ಮಡಿಕೇರಿ, ಏ. ೧: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸ್ತಿçÃಶಕ್ತಿ ಬ್ಲಾಕ್ ಒಕ್ಕೂಟ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಅಂತರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮ, ಕಾನೂನು ಅರಿವು ಕಾರ್ಯಕ್ರಮ, ವಿಶ್ವ ಜಲ ದಿನಾಚರಣೆಯು ನೆರವೇರಿತು. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಮಾತನಾಡಿ, ಮಹಿಳಾ ದಿನಾಚರಣೆಯು ದಿನಕ್ಕೆ, ತಿಂಗಳಿಗೆ ಸೀಮಿತವಾಗದೆ ಪ್ರತಿದಿನವೂ ಆಚರಣೆ ಆಗಬೇಕು. ಹೆಣ್ಣು ಆರ್ಥಿಕವಾಗಿ ಸಬಲರಾದಾಗ ಮಾತ್ರ ಧೈರ್ಯವಾಗಿ ಬಾಳಲು ಸಾಧ್ಯ.
ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ವಿದ್ಯೆ ಕೊಡಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಹೆಣ್ಣಿಗೆ ಮಿತ್ರಳಾಗಿರಬೇಕು ಶತ್ರುವಾಗಬಾರದು. ಒಬ್ಬ ಮಹಿಳೆ ಇನ್ನೊಬ್ಬರಿಗೆ ಸಹಕಾರ ಮಾಡಬೇಕು. ದಯೆ, ತಾಳ್ಮೆ ಸಹನಾಶೀಲತೆಗೆ ಹೆಸರಾದ ಹೆಣ್ಣು ಅಹಂಕಾರ ತ್ಯಜಿಸಬೇಕು. ಪರಸ್ಪರ ಪ್ರೀತಿ, ವಿಶ್ವಾಸ ಗೌರವದೊಂದಿಗೆ ಜೀವನವನ್ನು ನಡೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು. ಜಲ ದಿನಾಚರಣೆ ಮಾರ್ಚ್ ತಿಂಗಳಲ್ಲೇ ಬರುವುದರಿಂದ ಜಲ ಸಂರಕ್ಷಣೆಯು ಕೂಡ ಮಹಿಳೆಯರ ಪಾತ್ರ ಹೆಚ್ಚಾಗಿದೆ. ಪ್ರತಿದಿನ ನೀರನ್ನು ಹೆಚ್ಚು ಉಪಯೋಗಿಸದೆ ಅವಶ್ಯಕತೆಗೆ ಅನುಗುಣವಾಗಿ ಬಳಸಬೇಕು, ಹೆಚ್ಚು ಮಲೀನಗೊಳಿಸಬಾರದು ಹೆಚ್ಚು ನೀರನ್ನು ವ್ಯಯ ಗೊಳಿಸಬಾರದು. ಜೀವ ಜಲ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು. ಪೊಲೀಸ್ ಇಲಾಖೆಯ ಸುಮತಿ ಮಾತನಾಡಿ, ಆಧುನಿಕತೆ ಯೊಂದಿಗೆ ಸಂಸ್ಕಾರ ಸಂಸ್ಕೃತಿ ಉಳಿಯಬೇಕೆಂದರೆ ಕಾನೂನನ್ನು ದುರುಪಯೋಗಪಡಿಸಿ ಕೊಳ್ಳದೆ ನಿಯಮ ಬದ್ಧರಾಗಿ ನಡೆಯಬೇಕು ಎಂದು ಹಲವು ಉದಾಹರಣೆ ನೀಡಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಶ್ರೀಶಕ್ತಿ ಗುಂಪಿನ ಎಲ್ಲಾ ಸದಸ್ಯರು ಆರ್ಥಿಕವಾಗಿ ಸದೃಢರಾಗಲು ಭವಿಷ್ಯದಲ್ಲಿ ತಮ್ಮ ಉಳಿತಾಯವನ್ನು ಹೆಚ್ಚಿಸಲು ಬೇಕಾದಂತಹ ಸಲಹೆ ನೀಡಿದರು. ಸ್ತಿçà ಶಕ್ತಿ ಗುಂಪು ಮತ್ತು ಒಕ್ಕೂಟವನ್ನು ಬಲಪಡಿಸಲು ಹಲವಾರು ಸೂಚನೆ ಮತ್ತು ಮಾರ್ಗದರ್ಶನ ನೀಡಿದರು. ತಾಲೂಕು ಸ್ತಿçà ಶಕ್ತಿ ಒಕ್ಕೂಟದ ಅಧ್ಯಕ್ಷೆ ಪುಷ್ಪ ಮಾತನಾಡಿದರು. ಉತ್ತಮವಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರಾದ ಮೇಕೇರಿ ಅಂಗನವಾಡಿ ಕಾರ್ಯಕರ್ತೆ ಹೇಮಲತಾ ಪಿ.ಎಸ್. ಮತ್ತು ಹಳೆ ತಾಲೂಕು ಅಂಗನವಾಡಿ ಕಾರ್ಯಕರ್ತೆ ಪೋರ್ಕೊಂಡ ಸಿ.ಜೆ. ಭಾಗ್ಯವತಿ ಅನಿಲ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಕೆ.ಈ. ಭೋಜಕ್ಕಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ತಾಲೂಕು ಒಕ್ಕೂಟದ ಸದಸ್ಯರಾದ ರೂಪ, ಅನಿತಾ, ಪುಷ್ಪಾವತಿ, ಆಶಾಲತಾ, ಜಲಜಾಕ್ಷಿ, ಗೀತಾ, ಶಾಂತಿ, ತಾರಾಮಣಿ, ರತ್ನಾವತಿ, ಬೊಜಕ್ಕಿ ಹಾಜರಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಜೋಯಪ್ಪ ಅವರು ಪ್ರಾರ್ಥಿಸಿದರು. ಚಂದಕ್ಕಿ ವಂದಿಸಿದರು. ತಾರಮಣಿ ಸ್ವಾಗತಿಸಿದರು. ತಾಲೂಕು ಸ್ತಿçÃಶಕ್ತಿ ಒಕ್ಕೂಟದ ಹತ್ತು ಪದಾಧಿಕಾರಿಗಳನ್ನು ಹಾಗೂ ಅಧಿಕಾರಿಗಳಾದಂತ ಮೇಪಾಡಂಡ ಸವಿತಾ ಕೀರ್ತನ್ ಹಾಗೂ ಶೀಲಾ ಅಶೋಕ್ ಅವರನ್ನು ಗೌರವಿಸಲಾಯಿತು.