ಬಾಳೆಲೆ, ಏ. ೧: ನಿಟ್ಟೂರು ಕಾರ್ಮಾಡು ಗ್ರಾಮ ಪಂಚಾಯತ್ ಸಮೀಪ ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಕೊಡಗು ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ವತಿಯಿಂದ ಗುತ್ತಿಗೆದಾರರು ಟೆಂಡರ್ ಅವದಿ ಮುಗಿದಿದ್ದರೂ ಕೆಲಸ ಪೂರ್ಣಗೊಳಿಸದೆ ಜನರಿಗೆ ಯಾವುದೇ ಉಪಯೋಗ ವಾಗದೆ ಕಾಮಗಾರಿ ಕಳಪೆಯಾಗಿದೆ ಈ ಟ್ಯಾಂಕ್ ಕುಸಿಯುವ ಸಾಧ್ಯತೆಗಳಿವೆಯೆಂದು ನಿಟ್ಟೂರು ಗ್ರಾಮ ಪಂಚಾಯಿತಿ ಅಡಳಿತ ಜಿಲ್ಲಾಡಳಿತದ ಗಮನ ಸೆಳೆದು ಇತ್ತೀಚೆಗೆ ‘ಶಕ್ತಿ’ ಯಲ್ಲಿ ವರದಿ ಪ್ರಕಟಗೊಂಡಿತ್ತು.