೨೦೫೬ಕ್ಕೇರಿದ ಸಾವಿನ ಸಂಖ್ಯೆ

ದೆಹಲಿ, ಮಾ. ೩೧: ನಾಲ್ಕು ದಿನಗಳ ಹಿಂದೆ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪವು ಭಾರೀ ವಿನಾಶವನ್ನುಂಟು ಮಾಡಿದೆ. ಕನಿಷ್ಟ ೨೦೫೬ ಮಂದಿ ಸಾವನ್ನಪ್ಪಿದ್ದು ೩೯೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದಲ್ಲದೆ ಸುಮಾರು ೨೭೦ ಮಂದಿ ಕಾಣೆಯಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸತತ ನಾಲ್ಕು ದಿನಗಳಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದರೂ, ಸಾವಿರಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ವರದಿಗಳಿವೆ. ಇನ್ನು ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಒಂದು ವಾರ ರಾಷ್ಟಿçÃಯ ಶೋಕಾಚರಣೆ ಘೋಷಿಸಲಾಗಿದೆ. ಶುಕ್ರವಾರದಂದು ಸಂಭವಿಸಿದ ೭.೭ ತೀವ್ರತೆಯ ಭೂಕಂಪದಿAದ ಉಂಟಾದ ಜೀವಹಾನಿ ಮತ್ತು ಹಾನಿಗೆ ಸಂತಾಪ ಸೂಚಿಸಿ ಏಪ್ರಿಲ್ ೬ರವರೆಗೆ ರಾಷ್ಟ್ರಧ್ವಜಗಳನ್ನು ಅರ್ಧಕ್ಕೆ ಇಳಿಸಲಾಗುತ್ತದೆ ಎಂದು ಆಡಳಿತಾರೂಢ ಜುಂಟಾ ಹೇಳಿಕೆಯಲ್ಲಿ ತಿಳಿಸಿದೆ. ಈ ಪರಿಸ್ಥಿತಿಯ ನಡುವೆಯೂ, ಇಡೀ ಜಗತ್ತು ಮ್ಯಾನ್ಮಾರ್‌ಗೆ ಸಹಾಯಹಸ್ತ ಚಾಚಿದೆ. ಇವುಗಳಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಅದು ನೆರೆಯ ದೇಶದ ವಿರುದ್ಧ ನೇರವಾಗಿ ಆಪರೇಷನ್ ಬ್ರಹ್ಮ ಎಂಬ ಸಂಪೂರ್ಣ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಸುಮಾರು ೩೫ ಲಕ್ಷ ಜನರು ನಿರಾಶ್ರಿತರಾಗಿದ್ದಾರೆ ಎಂಬ ಅಂಶದಿAದ ಭೂಕಂಪದ ಪ್ರಮಾಣವನ್ನು ಅಂದಾಜಿಸಬಹುದು. ಪರಿಸ್ಥಿತಿ ಹೇಗಿದೆ ಎಂದರೆ ಆಸ್ಪತ್ರೆಗಳಲ್ಲಿ ಸ್ಥಳಾವಕಾಶದ ಕೊರತೆ ಇದ್ದು, ರೋಗಿಗಳಿಗೆ ತಾತ್ಕಾಲಿಕವಾಗಿ ರಸ್ತೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜನತೆಗೆ ಬೆಲೆ ಏರಿಕೆಯ ಕೊಡುಗೆ

ಬೆಂಗಳೂರು, ಮಾ. ೩೧: ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಿದ್ದು, ಏಪ್ರಿಲ್ ೧ರಿಂದ ಸಾಕಷ್ಟು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಲಿದೆ. ರಾಜ್ಯದ ಜನತೆಗೆ ದರ ಏರಿಕೆ ಬೀಸಿ ತಟ್ಟಲಿದ್ದು, ನಂದಿನಿ ಹಾಲು, ಮೊಸರು ಹಾಗೂ ವಿದ್ಯುತ್ ದರ ದುಬಾರಿಯಾಗಲಿದೆ. ಇದರ ಜೊತೆಗೆ ಬಿಬಿಎಂಪಿ ಕಸ ಸಂಗ್ರಹಕ್ಕೂ ತೆರಿಗೆ ಸಂಗ್ರಹಿಸಲು ನಿರ್ಧರಿಸಿದ್ದು, ಕಸಕ್ಕೂ ಸೆಸ್ ಕಟ್ಟಬೇಕಾಗಿದೆ. ಅಂತೆಯೇ ಈಗಾಗಲೇ ಬಸ್ ಹಾಗೂ ಮೆಟ್ರೋ ದರ ದುಬಾರಿಯಾಗಿರುವ ಬೆನ್ನಲ್ಲೇ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ನಾಳೆಯಿಂದಲೇ ಆರ್ಥಿಕ ವರ್ಷ ಪ್ರಾರಂಭವಾಗಲಿದ್ದು ಗ್ರಾಹಕರು ಹೆಚ್ಚಿನ ಹಣ ತೆರಬೇಕಾಗಿದೆ.

ವಿದ್ಯುತ್ ದರ ಏರಿಕೆ : ಇಂಧನ ಇಲಾಖೆ ನೌಕರರ ಪಿಂಚಣಿ ಮತ್ತು ಗ್ರಾಜ್ಯೂಟಿ ನೀಡಲು ಪ್ರತಿ ಯೂನಿಟ್‌ಗೆ ೩೬ ಪೈಸೆ ಹೆಚ್ಚಳ ಮಾಡಿದೆ. ಈ ನೂತನ ದರ ಏರಿಕೆ ನಾಳೆಯಿಂದ ಜಾರಿಗೆ ಬರಲಿದ್ದು, ಏಪ್ರಿಲ್ ೧ ರಿಂದ ಜಾರಿಗೆ ಬರುವಂತೆ ವಿದ್ಯುತ್ ದರ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಏಇಖಅ) ಇಂದು ಆದೇಶ ಹೊರಡಿಸಿದೆ. ಕೆಇಆರ್‌ಸಿ ಹೊರಡಿಸಿರುವ ಆದೇಶದ ಪ್ರಕಾರ ಪ್ರತಿ ಯೂನಿಟ್‌ಗೆ ೩೬ ಪೈಸೆ ಹೆಚ್ಚಿಸಲಾಗಿದೆ. ಈ ವಿದ್ಯುತ್ ದರ ಏರಿಕೆಯು ಏಪ್ರಿಲ್ ೧ರಿಂದಲೇ ಜಾರಿಗೆ ಬರಲಿದೆ.

ಹಾಲು ದರ : ಮತ್ತೊಂದೆಡೆ ರೈತರಿಗೆ ಪ್ರೋತ್ಸಾಹ ಧನ ನೀಡಲು ಕೆಎಂಎಫ್ ನಂದಿನಿ ಹಾಲು, ಮೊಸರಿನ ಪ್ರತಿ ಲೀಟರ್ ದರದಲ್ಲಿ ೪ ರೂ. ಹೆಚ್ಚಿಸಿದೆ. ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ ೪ ರೂಪಾಯಿ ಹೆಚ್ಚಿಸಿ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ನಂದಿನಿ ಹಾಲಿನ ದರ ಹೆಚ್ಚಿಸಿ ಇನ್ನೂ ವರ್ಷವಾಗಿಲ್ಲ. ಆಗಲೇ ದರ ಏರಿಕೆಗೆ ಪ್ರಸ್ತಾಪ ಬಂದಿತ್ತು. ಇದೀಗ ಸಂಪುಟ ಸಭೆಯಲ್ಲಿ ಈ ಕುರಿತು ದರ ಏರಿಕೆಗೆ ನಿರ್ಧಾರ ಕೈಗೊಂಡಿದೆ.

ಕಸ ಸಂಗ್ರಹಕ್ಕೂ ಸೆಸ್ :ಇದೇ ವೇಳೆ ನಾಳೆಯಿಂದ ಬೆಂಗಳೂರಿನಲ್ಲಿ ಕಸ ಸಂಗ್ರಹಕ್ಕೂ ಚೆಸ್ ಬೀಳಲಿದ್ದು, ಬಿಬಿಎಂಪಿ ಕಸ ಸಂಗ್ರಹಕ್ಕೂ ತೆರಿಗೆ ಸಂಗ್ರಹಿಸಲು ನಿರ್ಧರಿಸಿದೆ. ೬೦೦ ಚದರಡಿಗೆ ೧೦ ರೂ. ೬೦೧ ರಿಂದ ೧೦೦೦ ರ ಚದರಡಿಗೆ ೫೦ ರೂ., ೧೦೦೧ - ೨೦೦೦ ಚದರಡಿಗೆ ೧೦೦ ರೂ. ೨೦೦೧ರಿಂದ ೩೦೦೦ ಚದರಡಿಗೆ ೧೫೦ ರೂ., ೩೦೦೧ ರಿಂದ ೪೦೦೦ ಚದರಡಿಗೆ ೨೦೦ ರೂ. ಹಾಗೂ ೪೦೦೦ ಚದರಡಿ ಮೇಲ್ಪಟ್ಟ ಮನೆ ಅಥವಾ ಕಟ್ಟಡಗಳಿಗೆ ೪೦೦ ರೂ. ಸೆಸ್ ವಿಧಿಸಲು ನಿರ್ಧರಿಸಲಾಗಿದೆ. ಅಂತೆಯೇ ವಾಣಿಜ್ಯ ಕಟ್ಟಡಕ್ಕೆ ೫೦೦ ರೂ. ಹಾಗೂ ೫೦ ಕೆಜಿ ವರೆಗೆ ೭ ಸಾವಿರ ರೂ. ಹಾಗೂ ಪ್ರತಿನಿತ್ಯ ೧೦೦ ಕೆಜಿವರೆಗೆ ೧೪ ಸಾವಿರ ಚೆಸ್ ಪಾವತಿ ಮಾಡಬೇಕಾಗುತ್ತದೆ.

ಮುದ್ರಾಂಕ ಶುಲ್ಕ ಮತ್ತು ನೀರಿನ ದರ : ಇದೇ ವೇಳೆ ನಾಳೆಯಿಂದ ಮುದ್ರಾಂಕ ಶುಲ್ಕವು ೫೦ ರೂ. ನಿಂದ ೫೦೦ ರೂ.ಗಳವರೆಗೆ ಹೆಚ್ಚಳವಾಗಲಿದೆ. ಅಫಿಡೆವಿಟ್ ಶುಲ್ಕ ೨೦ ರೂ.ನಿಂದ ೧೦೦ ರೂ.ರವರೆಗೆ ಏರಿಕೆಯಾಗಲಿದೆ. ಇದೇ ವೇಳೆ ನೀರಿನ ದರವೂ ೧ ಪೈಸೆ ಏರಿಕೆಯಾಗಿದ್ದು, ನಾಳೆಯಿಂದಲೇ ಜಾರಿಯಾಗುವ ಸಾಧ್ಯತೆಯಿದೆ.

ತಿಂಡಿತಿನಿಸುಗಳ ದರ ಏರಿಕೆ : ಇದೇ ವೇಳೆ ಹಾಲು ದರ ಹೆಚ್ಚಳವಾಗಿರುವುದರಿಂದ ಹೊಟೇಲ್‌ಗಳಲ್ಲಿ ಕಾಫಿ, ಟೀ ದರವೂ ಗಗನಕ್ಕೇರಲಿದೆ. ವಿದ್ಯುತ್ ದರ ೩೧ ಪೈಸೆ ಹೆಚ್ಚಳ ಮಾಡಿರುವುದರಿಂದ ಮಾಸಿಕ ಶುಲ್ಕ ೨೦ ರೂ. ಹೆಚ್ಚಳವಾಗಲಿದ್ದು, ಇದರಿಂದಾಗಿ ೧೨೦ ರೂ. ಇದ್ದ ನಿಗದಿತ ಶುಲ್ಕ ೧೪೦ ರೂ.ಗಳಿಗೆ ಹೆಚ್ಚಳವಾಗಲಿದೆ.

ವಾಹನ ಸವಾರರಿಗೂ ಶಾಕ್ : ಹೊಸವಾಹನ ಖರೀದಿಸಬೇಕು ಎಂದು ಕನಸು ಕಾಣುತ್ತಿರುವ ಗ್ರಾಹಕರಿಗೆ ಶಾಕ್ ನೀಡಿದ್ದು, ಉಕ್ಕು ಬಿಡಿ ಭಾಗ ದುಬಾರಿ ಇದರ ಜೊತೆಗೆ ಬಿಡಿ ಭಾಗ ಉಕ್ಕುಗಳ ಆಮದು ದರ ನಾಳೆಯಿಂದಲೇ ಏರಿಕೆಯಾಗುತ್ತದೆ. ಇದರಿಂದಾಗಿ ವಾಹನಗಳ ಬೆಲೆಯೂ ಗಗನಕ್ಕೇರಿದೆ ಎನ್ನಲಾಗಿದೆ.