ಪೊನ್ನಂಪೇಟೆ, ಏ. ೧: ಯುಗಾದಿ ಹಬ್ಬದ ಪ್ರಯುಕ್ತ ಪೊನ್ನಂಪೇಟೆ ೪ನೇ ವಿಭಾಗದ ತೊರೆಬೀದಿಯಲ್ಲಿ ಕಲ್ಲಿನಿಂದ ತೆಂಗಿನಕಾಯಿ ಒಡೆಯುವ ಗ್ರಾಮೀಣ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಬಡಾವಣೆಯ ಹಿರಿಯರು, ಯುವಕರು ಹಾಗೂ ಮಕ್ಕಳು ಈ ಸಾಂಪ್ರದಾಯಿಕ ಕ್ರೀಡೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಗ್ರಾ.ಪಂ. ಅಧ್ಯಕ್ಷ ಅಣ್ಣೀರ ಹರೀಶ್ ನೇತೃತ್ವದಲ್ಲಿ ಮನು ಧರ್ಮಜ ಕ್ರೀಡೆಯನ್ನು ಆಯೋಜಿಸಿದ್ದರು. ಈ ಸಂದರ್ಭ ಗ್ರಾಮಸ್ಥರಾದ ಅಣ್ಣು, ಅಯ್ಯಪ್ಪ ಇನ್ನಿತರರು ಇದ್ದರು.