ಮಡಿಕೇರಿ, ಏ. ೧: ವೀರಾಜಪೇಟೆ ಬಳಿಯ ಪೆರುಂಬಾಡಿಯಲ್ಲಿರುವ ಮ್ಯಾಗ್ನೋಲಿಯ ರೆಸಾರ್ಟ್ನ ಮಾಜಿ ನೌಕರ ರೆಸಾರ್ಟ್ ಮಾಲೀಕರಿಗೆ ವಂಚನೆ ಮಾಡಿರುವ ಬಗ್ಗೆ ದಾಖಲಾಗಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಸಮಗ್ರ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.
ಮ್ಯಾಗ್ನೋಲಿಯ ರೆಸಾರ್ಟ್ನಲ್ಲಿ ವ್ಯವಸ್ಥಾಪಕನಾಗಿದ್ದ ವೀರಾಜಪೇಟೆ ಗಾಂಧಿನಗರ ನಿವಾಸಿ ಪ್ರವೀಣ್ ಅರವಿಂದ್ ಎಂಬಾತ ವಂಚನೆ ಮಾಡಿರುವುದಾಗಿ ರೆಸಾರ್ಟ್ ಮಾಲೀಕ, ನಿವೃತ್ತ ಕ್ಯಾಪ್ಟನ್ ಶ್ರೀಕಾಂತ್ ಮಂಚಾಲ ಎಂಬವರು ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಈ ಸಂಬAಧ ಪ್ರವೀಣ್ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ಈ ಬಗ್ಗೆ ಪ್ರವೀಣ್ ಹಾಗೂ ಆತನ ಪತ್ನಿಯ ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಪ್ರವೀಣ್ ತನಗೆ ಅನ್ಯಾಯವಾಗಿದ್ದು, ನನ್ನ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಫೇಸ್‌ಬುಕ್‌ನಲ್ಲಿ ವೀಡೀಯೋ ಮಾಡಿ ಹರಿಯಬಿಟ್ಟಿದ್ದ. ಇದನ್ನು ಗಮನಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರವೀಣ್‌ನನ್ನು ಮೈಸೂರಿನ ಲಾಡ್ಜ್ ಒಂದರಲ್ಲಿ ಪತ್ತೆ ಹಚ್ಚಿದ್ದರು. ಈ ಸಂಬAಧವಾಗಿ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದರು.
ಮಾಲೀಕರಿಂದ ದೂರು
ಕಳೆದ ೨೦ ದಿವಸಗಳ ಹಿಂದೆ ರೆಸಾರ್ಟ್ ಮಾಲೀಕ ಶ್ರೀಕಾಂತ್ ಅವರು ಕಚೇರಿಗೆ ಆಗಮಿಸಿ, ತನ್ನ ರೆಸಾರ್ಟ್ನಲ್ಲಿ ಸಿಬ್ಬಂದಿಯಾಗಿದ್ದು, ನಂತರದಲ್ಲಿ ವ್ಯವಸ್ಥಾಪಕನಾಗಿ ಬಡ್ತಿ ಹೊಂದಿ ಕೆಲಸ ನಿರ್ವಹಿಸುತ್ತಿದ್ದ ಪ್ರವೀಣ್ ಹಣಕಾಸು, ಕಾಫಿ ಫಸಲು ವಹಿವಾಟು ಸೇರಿದಂತೆ ಸುಮಾರು ೨ ರಿಂದ ೩ ಕೋಟಿಯಷ್ಟು ವಂಚನೆ ಮಾಡಿರುವುದಾಗಿ ದೂರು ನೀಡಿದ್ದರು.
(ಮೊದಲ ಪುಟದಿಂದ) ಈ ಸಂಬAಧ ದಾಖಲೆಗಳನ್ನು ಒದಗಿಸುವಂತೆ ತಿಳಿಸಿದ ಮೇರೆಗೆ ಕಳೆದ ತಾ. ೩೦ ರಂದು ಪ್ರವೀಣ್ ಹೊಂದಿರುವ ೪೦ ರಿಂದ ೫೦ ಲಕ್ಷದ ಮನೆ, ಜಾಗ ಖರೀದಿಯ ಒಪ್ಪಂದ ಪತ್ರ, ಚಿನ್ನಾಭರಣಗಳ ಈಡಿನ ಸಾಲದ ಬಗ್ಗೆ, ವಿಮೆ ಹಾಗೂ ರೆಸಾರ್ಟ್ಗೆ ಬರುವ ಗ್ರಾಹಕರಿಂದ ಹಣ ಪಡೆದಿರುವ ಬಗ್ಗೆ ದಾಖಲೆಗಳನ್ನು ವೀರಾಜಪೇಟೆ ನಗರ ಠಾಣೆಗೆ ನೀಡಿದ ಹಿನ್ನೆಲೆಯಲ್ಲಿ ಪ್ರವೀಣ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ಪ್ರವೀಣ್ ಹಾಗೂ ಆತನ ಪತ್ನಿಯ ಬ್ಯಾಂಕ್ ಖಾತೆಗೂ ಹಣ ವರ್ಗಾವಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಪ್ರವೀಣ್ ಹಾಗೂ ಆತನ ಪತ್ನಿಯನ್ನು ಕೂಡ ವಿಚಾರಣೆ ಮಾಡಲಾಗಿತ್ತು. ಪ್ರವೀಣ್‌ಗೂ ಕೂಡ ಸೂಕ್ತ ದಾಖಲಾತಿಗಳನ್ನು ಒದಗಿಸುವಂತೆ ಸೂಚಿಸಲಾಗಿತ್ತು ಎಂದು ತಿಳಿಸಿದರು.
ದೂರವಾಣಿ ಮೂಲಕ ಮಾತು
ವಿಚಾರಣೆ ನಡೆದ ಬಳಿಕ ಆರೋಪ ಎದುರಿಸುತ್ತಿರುವ ಪ್ರವೀಣ್ ಎಸ್‌ಪಿಯವರಿಗೆ ದೂರವಾಣಿ ಕರೆ ಮಾಡಿ ತಾನು ಯಾವುದೇ ತಪ್ಪು ಮಾಡಿಲ್ಲವೆಂದು ಹೇಳಿಕೊಂಡಿದ್ದ. ಅದಕ್ಕೆ ಪೂರಕವಾದ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಿದ್ದರು. ದಾಖಲೆ ಸಲ್ಲಿಸಲು ಅವಕಾಶವಿದ್ದರೂ ಇದುವರೆಗೂ ದಾಖಲೆ ಸಲ್ಲಿಸದೆ ವೀಡೀಯೋ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಎಸ್‌ಪಿ ಹೇಳಿದರು.
ಸಮಗ್ರ ತನಿಖೆ
ಈ ಪ್ರಕರಣದಲ್ಲಿ ಈರ್ವರನ್ನೂ ತನಿಖೆಗೆ ಒಳಪಡಿಸಲಾಗುವುದು. ಪ್ರವೀಣ್‌ಗೆ ಸಂಬAಧಿಸಿದ ಬ್ಯಾಂಕ್ ಖಾತೆ ವ್ಯವಹಾರದ ದಾಖಲೆ ಹಾಗೂ ಆಸ್ತಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದು. ಪ್ರವೀಣ್ ಆರೋಪ ಮಾಡಿರುವಂತೆ ರೆಸಾರ್ಟ್ನಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ, ಜಾಗ ಒತ್ತುವರಿ ಆಗಿದ್ದರೆ ಕಂದಾಯ, ಅರಣ್ಯ ಇಲಾಖೆ ಮೂಲಕ ಪರಿಶೀಲನೆ ಮಾಡಿ ಕ್ರಮಕೈಗೊಳ್ಳಲು ಸಂಬAಧಿಸಿದವರನ್ನು ಕೋರಲಾಗುವುದು ಎಂದು ಎಸ್‌ಪಿ ತಿಳಿಸಿದರು.
ಪ್ರತ್ಯೇಕವಾಗಿ ವಿಚಾರಣೆ
ವಂಚನೆ ಆರೋಪ ಎದುರಿಸುತ್ತಿರುವ ಪ್ರವೀಣ್‌ನನ್ನು ಮೈಸೂರಿನ ಲಾಡ್ಜ್ನಲ್ಲಿ ಪತ್ತೆ ಹಚ್ಚಲಾಗಿದೆ. ಆತ ವಿಚಾರಣೆಗೆ ಹಾಜರಾಗಬೇಕಿದೆ. ಆತನಿಗೆ ಭಯ ಇರುವುದರಿಂದ ವಕೀಲರು ಅಥವಾ ಸಂಬAಧಿಕರ ಮೂಲಕ ವಿಚಾರಣೆಗೆ ಹಾಜರಾಗಬಹುದು. ಪಾರದರ್ಶಕವಾಗಿ, ಪ್ರತ್ಯೇಕವಾಗಿ ತನಿಖೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಆಧಾರ ರಹಿತ ಆರೋಪಗಳಡಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ದಾಖಲೆಗಳನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಮಾಹಿತಿ ನೀಡಿದರು.