ಮಡಿಕೇರಿ, ಮಾ. ೩೧: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪೊನ್ನಂಪೇಟೆ ಸಿರಿಧಾನ್ಯಗಳ ಮೌಲ್ಯವರ್ದಿತ ಉತ್ಪನ್ನಗಳ ಬೇಕರಿ ತರಬೇತಿ ಘಟಕ ಹಾಗೂ ಕೊಡಗು ಕೃಷಿ ಔದ್ಯೋಗಿಕ ಕೇಂದ್ರ ಸಿರಿಧಾನ್ಯಗಳ ಆಧಾರಿತ ಉತ್ಪನ್ನಗಳ ಅಭಿವೃದ್ಧಿ ಮತ್ತು ಮಾರುಕಟ್ಟೆ ಕುರಿತು ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದರಂತೆ ತಾ. ೨೬ ರಂದು ಹೆಚ್.ಡಿ. ಕೋಟೆಯಲ್ಲಿ ಪ್ರಕೃತಿ ಸಿರಿಧಾನ್ಯಗಳ ಆಧಾರಿತ ಉಪಹಾರ ಗೃಹವನ್ನು ವಿವೇಕಾನಂದ ಯೂತ್ ಮುಮೆಂಟ್ ವತಿಯಿಂದ ಮಹಿಳೆಯರು ಸ್ಥಾಪಿಸುತ್ತಿದ್ದಾರೆ. ಸಿರಿಧಾನ್ಯಗಳ ಆಧಾರಿತ ಉತ್ಪನ್ನಗಳ ಅಭಿವೃದ್ಧಿ ಮತ್ತು ಮಾರುಕಟ್ಟೆಯ ಕುರಿತು ತರಬೇತಿಯನ್ನು ಪಡೆದು ಆ ತರಬೇತಿಯಲ್ಲಿ ಸಿರಿಧಾನ್ಯಗಳ ಉಪಯೋಗ ಆರೋಗ್ಯದ ಮಹತ್ವದ ಕುರಿತು ತಿಳಿದುಕೊಂಡು ಮತ್ತು ಸಿರಿಧಾನ್ಯಗಳಿಂದ ಹಲವು ಬಗೆಯ ಆಹಾರ ಪದಾರ್ಥಗಳ ಪ್ರಾತ್ಯಕ್ಷಿತೆಯನ್ನು ನೋಡಿ ಕಲಿತು ಮಹಿಳೆಯರು ಸಿರಿಧಾನ್ಯ ಆಧಾರಿತ ಉಪಹಾರ ಗೃಹವನ್ನು ನಡೆಸುತ್ತಿದ್ದಾರೆ. ಈ ಸಿರಿಧಾನ್ಯಗಳ ಮಹತ್ವ ಹಾಗೂ ಪ್ರಾತ್ಯಕ್ಷಿತೆಯಲ್ಲಿ ಡಾ. ಲಕ್ಷಿö್ಮ ಬಳಗಾನೂರ ಅವರು ಮಹಿಳೆಯರಿಗೆ ಸಲಹೆ-ಸೂಚನೆಗಳನ್ನು ನೀಡಿದರು. ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಪ್ರಾಂಶುಪಾಲ ಡಾ. ಜಿ.ಎಂ. ದೇವಗಿರಿ ಅವರ ಮಾರ್ಗದರ್ಶನದಿಂದ ಯಶಸ್ವಿಯಾಗಿದ್ದ ಕಾರ್ಯಾಗಾರವು ಪ್ರಸ್ತುತ ಉಪಹಾರ ಗೃಹ ಉದ್ಘಾಟನಾ ಹಂತಕ್ಕೆ ಬಂದಿದೆ.