ಕೂಡಿಗೆ, ಮಾ. ೩೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿ ರುವ ಹರಕೆ ಚೌಡೇಶ್ವರಿ ದೇವಿ ಮತ್ತು ನಾಗ ದೇವರ ವಾರ್ಷಿಕ ಪೂಜೋತ್ಸವ ಶ್ರದ್ಧಾಭಕ್ತಿ ಯಿಂದ ನೆರವೇರಿತು.

ಪೂಜೋತ್ಸವ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ದುರ್ಗಾ ಹೋಮ, ಕಲಾವೃದ್ಧಿ ಹೋಮ, ಅಭಿಷೇಕ, ಕಳಸ ಪ್ರತಿಷ್ಠೆ ಹಾಗೂ ದೇವಿಗೆ ವಿವಿಧ ಅಭಿಷೇಕ, ಮಹಾಮಂಗಳಾರತಿ, ಪೂಜಾ ಕೈಂಕರ್ಯಗಳು ನಡೆದಲ್ಲಿ ಕೊಪ್ಪದ ಗಣಪತಿ ಭಟ್ಟ, ದೇವಾಲಯ ಅರ್ಚಕ ಚಂದ್ರು ಮುರುಳಿ ನೇತೃತ್ವದಲ್ಲಿ ಪೂಜಾಕೈಂಕರ್ಯ ನಡೆಯಿತು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ನಂತರ ಅನ್ನಸಂರ್ತಪಣೆ ನಡೆಯಿತು. ಕೂಡಿಗೆ, ಕೂಡುಮಂಗಳೂರು, ಮದಲಾಪುರ, ಸೀಗೆಹೊಸೂರು, ಹುದುಗೂರು, ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು.

ಸಂಜೆ ದೇವಸ್ಥಾನದ ಆವರಣದಲ್ಲಿ ದೀಪಾಲಂಕಾರ, ಸೇರಿದಂತೆ ನಾಗದೇವರಿಗೆ ಪೂಜಾ ಕೈಂಕರ್ಯಗಳು ಜರುಗಲಿದೆ. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಸಿ. ರವಿ, ಕಾರ್ಯದರ್ಶಿ ಪ್ರವೀಣ್, ಸಮಿತಿ ನಿರ್ದೇಶಕರಾದ ಕೆ.ಸಿ. ಶಿವಮೂರ್ತಿ, ಅರುಣ್ ಕುಮಾರ್ ಪ್ರಸನ್ನ, ರಘು, ರಾಜು, ಜಯಣ್ಣ, ವಿಶ್ವನಾಥ, ರಮೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.