ಮಡಿಕೇರಿ, ಏ. ೧: ಶನಿವಾರಸಂತೆಯ ಶ್ರೀ ತಪೋಕ್ಷೇತ್ರ ಮನೆಹಳ್ಳಿಯ ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ತಾ. ೧೨ ರಿಂದ ೧೪ ರವರೆಗೆ ನೆರವೇರಲಿದೆ.

ತಾ. ೧೨ ರಂದು ಬೆಳಿಗ್ಗೆ ೮ ಗಂಟೆಗೆ ಧ್ವಜಾರೋಹಣ, ಸಂಜೆ ೬.೩೦ಕ್ಕೆ ಶ್ರೀ ಸ್ವಾಮಿಯವರಿಗೆ ಕಂಕಣ ಧಾರಣೆ, ಮಹಾಮಂಗಳಾರತಿ, ೭ ಗಂಟೆಗೆ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿಗೆ ಸೂರ್ಯ ಮಂಡಲೋತ್ಸವ ನೆರವೇರಲಿದೆ.

ತಾ. ೧೩ ರಂದು ಬೆಳಿಗ್ಗೆ ೮ ಗಂಟೆಗೆ ಶ್ರೀ ಮದನಾಧಿ ಅನಘ ನಿರಂಜನ ಜಂಗಮ ಪೂಜೆ, ಸಂಜೆ ೬.೩೦ಕ್ಕೆ ಶ್ರೀ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ, ರಾತ್ರಿ ೮.೩೦ಕ್ಕೆ ದಾಸೋಹ ನಡೆಯಲಿದೆ.

ತಾ. ೧೪ ರಂದು ಬೆಳಿಗ್ಗೆ ೫ ಗಂಟೆಗೆ ಶ್ರೀ ಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಯವರ ಪ್ರೀತ್ಯರ್ಥ ದುಗ್ಗಳ ಹಾಗೂ ಅಗ್ನಿಕೊಂಡೋತ್ಸವ ಸೇವೆ, ಬೆಳಿಗ್ಗೆ ೬ ಗಂಟೆಗೆ ವಟುಗಳಿಗೆ ಲಿಂಗಧೀಕ್ಷಾ ಕಾರ್ಯಕ್ರಮವಿದೆ. ಬೆಳಿಗ್ಗೆ ೭ ಗಂಟೆಗೆ ಶ್ರೀ ಸ್ವಾಮಿಯವರ ಸಣ್ಣ ಚಂದ್ರಮAಡಲೋತ್ಸವ, ಪೂರ್ವಾಹ್ನ ೧೧ ಗಂಟೆಗೆ ಶ್ರೀ ಪ್ರಸನ್ನ ತಪೋವನೇಶ್ವರಿ ಅಮ್ಮನವರ ಪ್ರೀತ್ಯರ್ಥ ಮುತ್ತೆöÊದೆ ಸೇವೆ ನೆರವೇರಲಿದೆ. ಅಪರಾಹ್ನ ೧೨ ಗಂಟೆಗೆ ದಾಸೋಹ ಸೇವೆ ನೆರವೇರಲಿದ್ದು, ಸಂಜೆ ೫.೩೦ ಗಂಟೆಗೆ ಶ್ರೀ ಸ್ವಾಮಿಯವರ ಪ್ರಾಕಾರ ಪಲ್ಲಕ್ಕಿ ಉತ್ಸವದೊಂದಿಗೆ ಶ್ರೀ ಸ್ವಾಮಿಯವರು ರಥೋತ್ಸವಕ್ಕೆ ಭಿಜಯಂಗೈವುದು, ಸಂಜೆ ೬.೩೦ಕ್ಕೆ ಶ್ರೀ ಸ್ವಾಮಿಯವರ ಮಹಾರಥೋತ್ಸವ, ಸಂಜೆ ೮ ಗಂಟೆಗೆ ಶ್ರೀ ವೃಷಭಲಿಂಗೇಶ್ವರ ಸ್ವಾಮಿಯವರ ಸನ್ನಿದಾನದಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.