ಸಿದ್ದಾಪುರ, ಮಾ. ೩೧: ಬಾಡಗ ಬಾಣಂಗಾಲ ಗ್ರಾಮದ ಮಠದ ಶ್ರೀ ಮುತ್ತಪ್ಪ ದೇವಾಲಯದ ೪೪ನೇ ವರ್ಷದ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮಗಳು ಹಾಗೂ ತೆರೆ ಮಹೋತ್ಸವ ಏಪ್ರಿಲ್ ೪ ಹಾಗೂ ೫ ರಂದು ನಡೆಯಲಿದೆ ಎಂದು ಶ್ರೀ ಮುತ್ತಪ್ಪ ದೇವಾಲಯದ ಅಧ್ಯಕ್ಷ ಮನೋಹರ್ ತಿಳಿಸಿದ್ದಾರೆ.

ಏ. ೪ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ೮ ಗಂಟೆಗೆ ಧ್ವಜಾರೋಹಣ, ಅಪರಾಹ್ನ ೨ ಗಂಟೆಗೆ ಶ್ರೀ ಮುತ್ತಪ್ಪನ ಮಲೆ ಇಳಿಸುವುದು, ಸಂಜೆ ೫ ಗಂಟೆಗೆ ಶ್ರೀ ಮುತ್ತಪ್ಪನ ವೆಳ್ಳಾಟ್ಟಂ, ರಾತ್ರಿ ೭ ಗಂಟೆಗೆ ಕುಟ್ಟಿಚಾತನ ವೆಳ್ಳಾಟ್ಟಂ, ರಾತ್ರಿ ೮ ಗಂಟೆಗೆ ಕಂಡ ಕರ್ಣನ ವೆಳ್ಳಾಟ್ಟಂ, ರಾತ್ರಿ ೯ ಗಂಟೆಗೆ ಅನ್ನಸಂತರ್ಪಣೆ, ೧೦ ಗಂಟೆಗೆ ಗುಳಿಗನ ವೆಳ್ಳಾಟ್ಟಂ, ರಾತ್ರಿ ೧೧ ಗಂಟೆಗೆ ೨ ವಸೂರಿ ಮಾಲಗಳು, ವೆಳ್ಳಾಟ್ಟಂ ನಡೆಯಲಿದೆ. ಏ. ೫ ರಂದು ಪ್ರಾತಃಕಾಲ ೨ ಗಂಟೆಗೆ ಪೊಟ್ಟನ ಅಗ್ನಿಪೂಜೆ, ೩ಕ್ಕೆ ಗುಳಿಗನ ತೆರೆ, ೪ ಗಂಟೆಗೆ ತಿರುವಪ್ಪನ ತೆರೆ, ೫ ಗಂಟೆ ಕಂಡ ಕರ್ಣನ ತೆರೆ, ಬೆಳಿಗ್ಗೆ ೬ ಗಂಟೆಗೆ ಕುಟ್ಟಿಚಾತನ ತೆರೆ, ೭ ಗಂಟೆಗೆ ವಸೂರಿಮಾಲ ಎರಡೂ ತೆರೆ ೮ ಗಂಟೆಗೆ ಪೊಟ್ಟನ ತೆರೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.