ಚೆಯ್ಯAಡಾಣೆ, ಏ. ೧: ಸರಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮಾ (ಪಿಎಂಜೆಜೆಬಿವೈ) ಯೋಜನೆಯಡಿ ವರ್ಷಕ್ಕೆ ೪೩೬ ರೂಪಾಯಿ ಪಾವತಿಸಿ ಚೆಯ್ಯಂಡಾಣೆಯ ಚೇಲಾವರ ಗ್ರಾಮದ ಮಹಿಳೆ ೨ ಲಕ್ಷ ರೂಪಾಯಿ ಪರಿಹಾರ ಪಡೆದುಕೊಂಡಿದ್ದಾರೆ.
೨೦೧೬ರಲ್ಲಿ ಚೆಯ್ಯಂಡಾಣೆಯ ಚೇಲಾವರ ಗ್ರಾಮದ ದಿ.ಮೇದಪ್ಪ ಅವರ ಪುತ್ರ ಕೆ.ಎಂ.ಚAದ್ರಶೇಖರ್ ಎಂಬವರು ತನ್ನ ಹೆಸರಿನಲ್ಲಿ ಚೆಯ್ಯಂಡಾಣೆ ಕರ್ನಾಟಕ ಬ್ಯಾಂಕ್‌ನಲ್ಲಿ ವರ್ಷಕ್ಕೆ ೪೩೬ ರೂಪಾಯಿಯ ಪಿಎಂಜೆಜೆಬಿವೈ ವಿಮೆ ಮಾಡಿಸಿಕೊಂಡಿದ್ದರು. ಕಳೆದ ಕೆಲವು ತಿಂಗಳ ಹಿಂದೆ ಚಂದ್ರಶೇಖರ್ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದರು. ನಂತರ ಪತ್ನಿ ಲೀಲಾವತಿ ಖಾತೆಗೆ ರೂಪಾಯಿ ೨ ಲಕ್ಷ ಪರಿಹಾರ ದೊರೆತಿದೆ.
ಜೀವ ವಿಮೆ ಮಾಡಿಸುವ ಮೂಲಕ ಕೆಲವು ಸಂದರ್ಭಗಳಲ್ಲಿ ಸಂಕಷ್ಟವನ್ನು ಪಾರು ಮಾಡುವ ಸನ್ನಿವೇಶ ಒದಗಿ ಬರಲಿದೆ ಈ ಒಂದು ಜೀವ ವಿಮೆಯು ಸಾಮಾನ್ಯ ವರ್ಗದವರಿಗೆ ಸಹಕಾರಿಯಾಗಿದೆ,ತಿಂಗಳಿಗೆ ೩೬. ರೂಪಾಯಿಯಂತೆ ವಾರ್ಷಿಕ ೪೩೬ ರೂಪಾಯಿ ಪಾವತಿ ಮಾಡಿದರೆ ಯಾವುದೇ ಸಾವು ಸಂಭವಿಸಿದರು ಕೂಡ ಪರಿಹಾರ ಹಣ ದೊರೆಯಲಿದೆ. ಪತಿ ಅಕಾಲಿಕ ಮರಣ ಹೊಂದಿದ್ದಾರೆ ಅವರು ಮಾಡಿದ ವಿಮೆಯಿಂದ ೨ ಲಕ್ಷ ಪರಿಹಾರ ದೊರೆತಿದೆ ಅದನ್ನು ನಾನು ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ರೀತಿಯಲ್ಲಿ ಉಪಯೋಗಿಸಿಕೊಳ್ಳುವೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮಾ ಯೋಜನೆಯ ವಿಮೆ ಮಾಡಿಸಿ ಕೊಳ್ಳಿ ಇದರಿಂದ ನನಗೆ ಉಪಕಾರವಾಗಿದೆ ಎಂದು ಲೀಲಾವತಿ ತಿಳಿಸಿದ್ದಾರೆ. - ಅಶ್ರಫ್