*ಗೋಣಿಕೊಪ್ಪ, ಏ. ೧: ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಯನ್ನು ಕೆದಮುಳ್ಳೂರು ಸಂಜೀವಿನಿ ಒಕ್ಕೂಟ ಸಮುದಾಯ ಭವನದಲ್ಲಿ ಆಚರಿಸಿತು. ಒಕ್ಕೂಟದ ಅಧ್ಯಕ್ಷೆ ರುಕಿಯಾ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಫ್ರಿ ಉತ್ತಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗ್ರಾ.ಪಂ. ಸದಸ್ಯ ಎಂ. ಎಂ. ಇಸ್ಮಾಯಿಲ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ ಉತ್ತಪ್ಪ, ತಾಯಮ್ಮ, ಮೀನಾಕ್ಷಿ, ಜಯಂತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ, ಒಕ್ಕೂಟದ ಉಪಾಧ್ಯಕ್ಷೆ ವಸಂತಿ, ಕಾರ್ಯದರ್ಶಿ ಶೈಲಜ, ಸಹ ಕಾರ್ಯದರ್ಶಿ ಏಲ್ಯಮ್ಮ, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಶೈನಿ, ರೇವತಿ, ಕೃಷಿ ಸಖಿ ರಮ್ಯ, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಇದ್ದರು.