ಮಡಿಕೇರಿ, ಏ. ೧ : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ತಾ. ೧ ರಿಂದ ೧೩ರವರೆಗೆ ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್ - ೨ ಕ್ರಿಕೆಟ್ ಪಂದ್ಯಾವಳಿ ಇಂದು ಉದ್ಘಾಟನೆಗೊಂಡಿತು.
ಮೊದಲ ದಿನದ ಪಂದ್ಯಾವಳಿಯಲ್ಲಿ ವೆಸ್ಟರ್ನ್ ಘಾಟ್ ವಾರಿಯರ್ಸ್ ಮತ್ತು ಕೂರ್ಗ್ ಬ್ಲಾಸ್ಟರ್ಸ್ ತಂಡಗಳು ಗೆಲುವು ದಾಖಲಿಸಿದವು.
ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್ ಮತ್ತು ಎಂ.ಟಿ.ಬಿ ರಾಯಲ್ಸ್ ತಂಡಗಳ ನಡುವೆ ನಡೆದ ರೋಚಕ ಪಂದ್ಯದಲ್ಲಿ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೫೮ ರನ್ ಗಳಿಸುವ ಮೂಲಕ ವೆಸ್ಟರ್ನ್ ಘಾಟ್ ವಾರಿಯರ್ ತಂಡ ಭರ್ಜರಿ ಗೆಲುವು ಸಾಧಿಸಿತು.
ಎಂಟಿಬಿ ರಾಯಲ್ಸ್ ತಂಡ ೨೦ ಓವರ್‌ಗಳಲ್ಲಿ೭ ವಿಕೆಟ್ ನಷ್ಟಕ್ಕೆ ೧೨೯ ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಟಾಸ್ ಗೆದ್ದ ಎಂ.ಟಿ.ಬಿ ರಾಯಲ್ಸ್ ತಂಡ ಬೌಲಿಂಗ್ ಅನ್ನು ಆಯ್ಕೆ ಮಾಡಿಕೊಂಡಿತು.
ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್ನ ಚೋನಿರ ಅಯ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು.
ಟೀಂ ಕೊಡವ ಟ್ರೆöÊಬ್ ಮತ್ತು ಕೂರ್ಗ್ ಬ್ಲಾಸ್ಟರ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೂರ್ಗ್ ಬ್ಲಾಸ್ಟರ್ಸ್ ತಂಡ ೧೫.೫ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೦೯ ರನ್ ಗಳಿಸಿ ಗೆಲುವು ದಾಖಲಿಸಿತು. ಟಾಸ್ ಗೆದ್ದ ಕೂರ್ಗ್ ಬ್ಲಾಸ್ಟರ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೊಡವ ಟ್ರೆöÊಬ್ ತಂಡ ೨೦ ಓವರ್‌ಗಳಲ್ಲಿ ೧೦ ವಿಕೆಟ್ ನಷ್ಟಕ್ಕೆ ೧೦೮ ರನ್ ಸೇರಿಸಿತು. ಇದನ್ನು ಬೆನ್ನಟ್ಟಿದ ಕೂರ್ಗ್ ಬ್ಲಾಸ್ಟರ್ಸ್ ತಂಡ ಗೆಲುವಿನ ನಗು ಬೀರಿತು. ಬೊಳ್ಕಾರಂಡ ದರ್ಶನ್ ಮಾಚಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಪಾಲಿಬೆಟ್ಟದ ಟಾಟಾ ಕಾಫಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಟಾಟಾ ಕಾಫಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಎ. ಮಂದಣ್ಣ, ಕೂರ್ಗ್ ಎಜುಕೇಶನ್ ಫಂಡ್‌ನ ಅಧ್ಯಕ್ಷ ಸಿ.ಎ. ಮುತ್ತಣ್ಣ, ಟಾಟಾ ಕಾಫಿ ಲಿಮಿಟೆಡ್‌ನ ಹಿರಿಯ ಪ್ರಧಾನ ವ್ಯವಸ್ಥಾಪಕ ಕೆ.ಜಿ. ರಾಜೀವ್, ಕಾಫಿ ಲಿಮಿಟೆಡ್‌ನ ಅರಣ್ಯ ಸಂಪನ್ಮೂಲ ನಿರ್ವಹಣೆಯ ಪ್ರಧಾನ ವ್ಯವಸ್ಥಾಪಕ ಬಿ.ಜಿ. ಪೊನ್ನಪ್ಪ, ಕಾಫಿ ಲಿಮಿಟೆಡ್‌ನ ಹೆಚ್‌ಆರ್ ಮತ್ತು ಐಆರ್‌ನ ಉಪ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮ್ಯಾಥ್ಯು ಉಪಸ್ಥಿತರಿದ್ದರು.
ಕೂರ್ಗ್ ಕ್ರಿಕೆಟ್ ಫೌಂಡೇಶನ್‌ನ ಅಧ್ಯಕ್ಷ ಪೊರುಕೊಂಡ ಸುನಿಲ್, ಉಪಾಧ್ಯಕ್ಷ ಪಾಲಚಂಡ ಜಗನ್ ಉತ್ತಪ್ಪ, ಪಂದ್ಯಾವಳಿಯ ಸಂಚಾಲಕ ಚಂಡೀರ ರಚನ್ ಚಿಣ್ಣಪ್ಪ, ವ್ಯವಸ್ಥಾಪಕ ಚೆರುಮಂದAಡ ಸೋಮಣ್ಣ, ನಿರ್ದೇಶಕರಾದ ಮಡ್ಲಂಡ ದರ್ಶನ್ ಪೆಮ್ಮಯ್ಯ, ಕೀತಿಯಂಡ ಗಣಪತಿ, ಅಣ್ಣಳಮಾಡ ರಾಯ್ ಚಿಣ್ಣಪ್ಪ, ಕುಲ್ಲೇಟಿರ ಶಾಂತ ಕಾಳಪ್ಪ, ಬಲ್ಲಂಡ ರೇಣ, ಮತ್ತಿತರರು ಉಪಸ್ಥಿತರಿದ್ದರು.