ಮಡಿಕೇರಿ, ಮಾ. ೩೧: ಮುಸಲ್ಮಾನ ಸಮುದಾಯದ ಪವಿತ್ರ ಹಬ್ಬವಾಗಿರುವ ರಂಜಾನ್ ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯದವರು ಸಂಭ್ರಮದಿAದ ಆಚರಿಸಿದರು. ಬೆಳಿಗ್ಗೆ ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ವಿಶೇಷ ಪ್ರಾರ್ಥನೆ ನಮಾಜ್ ನೆರವೇರಿಸಿದರು.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜಾಮೀಯಾ ಮಸೀದಿ ಹಾಗೂ ಬದ್ರಿಯಾ ಮಸೀದಿ ನೇತೃತ್ವದಲ್ಲಿ ನಗರದಲ್ಲಿ ರಂಜಾನ್ ಮೆರವಣಿಗೆ ನಡೆಯಿತು.
ಬದ್ರಿಯಾ ಮಸೀದಿಯಿಂದ ಆರಂಭವಾದ ಮೆರವಣಿಗೆ ಮಹದೇವಪೇಟೆ ಜಾಮೀಯಾ ಮಸೀದಿ ಮೂಲಕ ಈದ್ಗಾ ಮೈದಾನಕ್ಕೆ ತಲುಪಿತು. ಈದ್ಗಾ ಮೈದಾನದಲ್ಲಿ ಜಾಮೀಯಾ ಮಸೀದಿಯ ಧರ್ಮಗುರು ಮೌ. ನಸೀಮ್ ಅಕ್ತರ್ ಅವರ ನೇತೃತ್ವದಲ್ಲಿ ನಮಾಜ್ ನೆರವೇರಿತು. ಮೆರವಣಿಗೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಲಾಯಿತು.
ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಮುಸ್ಲಿಂ ಸಮುದಾಯ ದವರು ಪವಿತ್ರ ರಂಜಾನ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.
ಹೊಸಬಟ್ಟೆಗಳನ್ನು ತೊಟ್ಟು, ಪ್ರಾರ್ಥನಾ ಮಂದಿರಕ್ಕೆ ತೆರಳಿ ದಿನದ ಅಂಗವಾಗಿ ವಿಶೇಷ ಪ್ರಾರ್ಥನೆ ಮಾಡಿದರು. ನಂತರ ಖಬರಸ್ತಾನಕ್ಕೆ ತೆರಳಿ ಅಗಲಿದ ಆತ್ಮಗಳಿಗೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ಜಲಾಲಿಯಾ ಮಸೀದಿ, ಬಜೆಗುಂಡಿಯ ಖಿಳಾರಿಯಾ ಮಸೀದಿ, ತಣ್ಣೀರುಹಳ್ಳ, ಕಲ್ಕಂದೂರು, ಕಾಗಡಿಕಟ್ಟೆ, ಹೊಸತೋಟದ ಮಸೀದಿಗಳಲ್ಲಿ ದಿನದ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಯಿತು.
ಬಜೆಗುಂಡಿಯ ಖಿಳಾರಿಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಸೀದಿಯ
(ಮೊದಲ ಪುಟದಿಂದ) ಇಮಾಮ್ ಉಬೈದ್ ಫೈಝಿ ಪ್ರಾರ್ಥನೆಯ ನೇತೃತ್ವ ವಹಿಸಿ ರಂಜಾನ್ ಸಂದೇಶ ನೀಡಿದರು.
ಪ್ರಾರ್ಥನೆ ನಂತರ ಪರಸ್ಪರ ಆಲಿಂಗನ ಮಾಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಜಮಾಅತ್ ಅಧ್ಯಕ್ಷ ಕೆ.ಎ. ಯಾಕೂಬ್, ಕಾರ್ಯದರ್ಶಿ ಸುಲೈಮಾನ್, ಸದಸ್ಯರಾದ ಹನೀಫ್, ನಿಯಾಜ್, ಅಬ್ದುಲ್ ರಜಾಕ್, ಅಬ್ಬಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೊಸತೋಟದ ಬಟಕನಹಳ್ಳಿ ಜಾಮಿಯಾ ಮಸೀದಿಯಲ್ಲಿ ನಡೆದ ಹಬ್ಬಾಚರಣೆಯಲ್ಲಿ ಮಸೀದಿಯ ಖತೀಬರಾದ ಶಾಜಹಾನ್ ಸಖಾಫಿ ಮಾತನಾಡಿ, ಯುವಕರು ಸಮಾಜದ ಒಳಿತಿಗೆ ಮುಂದಡಿಯಿಡಬೇಕು. ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ಕೈಲಾದ ಸಹಾಯ ಮಾಡಬೇಕು ಎಂದರು.
ಇAದು ಸಮಾಜದಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿದ್ದು, ಇಂತಹ ಚಟಗಳಿಂದ ಯುವ ಜನಾಂಗ ದೂರವಿದ್ದು, ಆರೋಗ್ಯಯುತ ಹಾಗೂ ಮಾದಕ ವಸ್ತು ಮುಕ್ತ ಜೀವನ ನಡೆಸಬೇಕು. ಆ ಮೂಲಕ ಸ್ವಾಸ್ಥö್ಯ ಸಮಾಜ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಮಸೀದಿಯ ಪ್ರಮುಖರಾದ ಅಶ್ರಫ್ ಝೈನಿ, ಸಲಾಂ ಮದನಿ, ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಟ್ಟಿ, ಕಾರ್ಯದರ್ಶಿ ಸಲೀಂ ಹೊಸತೋಟ, ಖಾಲೀದ್, ಶಿಹಾಬ್, ಕೋಯ, ಉನೈಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಡಿಕೇರಿ : ಮಡಿಕೇರಿಯ ಸಿ.ಪಿ.ಸಿ ಲೇಔಟ್‌ನ ಮಸ್ಜಿದ್ ಉರ್ ರ್ರಹ್ಮಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮ್ಮರ್ ಮೌಲವಿ ಮಾತನಾಡಿ ಕಳೆದ ಒಂದು ತಿಂಗಳಿನಿAದ ರಂಜಾನ್ ಉಪವಾಸ ವ್ರತದಿಂದ ಲಭಿಸಿದ ತರಬೇತಿ, ದೇವ ಭಯ ಹಾಗೂ ಅಧ್ಯಾತ್ಮಿಕತೆಯನ್ನು ಮುಂದೆಯೂ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು. ನಾವು ಅನುಭವಿಸುತ್ತಿರುವ ಸುಖ ಸೌಕರ್ಯಗಳು, ಆಸ್ತಿ-ಅಂತಸ್ತು ಹಾಗೂ ಸಂಪತ್ತು ಆ ದೇವನ ಅನುಗ್ರಹವಾಗಿದೆ.
ಇಂದು ಸಮಾಜಕ್ಕೆ ಮಾರಕವಾಗಿ ಪರಿಣಮಿಸಿರುವ ಮಾದಕ ವ್ಯಸನದ ವಿರುದ್ಧ ಜಾತಿ ಮತ ಬೇಧವಿಲ್ಲದೇ ಒಂದಾಗಿ ಹೋರಾಡಬೇಕು ಎಂದು ಕರೆ ನೀಡಿದರು. ಈ ಸಂದರ್ಭ ಕ್ರೆಸೆಂಟ್ ಶಾಲಾ ಕಾರ್ಯದರ್ಶಿ ಜಿ.ಹೆಚ್.ಮೊಹಮ್ಮದ್ ಹನೀಫ್, ತನಲ್ ಆಶ್ರಮದ ಅಧ್ಯಕ್ಷ, ಎಂ. ಹೆಚ್. ಮೊಹಮ್ಮದ್, ನಗರಸಭಾ ಮಾಜಿ ಸದಸ್ಯ ಮುನೀರ್ ಅಹಮದ್, ಶಾಹಿನ್ ಶಿಕ್ಷಣ ಸಂಸ್ಥೆಯ ಸಿ.ಇ.ಓ ತೌಶೀಫ್ ಮಡಿಕೇರಿ ಹಾಗೂ ಪತ್ರಕರ್ತ ಅಬ್ದುಲ್ಲಾ ಹಾಜರಿದ್ದರು. ವೀರಾಜಪೇಟೆ: ವೀರಾಜಪೇಟೆ ನಗರದ ಮುಖ್ಯ ರಸ್ತೆಯ ಶಾಫಿ ಜುಮಾ ಮಸೀದಿಯಲ್ಲಿ ಮೌ. ಹ್ಯಾರಿಸ್ ಬಾಖವಿ, ಖಾಸಗಿ ಬಸ್ ನಿಲ್ದಾಣದ ಶಾದುಲಿ ಜುಮಾ ಮಸೀದಿಯಲ್ಲಿ ಮೌ. ಶುಹೈಬ್ ಫೈಝಿ, ಗಡಿಯಾರ ಕಂಬ ಸಮೀಪದ ಮುರುಡೇಶ್ವರ್ ನವಾಯತ್ ಬಾದ್‌ಷಾ ಮಸೀದಿಯಲ್ಲಿ ಮೌ.ಮಖ್ಸೂದ್ ಅಹಮದ್, ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಮೌ. ಮುತಲಿಬ್ ಅನ್ವರಿ, ಅಪ್ಪಯ್ಯಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಮೌ. ಗುಲ್‌ಷದ್ ಅಹಮದ್, ಬಂಗಾಳಿ ಬೀದಿಯ ಮಸ್ಜಿದ್-ಎ-ಅಝಂನಲ್ಲಿ ಮೌ. ಹಸೀಬ್ ಶರೀಫ್, ಹುಂಡಿ ಮಸ್ಜಿದ್ ರಹ್ಮಾದಲ್ಲಿ ಅಬೂಬಕರ್ ಕಾರಕುನ್ನ್, ಪ್ರವಚನ ಹಾಗೂ ನಮಾಜ್‌ಗೆ ನೇತೃತ್ವ ವಹಿಸಿದ್ದರು.
ವೀರಾಜಪೇಟೆ ಗೋಣಿಕೊಪ್ಪ ರಸ್ತೆ ವಿದ್ಯಾನಗರ ಬ್ರೆöÊಟ್ ಕ್ಯಾಂಪಸ್ ಈದ್ಗಾದಲ್ಲಿ ಮೌ. ಅಬ್ದುಲ್ ಜಲೀಲ್ ಹಿಶಾಮಿ, ಮಲಬಾರ್ ರಸ್ತೆಯ ಸಲಫಿ ಈದ್‌ಗಾಹ್‌ನಲ್ಲಿ ನಜಾತಿ ಅಲ್ ಹಿಕಮಿ, ಸುಣ್ಣದಬೀದಿಯ ಮದೀನಾ ಈದ್ಗಾದÀಲ್ಲಿ ಮೌ. ಮುಝಮ್ಮಿಲ್ , ಗೋಣಿಕೊಪ್ಪ ಪೊನ್ನಂಪೇಟೆ ರಸ್ತೆಯ ಮಸ್ಜಿದ್-ಎ-ಹಿದಾಯ ಈದ್ಗಾದÀಲ್ಲ್ಲಿ ಮೌ. ಮುಹಮ್ಮದ್ ಸಗೀರ್ ಅಝ್‌ಹರಿ, ಸಿದ್ದಾಪುರದ ಮಾರ್ಕಟ್ ರಸ್ತೆಯ ಹಿರಾ ಈದ್ಗಾದÀಲ್ಲ್ಲಿ ಮೌ. ಅಮೀನ್ ಕೌಸರಿಯವರ ನೇತೃತ್ವದಲ್ಲಿ ನಮಾಜ್ ಹಾಗೂ ವಿಶೇಷ ಈದ್ ಪ್ರವಚನ ನಡೆಯಿತು.
ಕುಶಾಲನಗರ: ಕುಶಾಲನಗರ ಜಾಮಿಯಾ ಮಸೀದಿ, ಜನತಾ ಕಾಲೋನಿ ದಂಡಿನಪೇಟೆ ಮತ್ತು ರಸುಲ್ ಬಡಾವಣೆಗಳ ಮಸೀದಿಗಳಲ್ಲಿ ರಂಜಾನ್ ಪ್ರಯುಕ್ತ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ನೆರವೇರಿಸಿದರು. ಬಳಿಕ ಮಡಿಕೇರಿ ರಸ್ತೆಯ ಗಂಧದ ಕೋಟೆ ಬಳಿ ಇರುವ ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಜಾಮಿಯಾ ಮಸೀದಿ ಧರ್ಮ ಗುರುಗಳಾದ ಇಮಾಮ್ ರಶೀದ್ ಅಹಮದ್ ಅವರುಗಳು ಧಾರ್ಮಿಕ ಪ್ರವಚನ ನೀಡಿದರು. ಈ ಸಂದರ್ಭ ವಕ್ಫ್ ಬೋರ್ಡ್ ಸಂಬAಧ ಕೇಂದ್ರ ಸರ್ಕಾರ ತಂದಿರುವ ಮಸೂದೆ ವಿರೋಧಿಸಿ ಬಹುತೇಕರು ಕಪ್ಪುಪಟ್ಟಿ ಧರಿಸಿ ವಿರೋಧ ವ್ಯಕ್ತಪಡಿಸುವುದರ ಜೊತೆಗೆ ಪ್ರಾರ್ಥನೆ ಸಲ್ಲಿಸಿದರು.
ಕುಶಾಲನಗರ ಹಿಲಾಲ್ ಮಸೀದಿ ಮತ್ತು ತಕ್ವಾ ಮಸೀದಿಗಳಲ್ಲಿ ಅಲ್ಲಿನ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.ಚೆಯ್ಯAಡಾಣೆ: ಎಡಪಾಲದಲ್ಲಿ ಸಂಭ್ರಮ- ಸಡಗರದಿಂದ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಯಿತು. ಎಡಪಾಲ ಜುಮಾ ಮಸೀದಿಯಲ್ಲಿ ಈದ್ ನಮಾಜ್‌ಗೆ ಮುದರ್ರಿಸ್ ಶೈಖುನಾ ನಿಝಾರ್ ಫೈಝಿ ನೇತೃತ್ವ ವಹಿಸಿದರು. ಪ್ರಾರ್ಥನೆಗೆ ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಎಂ.ಎA. ಅಬ್ದುಲ್ಲ ಫೈಝಿ ನೇತೃತ್ವ ವಹಿಸಿದ್ದರು.
ನಂತರ ಅಂಡತ್‌ಮಾನಿ ದರ್ಗಾಕ್ಕೆ ತೆರಳಿ ಝಿಯಾರತ್ ನಡೆಸಿ ಶಾಂತಿ, ನೆಮ್ಮದಿ, ಸೌಹಾರ್ದತೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಪೊಯಾಪಳ್ಳಿ ಜಮಾಅತ್ ಅಧ್ಯಕ್ಷ ಬಷೀರ್ ಕೆ.ಎ., ಪ್ರಧಾನ ಕಾರ್ಯದರ್ಶಿ ಶರೀಫ್ ಝೃನಿ, ಕೋಶಾಧಿಕಾರಿ ಮೊಹಮ್ಮದ್, ಜಮಾಅತ್ ಪದಾಧಿಕಾರಿಗಳು ಮತ್ತಿತರರು ಇದ್ದರು.ಚೆಟ್ಟಳ್ಳಿ: ಮನುಷ್ಯನ ಮನಸ್ಸು ಶುದ್ದೀಕರಣಗೊಂಡಲ್ಲಿ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಕಂಡಕರೆ ಮಹಲ್ ಖತೀಬರಾದ ಮುಸ್ತಫಾ ಸಖಾಫಿ ಅಭಿಪ್ರಾಯಪಟ್ಟರು.
ಮುಸ್ಲಿಮ್ ಬಾಂಧವರ ಈದುಲ್ ಫಿತ್ರ್ ಹಬ್ಬದ ಈದ್ ನಮಾಝ್ ನೇತೃತ್ವ ವಹಿಸಿ ಕಂಡಕರೆ ಮಸ್ಜಿದ್ ತಖ್ವಾದಲ್ಲಿ ಮಾತನಾಡಿದ ಅವರು, ಮನಸ್ಸಿನಲ್ಲಿ ದ್ವೇಷ, ಅಸೂಯೆ ಇರಿಸಿಕೊಂಡು ಜೀವನ ನಡೆಸಬಾರದು ಎಂದರು.
ಈದುಲ್ ಫಿತ್ರ್ ನಮಾಜಿನ ಬಳಿಕ ಕಂಡಕರೆ ಖಬರ್ ಸ್ಥಾನದಲ್ಲಿ ಮರಣ ಹೊಂದಿದವರಿಗೆ ವಿಶೇಷ ಪಾರ್ಥನೆ ನೆರವೇರಿಸಲಾಯಿತು. ಈ ಸಂದರ್ಭ ಮಹಮ್ಮದ್ ಮುಸ್ಲಿಯಾರ್, ಕಂಡಕರೆ ಮಹಲ್ ಅಧ್ಯಕ್ಷ ಅಲಿ ಮುಸ್ಲಿಯಾರ್ ಹಾಜಿ, ಉಪಾಧ್ಯಕ್ಷ ಕೆ.ಎ ಹುಸೈನ್, ಪ್ರಧಾನಕಾರ್ಯದರ್ಶಿ ಸರ್ಫುದ್ದೀನ್, ಸಹ ಕಾರ್ಯದರ್ಶಿ ಪಿ.ಎಂ ಗಫೂರ್ ಮತ್ತಿತರರು ಇದ್ದರು.ಕಣಿವೆ : ಕೂಡಿಗೆಯ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಮುಸಲ್ಮಾನ ಸಮುದಾಯದವರು ರಂಜಾನ್ ಆಚರಿಸಿದರು. ಹೊಸ ಬಟ್ಟೆಗಳನ್ನು ತೊಟ್ಟು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಮಸೀದಿ ಅಧ್ಯಕ್ಷ ಎಂ.ಇ.ಯೂಸುಫ್, ಉಪಾಧ್ಯಕ್ಷ ಟಿ.ಪಿ.ನೌಫಲ್, ಪ್ರಧಾನ ಕಾರ್ಯದರ್ಶಿ ಕೆ.ಇ.ಮಹಮದಾಲಿ, ಖಜಾಂಚಿ ಅಬ್ದುಲ್ ಸಲಾಂ ಸೇರಿದಂತೆ ಸಮಿತಿಯ ಪದಾಧಿಕಾರಿಗಳಿದ್ದರು.
ಗೋಣಿಕೊಪ್ಪಲು: ಗೋಣಿಕೊಪ್ಪಲುವಿನಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಸಮದಾಯದವರು ಆಚರಣೆ ಮಾಡಿದರು. ನಗರದ ಚೈತನ್ಯ ಟ್ರಸ್ಟ್ ಬಳಿಯ ಇದಾಯಿತ್ ಸೆಂಟರ್‌ನ ಮಸ್ಜಿದ್‌ನ ಈದ್ಗಾಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಹಿಳೆಯರು ಕೂಡ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಮುಖರಾದ ಸಕೀರ್ ವಾಲಿ ಅವರು ರಂಜಾನ್ ಬಗ್ಗೆ ಪ್ರವಚನ ನೀಡಿದರು. ನಂತರ ಪರಸ್ಪರ ಆಲಿಂಗನದ ಮೂಲಕ ರಂಜಾನ್ ಶುಭಾಶಯ ವಿನಿಮಯ ಮಾಡಿದರು. ಇದಾಯಿತ್ ಸೆಂಟರ್‌ನ ಮಸ್ಜಿದ್‌ನ ಪ್ರಮುಖರಾದ ತನ್ವೀರ್ ಅಹಮದ್, ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.ಶನಿವಾರಸಂತೆ: ಪಟ್ಟಣದ ಮುಖ್ಯರಸ್ತೆಯಲ್ಲಿರುವ ಜಾಮೀಯ ಮಸೀದಿಯಲ್ಲಿ ತ್ಯಾಗರಾಜ ಕಾಲೋನಿಯ ಈದ್ಗಾ ಹಾಗೂ ಗುಂಡೂರಾವ್ ಬಡಾವಣೆಯ ಮದೀನಾ ಮಸೀದಿಯಲ್ಲಿ ಮುಸ್ಲಿಂ ಸಮುದಾಯದವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಂತರ ಸಮುದಾಯದ ೨ ಸಾವಿರಕ್ಕೂ ಅಧಿಕ ಮಂದಿ ಮುಖ್ಯರಸ್ತೆಯಲ್ಲಿ ಅಲ್ಲಾಹುವಿನ ಸ್ಮರಣೆ ಮಾಡುತ್ತಾ ಮೆರವಣಿಗೆ ಸಾಗಿ, ಬೈಪಾಸ್ ರಸ್ತೆಗಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಈದ್ಗಾ ಮೈದಾನದಲ್ಲಿ ಸಮಾವೇ± Àಗೊಂಡರು. ಅಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮದೀನಾ ಮಸೀದಿಯ ಧರ್ಮಗುರು ಮಹಮ್ಮದ್ ಸಾದಿಕ್ ಧಾರ್ಮಿಕ ಪ್ರವಚನ ನೀಡಿದರು.
ಜಾಮೀಯಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ರಿಸಾಲತ್ ಪಾಶ, ಉಪಾಧ್ಯಕ್ಷ ಹನೀಫ್, ಕಾರ್ಯದರ್ಶಿ ಎನ್.ಎಸ್. ರಿಯಾಜ್, ಸದಸ್ಯರು ಹಾಜರಿದ್ದರು.ಸುಂಟಿಕೊಪ್ಪ: ರಂಜಾನ್ ಪ್ರಯುಕ್ತ ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್‌ನಲ್ಲಿ ಇಬ್ರಾಹಿಂ ಯಾಸನಿ, ಸುನ್ನಿ ಹನಫಿ ಮುಸ್ಲಿಂ ಜಮಾಅತ್‌ನಲ್ಲಿ ಮೌಲನಾ ಜುಬೇರ್, ಸುನ್ನಿ ಶಾಫಿ ಜುಮಾ ಮಸ್ಜಿದ್‌ನಲ್ಲಿ ಮೌಲವಿ ಉಸ್ಮಾನ್ ಫೈಝಿ, ಕೂÀಬ್ಬ ಮಸ್ಜಿದ್‌ನಲ್ಲಿ ಮೌಲನಾ ಇನಾಂ, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್‌ದಲ್ಲಿ ಮುಸ್ಲಿಯರ್ ಅಬ್ದುಲ್ ಅಜೀಜ್ ಸಖಾಫಿ ಅವರುಗಳು ಧಾರ್ಮಿಕ ಪ್ರವಚನ, ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ಧಾರ್ಮಿಕ ಪ್ರವಚನದ ನಂತರ ಮುಸ್ಲಿಂ ಸಮುದಾಯದವರು ಪರಸ್ಪರ ತೆರಳಿ ಆಲಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಂತರ ಗದ್ದೆಹಳ್ಳದ ಈದ್ಗಾಗಳಿಗೆ ತೆರಳಿ ಕುಟುಂಬದಲ್ಲಿ ಮೃತರಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು.
ಸಲಾಫಿ ಮಸೀದಿಯಲ್ಲಿ ರಂಜಾನ್ ಅಂಗವಾಗಿ ಶಮೀರ್ ಮೌಲವಿ ಪಾಲಕ್ಕಾಡ್ ಧಾರ್ಮಿಕ ಪ್ರವಚನ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪುರುಷರು, ಮಹಿಳೆಯರು, ಮಕ್ಕಳು ಒಗ್ಗೂಡಿ ಪ್ರಾರ್ಥನೆ ಸಲ್ಲಿಸಿದರು.
ವೀರಾಜಪೇಟೆ: ಇಲ್ಲಿನ ಕೆಎಸ್‌ಆರ್‌ಟಿಸಿ ಕಾರು ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ಪವಿತ್ರ ರಂಜಾನ್ ಮಾಸದ ೨೭ನೇ ದಿನದ ಉಪವಾಸದ ಪ್ರಯುಕ್ತ ಬಸ್ ನಿಲ್ದಾಣದಲ್ಲಿ ಇದ್ದಂತಹ ಸಾರ್ವಜನಿಕರಿಗೆ ತಂಪು ಪಾನೀಯ ಹಾಗೂ ಫಲಹಾರಗಳನ್ನು ನೀಡಲಾಯಿತು.
ಪುರಸಭೆ ಅಧ್ಯಕ್ಷೆ ದೇಚಮ್ಮ ಮತ್ತು ಪುರಸಭೆ ಸದಸ್ಯ ಎಸ್.ಎಚ್ ಮತ್ತಿನ್ ಇಫ್ತಾರ್ ಕೂಟಕ್ಕೆ ಆಗಮಿಸಿದ್ದರು. ಈ ಸಂದರ್ಭ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವ್ಯವಸ್ಥಾಪಕರಾದ ಚಂದ್ರ, ಕಾರು ಮಾಲೀಕರು ಹಾಗೂ ಚಾಲಕರ ಸಂಘದ ಬಷೀರ್, ಅಬೂಬಕ್ಕರ್, ಅಂಬಟಿ ಹ್ಯಾರಿಸ್, ರಾಮು, ಸಜೀವ, ವೇಣು, ಕಿಶೋರ್, ಯುವರಾಜ್ ಕೃಷ್ಣ ಹಾಜರಿದ್ದರು.ಸಿದ್ದಾಪುರ : ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಭಾಗದಲ್ಲಿ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಬಳಿಕ ಪರಸ್ಪರ ಹಬ್ಬದ ಶುಭಾಶಯಗಳನ್ನು ಹಂಚಿಕೊAಡರು.