ಸೋಮವಾರಪೇಟೆ, ಏ. ೧: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದಲ್ಲಿ ಕಳೆದ ೬೦ ವರ್ಷಗಳಿಂದ ನೆಲೆನಿಂತಿರುವ ೧೧ ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಶಾಸಕ ಡಾ. ಮಂತರ್ ಗೌಡ ಅವರು ತಹಶೀಲ್ದಾರರಿಗೆ ಸೂಚಿಸಿದರು.

ಕುಸುಬೂರು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ನೆಲೆನಿಂತಿದ್ದು, ಸಾಕಷ್ಟು ಬಾರಿ ಹಕ್ಕುಪತ್ರ ನೀಡುವಂತೆ ಸಂಬAಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿರುವ ಎಲ್ಲಾ ಬಡ ಕುಟುಂಬಗಳಿಗೂ ಹಕ್ಕುಪತ್ರ ನೀಡುವಂತೆ ಗ್ರಾಮಕ್ಕೆ ಆಗಮಿಸಿದ ಶಾಸಕರಲ್ಲಿ ಮನವಿ ಮಾಡಿದರು.

ಬಡ ಕುಟುಂಬಗಳು ನೆಲೆಸಿರುವ ಜಾಗ ಊರುಡುವೆ ಗ್ರಾಮಸ್ಥರು ಎಂದಿದ್ದು, ಇಲ್ಲಿ ೬೦ ವರ್ಷಗಳಿಂದಲೂ ನೆಲೆಸಿರುವುದರಿಂದ ಪ್ರತ್ಯೇಕವಾಗಿ ಪ್ರತಿ ಕುಟುಂಬದಿAದ ವರದಿ ಪಡೆದುಕೊಂಡು, ಅವರಿಗೆ ಅರಣ್ಯ ಹಕ್ಕು ಕಾಯೆಯಡಿ ದಾಖಲಾತಿ ನೀಡಲು ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದು, ಎಲ್ಲರಿಗೂ ಹಕ್ಕುಪತ್ರ ನೀಡುವಂತೆ ಶಾಸಕರು ಸ್ಥಳದಲ್ಲಿ ಹಾಜರಿದ್ದ ತಹಶೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಸೂಚಿಸಿದರು. ಈ ಸಂದರ್ಭ ಗ್ರಾಮದ ರವಿಕುಮಾರ್, ನರಸಿಂಹಮೂರ್ತಿ, ರಮ್ಯ, ಧನಲಕ್ಷಿö್ಮÃ, ಪ್ರದೀಪ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಇದ್ದರು.