ಶನಿವಾರಸAತೆ, ಏ. ೧: ಪಟ್ಟಣದ ಶ್ರೀರಾಮ ಮಂದಿರದಲ್ಲಿ ಕುರುಹಿನಶೆಟ್ಟಿ ಸಮಾಜದ ವತಿಯಿಂದ ನಡೆಯುವ ಶ್ರೀರಾಮೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಶ್ರೀಸೀತಾ, ಲಕ್ಷö್ಮಣ, ಆಂಜನೇಯ ಸಹಿತ ಶ್ರೀರಾಮ ದೇವರ ಮೂರ್ತಿಗೆ ಮೊದಲ ದಿನದ ಹರಿದ್ರಾ ಅಲಂಕಾರ ಮಾಡಿ, ಹಳದಿ ವಸ್ತçವನ್ನು ತೊಡಿಸಿ, ಹೂವುಗಳಿಂದ ಸಿಂಗರಿಸಿ ಪೂಜಿಸಲಾಯಿತು. ಅರ್ಚನೆ, ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗವಾಯಿತು. ಅರ್ಚಕ ಸುಹಾಸ್ ಭಟ್ ಪೂಜಾ ವಿಧಿ ನೆರವೇರಿಸಿದರು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಕುರುಹಿನಶೆಟ್ಟಿ ಸಮಾಜ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.