ಮಡಿಕೇರಿ, ಮಾ. ೩೧: ಮುಸಲ್ಮಾನರ ಪವಿತ್ರ ಹಬ್ಬವಾಗಿರುವ ರಂಜಾನ್ ದಿನವಾದ ಇಂದು ನಾಪೋಕ್ಲುವಿನ ಆರ್‌ಟಿಐ ಕಾರ್ಯಕರ್ತನೆಂದು ಗುರುತಿಸಿಕೊಂಡಿರುವ ಹ್ಯಾರಿಸ್ ಎಂಬಾತ ವ್ಯಕ್ತಿಯೋರ್ವರ ಮೇಲೆ ಕಾರು ಚಲಾಯಿಸಿ ಕೊಲೆಗೆ ಯತ್ನಿಸಿರುವ ಘಟನೆಗೆ ಸಂಬAಧಿಸಿದAತೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ರಂಜಾನ್ ಹಬ್ಬದ ದಿನವಾದ ಇಂದು ಮುಸ್ಲಿಂ ಸಮುದಾಯದವರು ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಹೊರ ಬರುತ್ತಿದ್ದ ಸಂದರ್ಭದಲ್ಲಿ ಹ್ಯಾರಿಸ್ ತನ್ನ ಕಾರನ್ನು ಅದೇ ಗ್ರಾಮದ ಅಬ್ದುಲ್ ಅಜೀಜ್ ಎಂಬವರ ಮೇಲೆ ಚಲಾಯಿಸಿ ಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಅಜೀಜ್ ಪ್ರಾಣಾಪಾಯದಿಂದ ಪಾರಾಗಿದ್ದು, ಇದೀಗ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಘಟನೆ ನಡೆದ ಬಳಿಕ ನಾಪೋಕ್ಲುವಿನಲ್ಲಿ ನೆರೆದಿದ್ದ ಮುಸ್ಲಿಂ ಸಮುದಾಯದವರು ಪೊಲೀಸ್ ಠಾಣೆಗೆ ತೆರಳಿ ಹ್ಯಾರಿಸ್‌ನ ವಿರುದ್ಧ ಮೊಕದ್ದಮೆ ದಾಖಲಿಸಿ ಬಂಧಿಸುವAತೆ ಆಗ್ರಹಿಸಿದ್ದಾರೆ. ಇದೀಗ ಹ್ಯಾರಿಸ್ ವಿರುದ್ಧ ಕೊಲೆಯತ್ನ ಪ್ರಕರಣದಡಿ ಸೆಕ್ಷನ್ ೩೦೭ ರಂತೆ ಮೊಕದ್ದಮೆ ದಾಖಲಾಗಿದೆ. ಹ್ಯಾರಿಸ್ ವಿರುದ್ಧ ಠಾಣೆಯಲ್ಲಿ ಹಲವಾರು ದೂರು - ಮೊಕದ್ದಮೆಗಳಿದ್ದು, ಆರೋಪಿ ತಲೆಮರೆಸಿಕೊಂಡಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.