ಮಡಿಕೇರಿ ಏ.೧ : ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ ನೀಡಿರುವ ಸಂಘ ವರ್ಚುವಲ್, ಅಮೂರ್ತ (ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ ಕೂಡ ವಿಶೇಷ ಪ್ರಾತಿನಿಧ್ಯ ಅಥವಾ ಪರ್ಯಾಯವಾಗಿ ಪ್ರತ್ಯೇಕ ಲೋಕಸಭೆ ಮತ್ತು ವಿಧಾನಸಭೆಯ ಕೊಡವ ಮತ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬಿರುನಾಣಿಯಲ್ಲಿ ಮಾನವ ಸರಪಳಿ ರಚಿಸಿ ಹಕ್ಕೊತ್ತಾಯವನ್ನು ಮಂಡಿಸಿತು. ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಬೇಕು, ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಘೋಷಿಸಬೇಕು, ಎಸ್‌ಟಿ ಟ್ಯಾಗ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಿದ ಸಿಎನ್‌ಸಿ ಸದಸ್ಯರು ಆದಿಮಸಂಜಾತ ಕೊಡವರ ಪ್ರಗತಿ ಹಾಗೂ ರಕ್ಷಣೆಗಾಗಿ ಸಂವಿಧಾನಬದ್ಧ ಹಕ್ಕುಗಳನ್ನು ಸರ್ಕಾರ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ, ಕೊಡವರು ಮೂಲ ವಂಶಸ್ಥ ಜನಾಂಗವಾಗಿದ್ದು, ಅವರ ಸ್ವತಂತ್ರ ಅಸ್ತಿತ್ವ ಮತ್ತು ವ್ಯಕ್ತಿತ್ವವನ್ನು ಗುರುತಿಸಿ ೧೮೭೧-೭೨ರಿಂದ ೧೯೩೧ರ ವರೆಗೆ ನಡೆಸಿದ ಜನಗಣತಿಯನ್ನು ಪುನರ್ ಮಾನದಂಡಗೊಳಿಸಿ ಕೊಡವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದರು.

ವಿಧಾನಸಭೆ ಮತ್ತು ಸಂಸತ್ ಕ್ಷೇತ್ರಗಳ ಪುನರ್ ಪರಿಶೀಲನೆ, ಪುನರ್ ವ್ಯಾಖ್ಯಾನಕ್ಕಾಗಿ ನಡೆಯುತ್ತಿರುವ ಗಡಿ ರಚನಾ ಪ್ರಕ್ರಿಯೆಯಿಂದ ಕೊಡವ ಸಮುದಾಯದ ಹಿತಾಸಕ್ತಿಗಳಿಗೆ ಧಕ್ಕೆಯಾಗಬಹುದು. ಪ್ರಭಾವಿ ರಾಜಕಾರಣಿಗಳು ಸುಳ್ಯದಲ್ಲಿನ ತಮ್ಮ ಭದ್ರಕೋಟೆಯನ್ನು ಕೊಡವಲ್ಯಾಂಡ್‌ನೊAದಿಗೆ ವಿಲೀನಗೊಳಿಸುವ ಒಳಸಂಚು ರೂಪಿಸಿದ್ದು, ಈ ಪ್ರಯತ್ನದಿಂದಾಗಿ ಸಂಸತ್ ಮತ್ತು ವಿಧಾನಸಭೆಯಲ್ಲಿ ಕೊಡವರ ಪ್ರಾತಿನಿಧ್ಯವನ್ನು ದುರ್ಬಲಗೊಳಿಸಬಹುದು ಎಂದು ಆರೋಪಿಸಿದರು.

ಕೊಡವರನ್ನು ವಿಶಿಷ್ಟ ಜನಾಂಗವೆAದು ಗುರುತಿಸಬೇಕು, ಜನಗಣತಿ ವರ್ಗೀಕರಣದ ತಿದ್ದುಪಡಿಯಾಗಬೇಕು ಮತ್ತು ಕೊಡವರನ್ನು ಜಾತಿ ಎಂದು ತಪ್ಪಾಗಿ ದಾಖಲಿಸಬಾರದು. ವಿಶ್ವಸಂಸ್ಥೆಯ ಆದಿಮಸಂಜಾತ ಹಕ್ಕುಗಳ ಅಡಿಯಲ್ಲಿ ಮಾನ್ಯತೆ ನೀಡಬೇಕು. ಇತಿಹಾಸದುದ್ದಕ್ಕೂ ಹೊರಗಿನ ಆಡಳಿತಗಾರರು ವಶಪಡಿಸಿಕೊಂಡಿದ್ದ ಕೊಡವರ ಪ್ರಾಚೀನ ಮತ್ತು ಪಾರಂಪರಿಕ ಭೂಮಿಯನ್ನು ಮರುಸ್ಥಾಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎನ್.ಯು.ನಾಚಪ್ಪ ಅವರು ಒತ್ತಾಯಿಸಿದರು

ಅಣ್ಣಳಮಾಡ ಹರಿಣಿ ದೇವಮ್ಮ, ಅಣ್ಣಳಮಾಡ ಹರ್ಷಿತಾ ದೇವಮ್ಮ, ಕೇಚಮಾಡÀ ಶಿಲ್ಪ್ಪ, ಕೇಚಮಾಡ ಶ್ರದ್ಧಾ, ಬೊಟ್ಟಂಗಡ ಗಿರೀಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶೆರಿನ್, ಬೊಳ್ಳೆರ ವಾಸು, ಬೊಳ್ಳೆರ ಕುಮಾರ್, ಬೊಳ್ಳೆರ ರಘು, ಬೊಳ್ಳೆರ ಮುತ್ತಣ್ಣ, ಬೊಜ್ಜಂಗಡ ನಂದ ನಟರಾಜ್, ಅಣ್ಣಳಮಾಡ ಲಾಲಾ ಅಪ್ಪಣ್ಣ, ಮಾಣಿರ ಗಣೇಶ್, ಅಣ್ಣಳಮಾಡ ರಂಜನ್, ಬೊಟ್ಟಂಗಡ ಸೋಮಣ್ಣ, ಮೀದೇರಿರ ಜಪ್ಪು, ಕೀಕಣಮಾಡ ಮನು, ಗುಡ್ಡಮಾಡ ಸುಬ್ರಮಣಿ, ಗುಡ್ಡಮಾಡ ಬೋಪಣ್ಣ, ಕಲ್ಕಂಡ ಅರಸು, ಕಲ್ಕಂಡ ರಾಮು, ಚೇರಂಡ ಪಾಪು ಕಾರ್ಯಪ್ಪ, ಕರ್ತಮಾಡ ನರೇಂದ್ರ, ಕರ್ತಮಾಡ ಜಾಜ, ಅಣ್ಣಳಮಾಡ ಸುಬ್ಬಯ್ಯ, ಕೀಕಣಮಾಡ ಹರೀಶ್, ಬೊಟ್ಟಂಗಡ ರಂಜಿ, ಕಾಳಿಮಾಡ ನಾಚಪ್ಪ, ಕಾಳಿಮಾಡ ಕೃಷ್ ಕುಶಾಲಪ್ಪ, ಕಾಳಿಮಾಡ ರಮೇಶ್ ತಿಮ್ಮಯ್ಯ, ಕರ್ತಮಾಡ ನೀಲಕಂಠ, ಕರ್ತಮಾಡ ಡಾಲಿ ಕಾಳಪ್ಪ, ಅಣ್ಣಳಮಾಡ ಉತ್ತಪ್ಪ, ಚಂಗಣಮಾಡ ನಾಣಿ ಅಪ್ಪಣ್ಣ, ಕುಪ್ಪಣಮಾಡ ರಘು, ಮಲ್ಲೇಂಗಡ ಮೋಟಯ್ಯ, ಕರ್ತಮಾಡ ಚಿಟ್ಟಿಯಪ್ಪ, ಅಣ್ಣಳಮಾಡ ಸುಬ್ರಮಣಿ, ಕುಪ್ಪಣಮಾಡ ಅರುಣ, ಕಲ್ಕಂಡ ದೇವಯ್ಯ, ಗುಡ್ಡಮಾಡ ಅರಸು ಭೀಮಯ್ಯ, ಚೊಟ್ಟಂಗಡ ಶ್ಯಾಂ, ಕಾಳಿಮಾಡ ಪವನ್, ಕಾಳಿಮಾಡ ನಾಚಪ್ಪ, ಬೊಟ್ಟಂಗಡ ರಾಜು, ಮಲ್ಲೇಂಗಡ ಸುಬ್ರಮಣಿ, ಅಣ್ಣಳಮಾಡ ಚಿಣ್ಣಪ್ಪ, ಕರ್ತಮಾಡ ಕುಟ್ಟಪ್ಪ, ಕರ್ತಮಾಡ ರಾಯ್, ಕುಪ್ಪಣಮಾಡ ಜೀವನ್, ಚೊಟ್ಟಂಗಡ ಬೋಸು, ಕರ್ತಮಾಡ ಗಣಪತಿ, ಕಾಳಿಮಾಡ ಸಂತೋಷ ಭೀಮಯ್ಯ, ಕರ್ತಮಾಡ ಸುಜನ್, ನೆಲ್ಲಿರ ರೋಷನ್, ಕರ್ತಮಾಡ ಡಾಲಿ, ಬೊಳ್ಳೆರ ರಾಮು, ಕೀಕಣಮಾಡ ಸುರೇಶ್, ಕಳ್ಕಂಡ ಪ್ರಸಾದ್ ಪೊನ್ನಪ್ಪ, ಕೇಚಮಾಡ ಶರತ್, ಕೇಚಮಾಡ ಚಿಟ್ಟಿಯಪ್ಪ, ಗುಡ್ಡಮಾಡ ನಾಚಯ್ಯ, ಕುಪ್ಪಣಮಾಡ ಉಮೇಶ್, ಕುಪ್ಪಣಮಾಡ ಮೇದಪ್ಪ, ಕುಪ್ಪಣಮಾಡ ಬೋಪಯ್ಯ, ನೆಲ್ಲಿರ ಬೊಳ್ಳಿಯಪ್ಪ, ಕುಪ್ಪಣಮಾಡ ಪೂಣಚ್ಚ, ಗುಡ್ಡಮಾಡ ವಿಷ್ಣು, ಕಳಕಂಡ ಹ್ಯಾರಿ ಕಾರ್ಯಪ್ಪ, ಕರ್ತಮಾಡ ಸುಗು ನಾಣಯ್ಯ, ಕಾಳಿಮಾಡ ಭೀಮಯ್ಯ, ಕಳಕಂಡ ಪ್ರಕಾಶ್, ಅಣ್ಣಳಮಾಡ ಗಿರೀಶ್, ಅಣ್ಣಳಮಾಡ ಮಂಜು, ಕರ್ತಮಾಡ ಮೋಹನ್, ಕರ್ತಮಾಡ ನಂದಾ ಮತ್ತಿತರರು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಕ್ಕೊತ್ತಾಯ ಮಂಡಿಸಿದರು.