ಇವರು ಚೆಪ್ಪುಡಿರ ಪೂಣಚ್ಚ ಬೆಳ್ಯಪ್ಪ. ಕೊಡಗಿನ ಅಮ್ಮತ್ತಿ ಹೊಸೂರು ಗ್ರಾಮದ ಚೆಪ್ಪುಡಿರ ಎಂ. ಪೂಣಚ್ಚ, ಗಂಗಮ್ಮ (ಬಿದ್ದಂಡ) ದಂಪತಿಯ ಪುತ್ರ. ಇವರು ಮಡಿಕೇರಿಯ ಸೈಂಟ್ ಮೈಕೆಲ್ಸ್ ಶಾಲೆ, ಬೆಂಗಳೂರಿನ ಸೈಂಟ್ ಜೋಸೆಫ್ ಶಾಲೆ ಮತ್ತು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆ ಯಲ್ಲಿ ತಮ್ಮ ಪ್ರೌಢಶಾಲೆಯವರೆಗಿನ ಶಿಕ್ಷಣ ವನ್ನು ಮುಗಿಸಿದ್ದಾರೆ. ಆ ಬಳಿಕ ಆಗಿನ ಮದ್ರಾಸ್‌ನ (ಚೆನ್ನೆöÊ) ಲೋಯೆಲ್ಲಾ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದ ಬಳಿಕ ಅದೇ ಊರಿನ ಎ.ಸಿ. ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಬಿ.ಟೆಕ್. ಪದವಿ (ರಸಾಯನ ಶಾಸ್ತç) ಪಡೆದಿದ್ದಾರೆ. ನಂತರ ವಿದೇಶಕ್ಕೆ ಹಾರಿ ಯು.ಎಸ್.ಎ.ಯಲ್ಲಿ ಇರುವ ಸ್ಟೇವನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ರಸಾಯನ ಶಾಸ್ತç ವಿಭಾಗದಲ್ಲಿ ಎಂ.ಇ. ಪದವಿಯನ್ನು ಪಡೆಯವುದರಲ್ಲಿ ಸಫಲರಾಗಿದ್ದಾರೆ. ಮುಂದೆ ಭಾರತೀಯ ತೈಲ ನಿಗಮ, ಚೆನ್ನೆöÊ ರ‍್ಯಾಲಿಸ್ ಇಂಡಿಯಾ, ಕಾನ್ಪುರ ಹಾಗೂ ಹಂಫ್ರೀಸ್ ಮತ್ತು ಗ್ಲ್ಯಾಸ್ಗೋ ಕನ್ಸಲ್ಟೆಂಟ್ಸ್, ಮುಂಬೈಯಲ್ಲಿ ನೌಕರಿಯನ್ನು ಮಾಡಿದ್ದಾರೆ. ಎಳವೆಯಿಂದಲೇ ಓದುವ ಅಭ್ಯಾಸವನ್ನು ಬೆಳಸಿಕೊಂಡವರು ಕ್ರಮೇಣ ಬರವಣಿಗೆಗೆ ಒತ್ತು ನೀಡತೊಡಗಿದ್ದಾರೆ. ವಿದ್ಯಾಭ್ಯಾಸವೆಲ್ಲವೂ ಆಂಗ್ಲ ಭಾಷೆಯಲ್ಲಿಯೇ ನಡೆದಿದ್ದ ಕಾರಣದಿಂದ ಇವರ ಓದು ಬರಹಗಳು ಸಹ ಆಂಗ್ಲ ಭಾಷೆಯಲ್ಲಿಯೇ ಇವೆ.
ಆಂಗ್ಲ ಭಾಷೆಯ ಡೆಕ್ಕನ್ ಹೆರಾಲ್ಡ್, ಸ್ಟಾರ್ ಆಫ್ ಮೈಸೂರು, ಮತ್ತು ಕಾಫೀಲ್ಯಾಂಡ್ ನ್ಯೂಸ್ ಪತ್ರಿಕೆಗಳಲ್ಲಿ ಇವರ ಲೇಖನಗಳು ಮತ್ತು ಅಂಕಣಗಳು ಇಂದಿಗೂ ಪ್ರಕಟವಾಗುತ್ತಿವೆ. ಸಾರಸ್ವತ ಲೋಕಕ್ಕೆ ಇವರು ೧) "ಟೇಲ್ ಆಫ್ ಎ ಟೈಗರ್ಸ್ ಟೈಲ್ ಆಂಡ್ ಅದರ್ ಯಾರ್ನ್ ಫ್ರಂ ಕೂರ್ಗ್" (೨೦೦೪), ೨) "ನುಗ್ಗೆಟ್ಸ್ ಫ್ರಮ್ ಕೂರ್ಗ್ ಹಿಸ್ಟರಿ" (೨೦೦೮) ೩), "ವಿಕ್ಟೋರಿಯಾ ಗೌರಮ್ಮ: ದಿ ಲಾಸ್ಟ್ ಪ್ರಿನ್ಸೆಸ್ ಆಫ್ ಕೂರ್ಗ್" (೨೦೧೦), ೪) "ಟಂಗ್ ಆಫ್ ದಿ ಸ್ಲಿಪ್" ಎಂಬ ತಮ್ಮ ಬದುಕಿನ ಹಿನ್ನೋಟದ ಹಾಸ್ಯಭರಿತ ಚರಿತೆ (೨೦೧೩), ೫) "ಕೂರ್ಗ್ ಸ್ಟೋರೀಸ್ ಅಂಡ್ ಎಸ್ಸೆöÊಸ್" (೨೦೨೩) ಎಂಬ ಕಥೆಗಳು ಮತ್ತು ಪ್ರಬಂಧ ಲೇಖನಗಳುಳ್ಳ ಪುಸ್ತಕ ಸೇರಿ ಐದು ಕೃತಿಗಳನ್ನು ರಚಿಸಿ ನವದೆಹಲಿಯ ರೂಪ ಪಬ್ಲಿಕೇಶನ್ಸ್ ಮೂಲಕ ಪ್ರಕಟಿಸಿ ಲೋಕಾರ್ಪಣೆ ಮಾಡಿದ್ದಾರೆ. ೨೦೧೩ರಲ್ಲಿ "ಕೊಡಗಿನ ಕಳೆದುಹೋದ ರಾಜಕುಮಾರಿ" ಎಂಬ ಹೆಸರಿನಲ್ಲಿ ಅಂಕಿತ ಪುಸ್ತಕ ಪ್ರಕಾಶನವು ಇವರ "ವಿಕ್ಟೋರಿಯಾ ಗೌರಮ್ಮ: ದಿ ಲಾಸ್ಟ್ ಪ್ರಿನ್ಸೆಸ್ ಆಫ್ ಕೂರ್ಗ್" ಕೃತಿಯನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರಕಟ ಪಡಿಸಿದ್ದಾರೆ.
ಶಿಕ್ಷಣ ಕ್ಷೇತ್ರದ ಕಾವೇರಿ ಎಜುಕೇಶನ್ ಸೊಸೈಟಿ ಗೋಣಿಕೊಪ್ಪಲು, ೨) ಕೂರ್ಗ್ ಎಜುಕೇಶನ್ ಸೊಸೈಟಿ ಮಡಿಕೇರಿ ಹಾಗೂ ೩) ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯ ಮೂರೂ ಆಡಳಿತ ಮಂಡಳಿಗಳ ಸದಸ್ಯ ರಾಗಿ ಸೇವೆ ಸಲ್ಲಿಸಿದ್ದಾರೆ. ೨೦೦೮ ರಿಂದ ೨೦೨೨ ರವರೆಗೆ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈಗಾಗಲೇ ಪಿ.ಟಿ ಬೋಪಣ್ಣನವರ "ತಿತಿತಿ.ಛಿouಡಿgಣouಡಿisಟಿiಟಿಜಿo.ಛಿom ವೆಬ್‌ಸೈಟಿನ ಅಂಕಣ ಬರಹಗಾರರಾಗಿರುವ ಇವರು "ತಿತಿತಿ.sಚಿಟಿಜooಞಚಿmuseum.oಡಿg" ಎಂಬ ಹೊಸ ವೆಬ್‌ಸೈಟಿನ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದು ಕೊಡವ ಸಮುದಾಯದ ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕ ಆಚರಣೆಗಳು, ಇತಿಹಾಸ ಮತ್ತು ಸಾಧನೆಗಳನ್ನು ಒಳಗೊಂಡ ವರ್ಚುವಲ್ ಮ್ಯೂಸಿಯಂ ಆಗಿ ಮಾರ್ಪಾಡು "ಪ್ರತಿಯೊಬ್ಬರ ಚಿಂತನೆಗಳು ವಿಶಿಷ್ಟ ಮತ್ತು ವಿಭಿನ್ನವಾಗಿರುತ್ತವೆ, ಆದುದರಿಂದ ತಮ್ಮ ಜ್ಞಾನ ಮತ್ತು ಉತ್ತಮ ಆಲೋಚನೆಗಳನ್ನು ಬರವಣಿಗೆಯ ಮೂಲಕ ಸಾಕ್ಷೀಕರಿಸಿದಾಗ ಅದೊಂದು ಜ್ಞಾನ ಸರೋವರವಾಗಿ ಬೆಳಗುತ್ತದೆ. ಆದರೆ ಬರಹಗಾರರು ಬರೆಯಲು ಪ್ರಾರಂಭಿಸುವ ಮುನ್ನ ವಿವಿಧ ವಿಷಯಗಳ ಕುರಿತು ಪುಸ್ತಕಗಳನ್ನು ಓದಲು ಆಸಕ್ತಿ ಬೆಳಸಿಕೊಳ್ಳಲೇಬೇಕು.
ಓದು ಎಂಬುದು ಅವ್ಯಾಹತವಾಗಿ ಬೆಳೆದು ಬರಹದ ಪ್ರಾರಂಭಕ್ಕೆ ಹದ ಮಾಡಿಕೊಳ್ಳಬೇಕು. ಓದುವ ಅಭ್ಯಾಸವು ಮಾನವ ಜನ್ಮಕ್ಕೆ ಅತ್ಯಗತ್ಯ ಅದರಲ್ಲಿಯೂ ಯುವ ಬರಹಗಾರರ ಓದುವಿಕೆಯು ಆಜೀವ ಉತ್ಸಾಹವಾಗಿ ನಿಲ್ಲಬೇಕು. ಆಗ ಮಾತ್ರ ಉತ್ತಮ ಸಾಹಿತ್ಯ ಸೃಷ್ಟಿಯಾಗಿ ಈ ಲೋಕದ ಬೆಳವಣಿಗೆ ಸಾಧ್ಯ" ಎಂದು ಇಂದಿನ ಸಾಹಿತ್ಯಾಸಕ್ತರಿಗೆ ತಮ್ಮ ಕಿವಿಮಾತುಗಳನ್ನು ಹೇಳುತ್ತಾರೆ.
ಇವರ ಮಗ ಡಾ. ಸಿ. ವಿಕ್ರಮ್ ಬೆಳ್ಯಪ್ಪ ಜಠರಗರುಳಿನ ಶಸ್ತçಚಿಕಿತ್ಸಕರಾಗಿ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಾ ಪತ್ನಿ ಡಾ. ದೇಚು (ದಂತವೈದ್ಯರು) ಮತ್ತು ಇಬ್ಬರು ಗಂಡು ಮಕ್ಕಳೊಡನೆ ವಾಸಿಸುತ್ತಿದ್ದಾರೆ. ಸಿ.ಪಿ.ಬೆಳ್ಯಪ್ಪನವರು ಹೊಸೂರು ಗ್ರಾಮದಲ್ಲಿ ಪತ್ನಿ ಅರುಣಾ (ಕೊಡಂದೆರ) ಅವರೊಂದಿಗೆ ಹಾಲಿ ವಾಸಿಸುತ್ತಿದ್ದಾರೆ. ಇವರ ಮುಂದಿನ ಬದುಕು ಬರಹಗಳು ಇನ್ನಷ್ಟೂ ಬೆಳಗಿ ಮುಂದಿನ ಪೀಳಿಗೆಗೆ ದಾರಿ ದೀಪವಾಗಿ ಬೆಳೆಯಲೆಂದು ಹಾರೈಸೋಣ.
- ವೈಲೇಶ್. ಪಿ.ಎಸ್. ಕೊಡಗು.
ಮೊ. ೮೮೬೧೪೦೫೭೩೮.