ, ನಾಟೋಳಂಡ ಸುರೇಶ್, ಬಿದ್ದಂಡ ನರೇನ್, ಬೊಪ್ಪಂಡ ಶ್ಯಾಂ ಪೂಣಚ್ಚ, ಕೋಟೇರ ನಾಣಯ್ಯ ಸೇರಿದಂತೆ ಹಲವರು ತರಬೇತಿ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟಿçÃಯ, ಅಂತರರಾಷ್ಟಿçÃಯ ಮಟ್ಟದಲ್ಲಿ ಆಡಿರುವಂತಹ ಆಟಗಾರರು ತರಬೇತಿ ನೀಡಲಿದ್ದಾರೆ ಎಂದು ಶಿಬಿರದ ಸಂಚಾಲಕ ಬಾಬು ಸೋಮಯ್ಯ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಾಂಡರರ್ಸ್ ಪದಾಧಿಕಾರಿಗಳಾದ ಕುಡೆಕಲ್ ಸಂತೋಷ್(೯೯೭೨೫೩೮೫೮೪), ಶ್ಯಾಂ ಪೂಣಚ್ಚ(೯೪೪೮೨೭೮೦೮೧) ಇವರುಗಳನ್ನು ಸಂಪರ್ಕಿಸುವAತೆ ಅವರು ತಿಳಿಸಿದ್ದಾರೆ.