ಮಡಿಕೇರಿ, ಏ. ೧: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ೨೦೨೪-೨೫ನೇ ಜನವರಿ ಆವೃತ್ತಿ ಪ್ರವೇಶಾತಿಗೆ ೨೦೨೫ ರ ತಾ. ೩೧ ಕೊನೆಯ ದಿನವಾಗಿದೆ ಎಂದು ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ ಅವರು ತಿಳಿಸಿದ್ದಾರೆ.
ಕೆಲಸಕ್ಕೆ ಹೋಗುವ ಆಸಕ್ತರು ಕ.ರಾ.ಮು.ವಿ.ಯಲ್ಲಿ ಪ್ರವೇಶಾತಿ ಪಡೆಯಲು ಅನುಕೂಲ ಮಾಡಿಕೊಡುವ ಸಲುವಾಗಿ ೨೦೨೫ರ ತಾ. ೩೧ ರವರೆಗೆ ಸಾರ್ವತ್ರಿಕ ರಜಾ ದಿನಗಳಾದ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಕ.ರಾ.ಮು.ವಿ. ಮಡಿಕೇರಿ ಪ್ರಾದೇಶಿಕ ಕೇಂದ್ರ ಕಚೇರಿ ತೆರೆಯುವ ಮೂಲಕ ಪ್ರವೇಶಾತಿಗೆ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಕರಾಮುವಿ ಮಡಿಕೇರಿ ಪ್ರಾದೇಶಿಕ ಕೇಂದ್ರದಲ್ಲಿ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಸ್ನಾತಕ, ಸ್ನಾತಕೋತ್ತರ ಕೋರ್ಸ್ಗಳಾದ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಲಿಬ್‌ಐಎಸ್ಸಿ, ಬಿಎಸ್ಸಿ(ಜನರಲ್ ಐಟಿ), ಬಿಎಸ್‌ಡಬ್ಲುö್ಯ, ಎಂಎ, ಎಂಸಿಜೆ, ಎಂ.ಕಾA, ಎಂಎಸ್ಸಿ, ಎಂಲಿಬ್‌ಐಎಸ್ಸಿ, ಎಂಬಿಎ, ಎಂಸಿಎ, ಎಐಸಿಟಿಇ ಅಪ್ರೋವ್‌ಡ್) ಎಂಎಸ್‌ಡಬ್ಲುö್ಯ ಮತ್ತು ಪಿಜಿ ಸರ್ಟಿಫಿಕೇಟ್ ಡಿಪ್ಲೋಮಾ ಸರ್ಟಿಫಿಕೇಟ್ ಪ್ರೋಗ್ರಾಮ್ಸ್ಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಕರಾಮುವಿ ಪ್ರಾದೇಶಿಕ ನಿರ್ದೇಶಕರು ಮಡಿಕೇರಿ ಪ್ರಾದೇಶಿಕ ಕೇಂದ್ರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣ ಕಟ್ಟಡ, ಮಡಿಕೇರಿ-೫೭೧೨೦೧ ಹಾಗೂ ದೂ.ಸಂ. ೯೪೮೩೫೭೦೯೦೦, ೯೮೪೪೩೯೫೯೮೬, ೮೨೯೬೨೧೫೭೧೪, ೯೪೮೩೫೭೦೯೦೦ ಹಾಗೂ ೭೪೧೧೨೩೩೦೦೭ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ ತಿಳಿಸಿದ್ದಾರೆ.