ಮಡಿಕೇರಿ, ಮಾ. ೩೧: ಜಿಲ್ಲೆಯಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮ -ಸಡಗರದಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಅಲ್ಲದೆ ಮನೆಮನೆಗಳಲ್ಲಿ ಬೇವು - ಬೆಲ್ಲವನ್ನು ಸವಿಯುವ ಮೂಲಕ ಪೂಜೆ- ಪ್ರಾರ್ಥನೆಯೊಂದಿಗೆ ಹಬ್ಬಾಚರಣೆ ನಡೆಯಿತು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿನ ಓಂಕಾರೇಶ್ವರ ದೇವಾಲಯ, ವಿಜಯ ವಿನಾಯಕ ದೇವಾಲಯ ಸೇರಿದಂತೆ ವಿವಿಧ ದೇವಾಲ ಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ, ಪ್ರಸಾದ ವಿತರಣೆ ನೆರವೇರಿತು.ಯುಗಾದಿ ಹಬ್ಬವನ್ನು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಂಭ್ರಮ -ಸಡಗರದಿಂದ ಆಚರಿಸಲಾಯಿತು.
ಮನೆಯಲ್ಲಿ ಹಬ್ಬದ ಅಂಗವಾಗಿ ವಿಶೇಷ ಪೂಜೆಗಳನ್ನು ಏರ್ಪಡಿಸಿ, ಬೇವು ಬೆಲ್ಲ ಸವಿದು, ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಹೊಸ ಬಟ್ಟೆಗಳನ್ನು ತೊಟ್ಟು, ನೆಂಟರಿಷ್ಟರೊAದಿಗೆ ಹಬ್ಬದ ಊಟ ಮಾಡಿ ಸಂಭ್ರಮಿಸಿದರು. ಯುಗಾದಿ ಅಂಗವಾಗಿ ದೇವಾಲಯಗಳಲ್ಲ್ಲೂ ವಿಶೇಷ ಪೂಜೆಗಳು ನಡೆದವು.
ಪಟ್ಟಣದ ಶ್ರೀವಿದ್ಯಾಗಣಪತಿ ದೇವಾಲಯ, ಸೋಮೇಶ್ವರ ದೇವಾಲಯ, ಬಸವೇಶ್ವರ ದೇವಾಲಯ, ರಾಮಮಂದಿರ, ಯಡೂರು ಸೋಮೇಶ್ವರ ದೇವಾಲಯ, ಶಾಂತಳ್ಳಿ ಕುಮಾರಲಿಂಗೇಶ್ವರ ದೇವಾಲಯ, ಹಾನಗಲ್ಲು ಗಣಪತಿ ದೇವಾಲಯ, ಆರ್‌ಎಂಸಿ
(ಮೊದಲ ಪುಟದಿಂದ) ಮುಂಭಾಗದ ಶ್ರೀ ವೆಂಕಟೇಶ್ವರ ಸ್ವಾಮಿ ಹಾಗೂ ಗಣಪತಿ ದೇವಾಲಯ, ಆಂಜನೇಯ ದೇವಾಲಯ, ಶ್ರೀ ಮುತ್ತಪ್ಪ ಹಾಗೂ ಅಯ್ಯಪ್ಪ ದೇವಾಲಯ, ಬಜೆಗುಂಡಿಯ ಅಯ್ಯಪ್ಪ ಸ್ವಾಮಿ, ಚೌಡೇಶ್ವರಿ ದೇವಾಲಯಗಳಲ್ಲಿ ದಿನದ ಅಂಗವಾಗಿ ವಿಶೇಷ ಪೂಜೆಗಳು ನಡೆದವು.
ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಯುಗಾದಿ ಹಬ್ಬವನ್ನು ಗ್ರಾಮಸ್ಥರು ಸಾಮೂಹಿಕವಾಗಿ ಆಚರಿಸಿದರು.
ಪಂಚಾAಗ ಶ್ರವಣ, ಬೇವು ಬೆಲ್ಲ ವಿತರಣೆ, ಮಕ್ಕಳಿಗೆ ಅಕ್ಷರಾಭ್ಯಾಸ, ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಗ್ರಾಮಸ್ಥರು ಗ್ರಾಮದ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಶನಿವಾರಸಂತೆ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.
ಶ್ರೀರಾಮ ದೇವರಿಗೆ ವಿಶೇಷ ಅಲಂಕಾರ ಮಾಡಿ, ಫಲಪಂಚಾಮೃತ ಅಭಿಷೇಕ, ಪೂಜೆ, ಅರ್ಚನೆ, ನಂತರ ಮಹಾಮಂಗಳಾರತಿ ಬಳಿಕ ತೀರ್ಥ - ಪ್ರಸಾದ ವಿನಿಯೋಗ ನಡೆಯಿತು.
ಸಂಜೆ ದೇವರಿಗೆ ಮಹಾಮಂಗಳಾರತಿಯಾಗಿ, ತೀರ್ಥ-ಪ್ರಸಾದ ವಿನಿಯೋಗ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.
ಪಟ್ಟಣದ ಶ್ರೀಬೀರಲಿಂಗೇಶ್ವರ-ಪ್ರಬಲ ಭೈರವಿ ಪರಿವಾರ ದೇವರುಗಳ ಗುಡಿ, ಶ್ರೀ ಗಣಪತಿ- ಚಂದ್ರಮೌಳೇಶ್ವರ-ಪಾರ್ವತಿ ದೇವಸ್ಥಾನ, ತ್ಯಾಗರಾಜ ಕಾಲೋನಿಯ ಶ್ರೀವಿಜಯ ವಿನಾಯಕ ದೇವಸ್ಥಾನಗಳಲ್ಲೂ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.ಯುಗಾದಿ ಹೊನ್ನಾರು ಉತ್ಸವ ಕೃಷಿಕರ ಪಾಲಿಗೆ ಅದೊಂದು ಮಹೋತ್ಸವ ಎಂದು ಸಾಹಿತಿ ಡಾ.ಜೆ.ಸೋಮಣ್ಣ ಹೇಳಿದರು. ತೊರೆನೂರು ಗ್ರಾಮದಲ್ಲಿ ಯುಗಾದಿ ಅಂಗವಾಗಿ ಹಮ್ಮಿಕೊಂಡಿದ್ದ ಕೃಷಿಕರ ಹೊನ್ನಾರು ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ದೇಶಕ್ಕೆ ಅನ್ನ ನೀಡುವ ಕೃಷಿಕರ ಬದುಕು ಬಂಗಾರವಾಗಬೇಕೆAದು ಆಶಿಸಿದರು. ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ತೊರೆನೂರು ಗ್ರಾಮದಲ್ಲಿ ಎತ್ತು ಹಸುಗಳಿಂದ ಭೂಮಿ ಉಳುಮೆ ಮಾಡುವ ಮೂಲಕ ಕೃಷಿ ಚಟುವಟಿಕೆಗಳನ್ನು ಸಂರಕ್ಷಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಗ್ರಾಮದ ಕೃಷಿಕರು ಗ್ರಾಮದ ಬಸವೇಶ್ವರ ದೇವಾಲಯದ ಬಳಿ ತಮ್ಮ ತಮ್ಮ ಹಸು, ಎತ್ತು, ಹೋರಿಗಳೊಂದಿಗೆ ಸೇರಿ ಸಾಮೂಹಿಕ ಪೂಜೆ ಮಾಡಿಸಿದ ನಂತರ ಗ್ರಾಮದ ದೇವರ ಭೂಮಿಯಲ್ಲಿ ಒಂದು ಸುತ್ತು ಉಳುಮೆ ಮಾಡುವ ಮೂಲಕ ಸಂಪ್ರದಾಯ ಮೆರೆದರು. ಬಳಿಕ ರಾಜ್ಯ ಹೆದ್ದಾರಿಯಲ್ಲಿರುವ ಬಸವೇಶ್ವರ ದೇವಾಲಯದವರೆಗೂ ಮೆರವಣಿಗೆ ನಡೆಸಿದರು. ಈ ಸಂದರ್ಭ ದೇವಾಲಯ ಸಮಿತಿ ಗೌರವಾಧ್ಯಕ್ಷ ಟಿ.ಡಿ.ಈಶ್ವರ, ಅಧ್ಯಕ್ಷ ಟಿ.ಬಿ.ಜಗದೀಶ್, ಕಾರ್ಯದರ್ಶಿ ಟಿ.ಎಲ್.ಮಹೇಶ್, ಗ್ರಾಪಂ ಸದಸ್ಯ ಶಿವಕುಮಾರ್, ಅರ್ಚಕ ಸೋಮಶೇಖರ್, ಇತರರಿದ್ದರು.
ಕೂಡಿಗೆ ಶ್ರೀ ದಂಡಿನಮ್ಮ ಮತ್ತು ಶ್ರೀ ಬಸವೇಶ್ವರ, ಮುತ್ತತ್ ರಾಯ ದೇವಸ್ಥಾನ ಸೇವಾ ಸಮಿತಿಯ ವತಿಯಿಂದ ಯುಗಾದಿ ಹಬ್ಬ ಆಚರಿಸಲಾಯಿತು.
ಶ್ರೀ ಮುತ್ತತ್ ರಾಯ ಸ್ವಾಮಿಯ ವಿಗ್ರಹವನ್ನು ಹೊತ್ತುಕೊಂಡು ಕಾವೇರಿ ನದಿಗೆ ತೆರಳಿ ಗಂಗಾ ಸ್ನಾನ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತಂದು ನಂತರ ಯುಗಾದಿ ಹಬ್ಬದ ಅಂಗವಾಗಿ ಪೂಜಾ ಕೈಂಕರ್ಯಗಳು ನಡೆದವು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಮಂಜುನಾಥ, ಉಪಾಧ್ಯಕ್ಷ ಕೆ.ಟಿ. ಪ್ರವೀಣ್, ಕಾರ್ಯದರ್ಶಿ ಕೆ.ಸಿ. ಚಂದ್ರಶೇಖರ್, ಸೇರಿದಂತೆ ಸಮಿತಿಯ ನಿರ್ದೇಶಕರು, ಸದಸ್ಯರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆಗೆ ಸೇರಿದ ಕಾಲೇಜು ಹಿಂಭಾಗ ಅಂಗನವಾಡಿ ಕೇಂದ್ರದಲ್ಲಿ ಯುಗಾದಿ ಹಬ್ಬ ಆಚರಣೆ ನಡೆಯಿತು. ಅಂಗನವಾಡಿ ಕಾರ್ಯಕರ್ತೆ ನೀತು, ಸಹಾಯಕಿ ದಿವ್ಯ, ಪೋಷಕರು ೧೯ ಮಕ್ಕಳು ಹಾಜರಿದ್ದರು.ಕುಶಾಲನಗರ ದೇವಾಂಗ ಸಂಘದ ವತಿಯಿಂದ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದ ಸಭಾಂಗಣದಲ್ಲಿ ಯುಗಾದಿ ಹಬ್ಬದ ಆಚರಣೆ ನಡೆಯಿತು.
ಈ ಸಂದರ್ಭ ಉಪಾಧ್ಯಕ್ಷ ಡಿ.ವಿ. ಚಂದ್ರು (ರಾಕಿ), ಸಹ ಕಾರ್ಯದರ್ಶಿ ಡಿ.ವಿ.ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಡಿ.ಎನ್. ವಿನೋದ್, ಗೌರವ ಸಲಹೆಗಾರರಾದ ಡಿ.ಎಸ್. ಕೋದಂಡರಾಮ್, ಪುರಸಭೆ ಸದಸ್ಯ ಡಿ.ಕೆ. ತಿಮ್ಮಪ್ಪ, ನಿರ್ದೇಶಕರುಗಳಾದ ಡಿ.ಆರ್ ಪರಮೇಶ್, ಕೆ.ಕೆ. ನಾಗರಾಜಶೆಟ್ಟಿ, ಡಿ.ಎನ್. ಅಶ್ವಥ್, ವಿನೋದ ಕುಮಾರ್, ಎಸ್. ಸಂಜಯ್ ಕುಮಾರ್, ಅರುಣ್, ಸೇರಿದಂತೆ ಮಹಿಳಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.
ಕುಶಾಲನಗರದ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಕೂಡಿಗೆಯ ಶ್ರೀ ಶಕ್ತಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ದಿನನಿತ್ಯ ಅಗತ್ಯವಿರುವ ಔಷಧ, ಬಟ್ಟೆ ಮತ್ತು ನಿತ್ಯ ಬಳಕೆಯಾಗುವ ವಸ್ತುಗಳನ್ನು ಅಧ್ಯಕ್ಷ ಬಿ.ಎಲ್.ಉದಯ್ ಕುಮಾರ್ ನೇತೃತ್ವದಲ್ಲಿ ವಿತರಿಸಲಾಯಿತು.
ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ನ ಕಾರ್ಯದರ್ಶಿ ಬಿ.ಎಲ್.ಅಶೋಕ್, ಖಜಾಂಚಿ ಬಿ.ಆರ್.ನಟರಾಜ್, ನಿರ್ದೇಶಕ ಎಂ.ಪಿ.ಸತ್ಯನಾರಾಯಣ, ಇತರರು ಉಪಸ್ಥಿತರಿದ್ದರು.
ಶಿರಂಗಾಲ ಗ್ರಾಮದಲ್ಲಿರುವ ಶ್ರೀ ಮಂಟಿಗಮ್ಮ ದೇವಾಲಯ ಮತ್ತು ಉಮಾಮಹೇಶ್ವರ ದೇವಾಲಯ ಸಮಿತಿಯ ವತಿಯಿಂದ ವರ್ಷಂಪ್ರತಿಯAತೆ ಯುಗಾದಿ ಹಬ್ಬದ ಅಂಗವಾಗಿ ಹೊನ್ನಾರು ಉತ್ಸವ ನಡೆಯಿತು. ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ಸಮಿತಿ ವತಿಯಿಂದ ಪೂಜೆ ಸಲ್ಲಿಸಿ , ಉಳುಮೆ ಮಾಡುವ ಎತ್ತುಗಳನ್ನು ಸಿಂಗಾರ ಮಾಡಿ ಉಳುಮೆ ವಸ್ತುಗಳಿಗೆ ಪೂಜಿಸಲಾಯಿತು. ನಂತರ ದೇವಾಲಯದ ಜಮೀನಿನಲ್ಲಿ ಉಳುಮೆ ಮಾಡಲಾಯಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎಸ್. ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಎಸ್ ಜೆ. ಉಮೇಶ್, ಕಾರ್ಯದರ್ಶಿ ವೆಂ. ಎಸ್. ಗಣೇಶ್, ಕಟ್ಟಡ ಸಮಿತಿ ಗೌರವ ಅಧ್ಯಕ್ಷ ಎಸ್. ಆರ್. ಕಾಳಿಂಗಪ್ಪ, ಅಧ್ಯಕ್ಷ ಎಸ್. ಕೆ. ಪ್ರಸನ್ನ, ಕಾರ್ಯದರ್ಶಿ ಬಿ.ಎಸ್. ಬಸವಣ್ಣಯ್ಯ ಸೇರಿದಂತೆ ಸಮಿತಿಯ ನಿರ್ದೇಶಕರು ಸದಸ್ಯರು ಹಾಜರಿದ್ದರು.ಸೋಮವಾರಪೇಟೆ,ಮಾ.೩೧: ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸೋಮವಾರಪೇಟೆ ಮಂಡಲ ವತಿಯಿಂದ ಯುಗಾದಿ ಅಂಗವಾಗಿ ಪಟ್ಟಣದಲ್ಲಿ ಗಣವೇಷಧಾರಿ ಸ್ವಯಂ ಸೇವಕರಿಂದ ಪಥ ಸಂಚಲನ ನಡೆಯಿತು.
ರಾಷ್ಟಿçÃಯ ಸ್ವಯಂ ಸೇವಕ ಸಂಘವು ೧೦೦ ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆ, ಸಂಘದ ಸ್ವಯಂ ಸೇವಕರು ಯುಗಾದಿ ಹಬ್ಬದಂದು ಆಕರ್ಷಕ ಘೋಷ್ ವಾದ್ಯಕ್ಕೆ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಆರಂಭಗೊAಡ ಪಥ ಸಂಚಲನ ಬಸವೇಶ್ವರ ರಸ್ತೆ, ಮುಖ್ಯರಸ್ತೆ, ಕ್ಲಬ್ ರಸ್ತೆ, ಮಡಿಕೇರಿ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಎಂ.ಜಿ. ರಸ್ತೆಯ ಮೂಲಕ ಸಾಗಿ ನಂತರ ಮೈದಾನದಲ್ಲಿ ಸಮಾಪನಗೊಂಡಿತು.