ಮಡಿಕೇರಿ, ಏ. ೧: ೨೫ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದ ೫ನೇ ದಿನವಾದ ಮಂಗಳವಾರದAದು ಅಮೋಘ ಪ್ರದರ್ಶನಗಳ ಮೂಲಕ ಭರ್ಜರಿ ಗೋಲು ದಾಖಲಿಸಿ ಪಟ್ಟಚೆರುವಂಡ, ಪಟ್ಟಡ, ಕಂಬೇಯAಡ, ಕಾಂಡAಡ, ಮಲ್ಚಿರ, ಬಡುವಮಂಡ ತಂಡಗಳು ಗೆಲುವಿನ ನಗೆ ಬೀರಿದವು.
ಮೈದಾನ ೧ ರಲ್ಲಿ ನಡೆದ ಮಂಗೇರಿರ ಮತ್ತು ಅಕ್ಕಪಂಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಅಕ್ಕಪಂಡ ತಂಡ ಗೆಲುವು ದಾಖಲಿಸಿತು. ತಂಡದ ಪರ ಪುತ್ತು ಅಯ್ಯಪ್ಪ ಏಕೈಕ ಗೋಲು ದಾಖಲಿಸಿದರು. ಡೆನ್ನಿ ಗಣಪತಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಮರುವಂಡ ವಿರುದ್ಧ ಮಾಣಿಪಂಡ ತಂಡ ೪-೩ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಮಾಣಿಪಂಡ ತಂಡದ ದೀಪು ಗಣಪತಿ, ಬೋಪಣ್ಣ, ಬಬಿನ್ ಬೆಳ್ಯಪ್ಪ ಹಾಗೂ ಸಂಪತ್ ತಲಾ ೧ ಗೋಲು ದಾಖಲಿಸಿದರು. ಮರುವಂಡ ತಂಡದ ಭವಿಷ್ ಮಾದಪ್ಪ ೨ ಹಾಗೂ ಧವನ್ ಬೋಪಣ್ಣ ೧ ಗೋಲು ಬಾರಿಸಿದರು. ಧವನ್ ಬೋಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು.
ಪಟ್ಟಚೆರುವಂಡ ಮತ್ತು ಚೆಟ್ರುಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಪಟ್ಟಚೆರುವಂಡ ತಂಡ ೪-೦ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ಪಟ್ಟಚೆರುವಂಡ ತಂಡದ ಗಗನ್ ಮೇದಪ್ಪ ೨, ಜೀವನ್ ಮುದ್ದಪ್ಪ ಹಾಗೂ ಯೋಗ್ ಅಯ್ಯಪ್ಪ ತಲಾ ೧ ಗೋಲು ದಾಖಲಿಸಿದರು. ಪಟ್ಟಚೆರುವಂಡ ನಂಜಪ್ಪ ಪ್ಲೆಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಪಟ್ಟಡ ಮತ್ತು ಮುಕ್ಕಾಟಿರ (ಕುಂಬಳದಾಳು) ನಡುವಿನ ಪಂದ್ಯದಲ್ಲಿ ಪಟ್ಟಡ ತಂಡ ೫-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ತಂಡದ ಪರ ಶರತ್ ಹಾಗೂ ಸತೀಶ್ ೨, ಪೊನ್ನಣ್ಣ ೧ ಗೋಲು ದಾಖಲಿಸಿದರು. ಮುಕ್ಕಾಟಿರ ತೇಜ್ ತಿಮ್ಮಯ್ಯ ಪ್ಲೆಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೋಟನಾಳಿರ ಮತ್ತು ಬೊಳ್ತಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳ್ತಂಡ ತಂಡ ೧-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಬೊಳ್ತಂಡ ಕಿರಣ್ ಏಕೈಕ ಗೋಲು ದಾಖಲಿಸಿದರು. ಪವನ್ ಪ್ಲೆಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ ೨ರಲ್ಲಿ ನಡೆದ ಪಂದ್ಯಾವಳಿಯಲ್ಲಿ ಕಂಬೇಯAಡ ಮತ್ತು ಮಾಚ್ಚೆಟ್ಟಿರ ತಂಡಗಳ ನಡುವಿನ ಪಂದ್ಯಾಟದಲ್ಲಿ ೪-೦ ಗೋಲುಗಳ ಅಂತರದಲ್ಲಿ ಕಂಬೇಯAಡ ತಂಡ ಗೆಲುವು ಸಾಧಿಸಿತು. ಕಂಬೇಯAಡ ವಿಶ್ವ ಉತ್ತಪ್ಪ, ತಿನಿತ್, ಆದಿ ಅಚ್ಚಯ್ಯ ಹಾಗೂ ಸತಿಲ್ ಪೊನ್ನಪ್ಪ ತಲಾ ೧ ಗೋಲು ದಾಖಲಿಸಿದರು. ಮಾಚ್ಚೆಟ್ಟಿರ ಭೂಮಿಕಾ ಚಂಗಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕಾಣತಂಡ ಮತ್ತು ಮೂಕಳೆರ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಳೆರ ತಂಡ ೧-೦ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಮೂಕಳೆರ ಪೆಮ್ಮಯ್ಯ ಗೋಲು ಬಾರಿಸಿ ಗೆಲುವಿಗೆ ಸಹಕಾರಿಯಾದರು. ಕಾಣತಂಡ ತಂಡದ ಆಟಗಾರ ಸುಬ್ಬಯ್ಯ ಪ್ಲೆಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.
ನೆರ್ಪಂಡ ಮತ್ತು ಕಾಂಡAಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಂಡAಡ ತಂಡ ೫-೧ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕಾಂಡAಡ ಪರ ಕೌಶಿ ಕುಶಾಲಪ್ಪ ೨, ಆಶಿಕ್ ಈರಪ್ಪ ೧, ನಿತೇಶ್ ಸುಬ್ರಮಣಿ ಹಾಗೂ ಪ್ರಿತನ್ ಪೂಣಚ್ಚ ತಲಾ ೧ ಗೋಲು ದಾಖಲಿಸಿದರು. ನೆರ್ಪಂಡ ತಂಡದ ಸುಭಾಷ್ ಸೋಮಣ್ಣ ೧ ಗೋಲು ಬಾರಿಸಿ, ಪ್ಲೆಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೆರಿಯಂಡ ಮತ್ತು ಪೂಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆರಿಯಂಡ ತಂಡ ೩-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಚೆರಿಯಂಡ ಗಾಯಕ್ ಗಣಪತಿ ೨ ಹಾಗೂ ತನಿಶ್ ತಿಮ್ಮಯ್ಯ ೧ ಗೋಲು ದಾಖಲಿಸಿದರು. ಪೂಳಂಡ ತಂಡದ ಅರ್ಜುನ್ ಕಾಳಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮೈದಾನ ೩ರಲ್ಲಿ ನಡೆದ ಪಂದ್ಯಾವಳಿಯಲ್ಲಿ ಮಾದೇಟಿರ ಮತ್ತು ಮಲ್ಚಿರ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಮಲ್ಚಿರ ತಂಡ ಜಯ ಸಾಧಿಸಿತು. ಮಲ್ಚಿರ ತಂಡದ ಪರ ಧ್ಯಾನ್ ಸೋಮಣ್ಣ ೨, ಸಂಪತ್ ಕುಟ್ಟಪ್ಪ ಹಾಗೂ ಹರ್ಷ ತಲಾ ೧ ಗೋಲು ದಾಖಲಿಸಿದರು. ಟಿನ್ಸಿ ತಿಮ್ಮಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಪಳಂಗೇಟಿರ ಮತ್ತು ಪೋತಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಳಂಗೇಟಿರ ೨-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಪಳಂಗೇಟಿರ ತಂಡದ ಅವಿನಾಶ್ ಹಾಗೂ ಸತೀಶ್ ತಲಾ ೧ ಗೋಲು ದಾಖಲಿಸಿದರು. ಪೋತಂಡ ರಾಜಾ ತಿಮ್ಮಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳಿಸಿದರು. ಪೋತಂಡ ತಂಡ ಗೋಲ್ ಕೀಪರ್ ಇಲ್ಲದೆ ಪಂದ್ಯಾವಳಿಯಲ್ಲಿ ಸೆಣಸಾಡಿದ್ದು, ವಿಶೇಷವಾಗಿತ್ತು. ಬೈರಾಜಂಡ ಮತ್ತು ಬಾಳೆಕುಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಬೈರಾಜಂಡ ತಂಡ ೩-೧ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಬೈರಾಜಂಡ ತಂಡದ ಪರ ಆದರ್ಶ್ ಅಯ್ಯಪ್ಪ, ದರ್ಶನ್ ಹಾಗೂ ಕಾರ್ಯಪ್ಪ ತಲಾ ೧ ಗೋಲು ಗಳಿಸಿದರು. ಬಾಳೆಕುಟ್ಟಿರ ತಂಡದ ಪರ ವಿನಿ ಪೆಮ್ಮಯ್ಯ ೧ ಗೋಲು ದಾಖಲಿಸಿದರು. ಬಾಳೆಕುಟ್ಟಿರ ಕೀರ್ತನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.