ತಾ. ೬ ರಂದು ಸಾಕ್ಷಾತ್ ಶ್ರೀರಾಮನಿಂದಲೇ ಪ್ರತಿಷ್ಠಾಪಿಸಲ್ಪಟ್ಟಿದೆ ನಂಬಿಕೆಯ ಕಣಿವೆ ಶ್ರೀರಾಮಲಿಂಗೇಶ್ವರ ಬ್ರಹ್ಮರಥೋತ್ಸವ

ಕಣಿವೆ: ಕೊಡಗು ಜಿಲ್ಲೆಯಲ್ಲಿರುವ ಅನೇಕ ಪವಿತ್ರ ಪುಣ್ಯಕ್ಷೇತ್ರಗಳ ಪೈಕಿ ಕುಶಾಲನಗರ ತಾಲೂಕಿನ ಕಣಿವೆ ಗ್ರಾಮದಲ್ಲಿರುವ ಐತಿಹಾಸಿಕ ದೇವಾಲಯ ಶ್ರೀ ರಾಮಲಿಂಗೇಶ್ವರ ದೇವಾಲಯವೂ ಒಂದು ಈ ದೇವಾಲಯದ ಬ್ರಹ್ಮರಥೋತ್ಸವ ಏಪ್ರಿಲ್ ೬ ರಂದು ಜರುಗಲಿದೆ. ಈ ಹಿನ್ನೆಲೆಯಲ್ಲಿ ದೇವಾಲಯ ಸಮಿತಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ.

ಉತ್ತರಾಭಿಮುಖವಾಗಿ ಹರಿದಿರುವ ಜೀವನದಿ ಕಾವೇರಿ ದಂಡೆಯಲ್ಲಿ ಇರುವ ಈ ದೇವಾಲಯದ ಗರ್ಭಗುಡಿಯ ಲಿಂಗವನ್ನು ಅಯೋಧ್ಯೆ ಬಿಟ್ಟು ವನವಾಸಕ್ಕೆಂದು ತೆರಳಿದ ಸಾಕ್ಷಾತ್ ಶ್ರೀರಾಮನೇ ಇಲ್ಲಿಗೆ ಬಂದು ಖುದ್ದು ಪ್ರಾಣ ಪ್ರತಿಷ್ಠಾಪಿಸಿದ ಲಿಂಗವೇ ಈ ರಾಮಲಿಂಗ ಎಂಬುದು ಪುರಾತನ ಕಾಲದಿಂದಲೂ ಬಂದಿರುವ ಪ್ರತೀತಿ.

ಅಪೂರ್ವ ಪ್ರಕೃತಿ ಸೌಂದರ್ಯದಿAದ ರಾರಾಜಿಸಿರುವ ಬೆಟ್ಟಗುಡ್ಡಗಳ ರಾಶಿಯ ನಡುವೆ ಲೋಕಪಾವನೆ ಕಾವೇರಿ ನದಿಯ ದಂಡೆಯ ಮೇಲೆ ಇರುವ ರಾಮಲಿಂಗೇಶ್ವರ ಸನ್ನಿಧಿಯ ಎಡಭಾಗದ ಬೆಟ್ಟದ ಮೇಲೆ ಹರಿಹರೇಶ್ವರ ಹಾಗೂ ಬಲಬದಿಯ ಬೆಟ್ಟದ ಮೇಲೆ ಲಕ್ಷö್ಮಣೇಶ್ವರ ದೇವಾಲಯಗಳಿವೆ.

ಅಯೋಧ್ಯೆಯಿಂದ ಕಣಿವೆಗೆ ಬಂದ ರಾಮ

ಅಯೋಧ್ಯೆಯನ್ನು ತೊರೆದು ವನವಾಸಕ್ಕೆಂದು ಶ್ರೀರಾಮನು ಆಗಮಿಸುತ್ತಿದ್ದ ಸಂದರ್ಭ ಬೆಟ್ಟಗಳು ಹಾಗೂ ನದಿ ದಂಡೆಗಳಲ್ಲಿ ವಾಸವಿದ್ದ ಈತನ ಭಕ್ತರು ಲಿಂಗವನ್ನು ಪ್ರತಿಷ್ಠಾಪಿಸಿ ರಾಮಲಿಂಗೇಶ್ವರ ಎಂದು ಜಪಿಸುತ್ತಾ ಹಾಗೂ ಸ್ತುತಿಸುತ್ತಾ ಶ್ರೀರಾಮನ ಧ್ಯಾನದಲ್ಲಿ ಮಗ್ನರಾಗುತ್ತಿದ್ದ ಸಂದರ್ಭ ಸಾಕ್ಷಾತ್ ಶ್ರೀರಾಮನೇ ಈ ಕಣಿವೆಯ ಬೆಟ್ಟದ ತಪ್ಪಲಿನ ಕಾವೇರಿ ನದಿ ದಂಡೆಗೆ ಬಂದು ಲಿಂಗವನ್ನು ಪ್ರತಿಷ್ಠಾಪಿಸಿದನೆಂದು ಪೂರ್ವಜರ ನಂಬಿಕೆ ಎಂದು ಕಣಿವೆ ಗ್ರಾಮದ ಕೆ.ಎಸ್. ಮಾಧವ ಹೇಳುತ್ತಾರೆ. ಶ್ರೀರಾಮನಿಂದ ಪ್ರತಿಷ್ಠಾಪಿಸಲ್ಪಟ್ಟ ರಾಮಲಿಂಗ ಮೂರ್ತಿಯ ಸನ್ನಿಧಿಯ ಕಾರಣಕ್ಕೆ ಈ ಗ್ರಾಮಕ್ಕೆ ರಾಮಸ್ವಾಮಿ ಕಣಿವೆ ಎಂದು ನಾಮಾಂಕಿತಗೊAಡ ಬಗ್ಗೆ ದೇವಾಲಯದ ಆವರಣದಲ್ಲಿ ಇರುವ ಲಿಖಿತ ರೂಪದಲ್ಲಿರುವ ಬರವಣಿಗೆಯೇ ಸಾಕ್ಷಿ ಎಂದು ಅವರು ವಿವರಿಸಿದರು.

ಈ ದೇವಾಲಯದ ಗರ್ಭಗುಡಿಯಲ್ಲಿ ರಾಮ, ಸೀತೆ ಹಾಗೂ ಆಂಜನೇಯ ಮೂರ್ತಿಗಳಿವೆ. ಇಲ್ಲಿ ಪ್ರತಿ ವರ್ಷ ರಾಮನವಮಿಯಂದು ಶ್ರೀ ಸ್ವಾಮಿಯ ವಾರ್ಷಿಕ ಬ್ರಹ್ಮರಥೋತ್ಸವ ನಡೆಯುತ್ತದೆ.

ರಾಮನ ಶಿವಲಿಂಗಕ್ಕೆ ಕಾಶಿಯ ತೀರ್ಥಸ್ನಾನ

ರಥೋತ್ಸವದ ಮುನ್ನಾ ದಿನ ಕಾಶಿಯಿಂದ ಅಂಚೆಯಲ್ಲಿ ತರಿಸುವ ಪವಿತ್ರ ಗಂಗಾ ತೀರ್ಥವನ್ನು ಅಲಂಕೃತ ಮಂಟಪದಲ್ಲಿಟ್ಟು ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆಯಲ್ಲಿ ರಾಮಲಿಂಗೇಶ್ವರ ಸನ್ನಿಧಿಗೆ ನೆರೆಯ ಹೆಬ್ಬಾಲೆ ಗ್ರಾಮಸ್ಥರು ತಂದು ರಾಮಲಿಂಗದ ಮೇಲೆ ಅಭಿಷೇಕ ಮಾಡಿದ ಬಳಿಕವಷ್ಟೇ ರಥ ಚಾಲನೆಗೊಳ್ಳುವುದು ಇಂದಿಗೂ ನಡೆದು ಬಂದಿರುವ ವಾಡಿಕೆಯಾಗಿದೆ.

ಕಾಶಿಯಲ್ಲಿನ ಸ್ಮಶಾನದ ಹೋಲಿಕೆ

ಈ ಸನ್ನಿಧಿಯಲ್ಲಿನ ದೇಗುಲದ ಗೋಪುರದ ಎದುರು ಸ್ಮಶಾನವೂ ಇದ್ದು ಇದು ಕಾಶಿಯಲ್ಲಿನ ಪರಿಸರವನ್ನೇ ಹೋಲುತ್ತದೆ. ಜೊತೆಗೆ ರಾಷ್ಟçವ್ಯಾಪಿ ಇರುವ ಅನೇಕ ಪುರಾಣ ಪ್ರಸಿದ್ಧ ದೇವಾಲಯಗಳಿಗಿಂತ ಈ ರಾಮಲಿಂಗೇಶ್ವರ ಸನ್ನಿಧಿಗೆ ತನ್ನದೇ ಆದ ವಿಶೇಷ ಐತಿಹ್ಯ ಇರುವುದಾಗಿ ಹಿರಿಯರು ಹೇಳುತ್ತಾರೆ.

ರಾಮನಿಂದಲೇ ಲಿಂಗ ಪ್ರತಿಷ್ಠಾಪನೆ

ಈ ಪುರಾಣ ಪುಣ್ಯ ಕ್ಷೇತ್ರದ ಪೌರಾಣಿಕ ಹಿನ್ನೆಲೆಯನ್ನು ಅವಲೋಕಿಸುವುದಾದರೆ ತ್ರೇತಾಯುಗದ ಕೊನೆಯ ಹಂತದಲ್ಲಿ ಶ್ರೀರಾಮನು ಕಣಿವೆಗೆ ಬಂದು ಹನುಮಂತನಿಗೆ ಲಿಂಗವನ್ನು ತರಲು ಕಾಶಿಗೆ ಕಳಿಸಿ, ಲಿಂಗ ಪ್ರತಿಷ್ಠಾಪನಾ ಕಾರ್ಯದಲ್ಲಿ ಮಗ್ನನಾಗುತ್ತಾನೆ. ಆದರೆ ಹನುಮಂತ ಕಾಶಿಯಿಂದ ಬರುವುದು ತಡವಾದಾಗ ಕಾವೇರಿ ನದಿಯೊಳಗಿನ ಪವಿತ್ರ ಮಣ್ಣಿನಿಂದಲೇ ಶ್ರೀರಾಮ ಲಿಂಗವನ್ನು ಪ್ರತಿಷ್ಠಾಪಿಸಿದ ವಿಷಯ ತಿಳಿದ ಹನುಮಂತ ತಂದ ಲಿಂಗದೊAದಿಗೆ ವ್ಯಥೆಪಡುತ್ತಿದ್ದಾಗ ಹನುಮಂತ ತಂದ ಲಿಂಗವನ್ನು ಲಕ್ಷö್ಮಣನಿಂದ ಪ್ರತಿಷ್ಠಾಪಿಸಿದ್ದರಿಂದ ಲಕ್ಷö್ಮಣೇಶ್ವರ ದೇಗುಲವಾಗುತ್ತದೆ. ಹರಿಹರೇಶ್ವರ ದೇವಾಲಯ ಉದ್ಭವವಾದುದು ಎಂದು ಹೇಳಲಾಗುತ್ತಿದೆ.

ಪಂಚಲಿAಗಗಳ ಪುಣ್ಯಕ್ಷೇತ್ರ

ಕಣಿವೆಯ ದೇವಾಲಯದ ಈ ಪುಣ್ಯಕ್ಷೇತ್ರದಲ್ಲಿ ರಾಮ ಹಾಗೂ ಲಕ್ಷö್ಮಣರಿಂದ ಪ್ರತಿಷ್ಠಾಪಿಸಿದ ಲಿಂಗಗಳಿಗೆ ದೇವಾಲಯ ನಿರ್ಮಿಸಿ ನಿತ್ಯವೂ ಪೂಜೆ - ಪುನಸ್ಕಾರಗಳು ನೆರವೇರುತ್ತಿವೆ. ಅಲ್ಲದೇ ಇದೇ ಸನ್ನಿಧಿಯಲ್ಲಿ ಬಸವೇಶ್ವರ, ಲಕ್ಷö್ಮಣೇಶ್ವರ, ಹರಿಹರೇಶ್ವರ, ಗುಹೇಶ್ವರ ಹಾಗೂ ಶ್ರೀರಾಮಲಿಂಗೇಶ್ವರ ಎಂಬ ಪಂಚಲಿAಗಗಳಿದ್ದು ಇದು ದಕ್ಷಿಣದ ಕಾಶಿಯೆಂದೇ ಜಗಜನಿತವಾಗಿದೆ.

- ಕೆ.ಎಸ್. ಮೂರ್ತಿನಾಪೋಕ್ಲು: ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮದ ಭಗವತಿ ದೇವಾಲಯದಲ್ಲಿ ಭಗವತಿ ದೇವರ ವಾರ್ಷಿಕ ಹಬ್ಬವು ವಿಜೃಂಭಣೆಯಿAದ ನಡೆಯಿತು.

ಉತ್ಸವದ ಅಂಗವಾಗಿ ಪಟ್ಟಣಿ ಹಬ್ಬ ಜರುಗಿ ನಿಗದಿತ ಸಮಯಕ್ಕೆ ಸರಿಯಾಗಿ ಗ್ರಾಮಸ್ಥರು, ಭಕ್ತರು ದೇವಾಲಯದಲ್ಲಿ ಸೇರಿ ಸಾಂಪ್ರದಾಯಿಕ ಬೊಳಕಾಟ್ ನೃತ್ಯ ಪ್ರದರ್ಶಿಸಿದರು. ಮಧ್ಯಾಹ್ನ ೧೨ ಗಂಟೆಗೆ ಎತ್ತುಪೋರಾಟದೊಂದಿಗೆ ದೇವಾಲಯಕ್ಕೆ ಪ್ರದಕ್ಷಿಣೆ ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ದೇವರ ನೃತ್ಯಬಲಿ ಜರುಗಿತು. ಉತ್ಸವದಲ್ಲಿ ಭಾಗವಹಿಸಿದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತಾದಿಗಳು ತಮ್ಮ ಇಷ್ಟಾರ್ಥಕ್ಕೆ ದೇವರಿಗೆ ವಿವಿಧ ಪೂಜೆ, ಹರಕೆ, ಕಾಣಿಕೆ ಒಪ್ಪಿಸಿ ಸೇವೆಗಳನ್ನು ನೆರವೇರಿಸಿಕೊಂಡರು.

ಪವಿತ್ರ ಕಾವೇರಿ ನದಿಯಲ್ಲಿ ದೇವರ ಜಳಕ ಮತ್ತು ದೇವಾಲಯದಲ್ಲಿ ದೇವರ ನೃತ್ಯಬಲಿ ನಡೆಯಿತು. ಪೂಜಾ ವಿಧಿವಿಧಾನಗಳನ್ನು ದೇವಾಲಯದ ಅರ್ಚಕ ಶಶಿಧರ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ತಕ್ಕ ಮುಖ್ಯಸ್ಥರು. ಭಕ್ತಾದಿಗಳು ಪಾಲ್ಗೊಂಡಿದ್ದರು.ಚೆಟ್ಟಳ್ಳಿ: ಚೆಟ್ಟಳ್ಳಿಯ ಈರಳೆಗ್ರಾಮದ ಪೊವ್ವೋದಿ (ಭಗವತಿ) ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.

ಸುಮಾರು ೩೦೦ವರ್ಷದ ಇತಿಹಾಸ ಹೊಂದಿರುವ ಈರಳೆ ಪೊವ್ವೋದಿ (ಭಗವತಿ) ದೇವಾಲಯದ ಉತ್ಸವವು ಸಂಪ್ರದಾಯದAತೆ ದೇವತಕ್ಕರು ಹಾಗೂ ಊರಿನ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ದುಡಿಕೊಟ್ಟ್ ಹಾಡಿನೊಂದಿಗೆ ದೇವರ ಜ್ಯೋತಿಯನ್ನು ತೆಗೆದು ಬೊಳಕ್ ಮರದಲ್ಲಿಟ್ಟು ಹಬ್ಬಕಟ್ಟು ಬೀಳಲಾಯಿತು.

ಪೊರಿಮಂಡ ಕುಟುಂಬದ ಐನ್‌ಮನೆಯಿಂದ ಊರು ತಕ್ಕರಾದ ಪೊರಿಮಂಡ ರವಿ ನಾಣಯ್ಯನವರ ಸಮ್ಮುಖದಲ್ಲಿ ದೇವರ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ಪೊರಿಮಂಡ, ಬಲ್ಲಾರಂಡ ಕುಟುಂಬದ ಎತ್ತ್ ಪೋರಾಟವನ್ನು ದೇವನೆಲೆಯಲ್ಲಿ ಅರ್ಪಿಸಲಾಯಿತು. ನಂತರದಲ್ಲಿ ಕೈ ತಲೆ ಆಟ್, ಬೊಳಕಾಟ್ ನೆರವೇರಿತು. ದೇವತಕ್ಕರಾದ ಬಲ್ಲಾರಂಡ ರಾಜಪ್ಪ ಅವರ ಸಮ್ಮುಖದಲ್ಲಿ ಪೊವ್ವೊದ್ದಿಯ ಉತ್ಸವದ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ತಾ. ೮ ರಂದು ಉತ್ಸವ

ಮಡಿಕೇರಿ: ಕುಟ್ಟ ಗ್ರಾಮದ ಕೋಗಿಲವಾಡಿ ಶ್ರೀ ದೊಡ್ಡಬಸವೇಶ್ವರ ದೇವರ ಉತ್ಸವ ತಾ. ೮ ರಂದು ೧೧ ಗಂಟೆಗೆ ನಡೆಯಲಿದೆ.

ಆ ದಿನ ಮರವಣಿಗೆ ಮತ್ತು ದೇವರ ಅವಭೃತ ಸ್ನಾನ ಜರುಗಲಿದೆ.ನಾಪೋಕ್ಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್, ಮಡಿಕೇರಿ ತಾಲೂಕು ಹಾಗೂ ಮಡಿಕೇರಿ ವಲಯ ಮತ್ತು ಶ್ರೀ ರಾಜರಾಜೇಶ್ವರಿ ದೇವಸ್ಥಾನ. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗ ದೊಂದಿಗೆ ಗ್ರಾಮ ಸುಭಿಕ್ಷಾ ಕಾರ್ಯಕ್ರಮವನ್ನು ಕರ್ಣಂಗೇರಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಆಯೋಜಿಸಲಾಯಿತು. ದೇವಸ್ಥಾನದ ಧರ್ಮದರ್ಶಿಗಳಾದ ಗೋವಿಂದ ಸ್ವಾಮಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಶ್ರೀ ರಾಜ ರಾಜೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಗ್ರಾಮಾಭಿವೃದ್ಧಿ ಯೋಜನೆಯ ಧ್ಯೇಯ ಮತ್ತು ಉದ್ದೇಶಗಳನ್ನ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮದ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಲ್ಲದೆ ಈಗಾಗಲೇ ವಿತರಣೆ ಆಗಿರುವ ಅನುದಾನಗಳ ವಿವರವನ್ನು ತಿಳಿಸಿದರು. ಕೊಡಗು ಜಿಲ್ಲಾ ಜನಜಾಗೃತಿ ಸದಸ್ಯರು ಟಿ.ಎಂ. ಅಯ್ಯಪ್ಪ, ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯ ಅವರು ಮಾತನಾಡಿದರು. ವೇದಿಕೆಯಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ದೇವಸ್ಥಾನ ಅಧ್ಯಕ್ಷ ಸುದೀರ್, ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಣಿ ಉತ್ತಪ್ಪ, ಕರ್ಣಂಗೇರಿ ಗ್ರಾಮ ಪಂಚಾಯಿತಿ ಸದಸ್ಯ ಜಾನ್ಸನ್ ಪಿಂಟು, ಗರಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೋಜಮ್ಮ ಇವರುಗಳು ಗ್ರಾಮ ಸುಭಿಕ್ಷ ಕಾರ್ಯ ಕ್ರಮವನ್ನು ಕುರಿತು ಮಾತುಗಳ ನ್ನಾಡಿದರು. ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪುರುಷೋತ್ತಮ್, ಯೋಜನೆಯ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ಕಚೇರಿ ಸಹಾಯಕರು ಹಾಗೂ ವಲಯದ ಸೇವಾ ಪ್ರತಿನಿಧಿಗಳು ಮತ್ತು ೧೧ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಗತಿ ಬಂದು ಮತ್ತು ಸ್ವ ಸಹಾಯ ಸಂಘದ ಸದಸ್ಯರುಗಳು ಹಾಜರಿದ್ದರು.ನಾಪೋಕ್ಲು: ಪೊನ್ನು ಮುತ್ತಪ್ಪ ದೇವಸ್ಥಾನ ಹಾಗೂ ಎರಡನೇ ಪರಶಿನಿ ಎಂದು ಪ್ರಖ್ಯಾತವಾಗಿರುವ ನಾಪೋಕ್ಲುವಿನ ಶ್ರೀ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವನ್ನು ತಾ. ೩ ರಿಂದ ೫ ರವರೆಗೆ ವಿಜೃಂಭಣೆ ಯಿಂದ ಆಚರಿಸಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ. ಚಂದ್ರನ್ ಹೇಳಿದರು. ದೇವಾಲ ಯದ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದ ಅಂಗವಾಗಿ ತಾ. ೩ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ ಮತ್ತು ಶುದ್ಧ ಕಲಶವನ್ನು ಕೇರಳ ನೀಲೇಶ್ವರದ ಮುರಳಿ ಕೃಷ್ಣತಂತ್ರಿ ಅವರಿಂದ ನಡೆಸಲಾಗುವುದು. ರಾತ್ರಿ ೮.೩೦ ಗಂಟೆಗೆ ಗುರುಪೂಜೆ ಹಾಗೂ ಶ್ರೀದೇವಿ ಪೂಜೆ ನಡೆಯಲಿದೆ. ತಾ. ೪ ರಂದು ಮಧ್ಯಾಹ್ನ ಪೈಂಗುತ್ತಿ ಹಾಗೂ ಸಂಜೆ ಶ್ರೀ ಮುತ್ತಪ್ಪ ದೇವರ ಕಲಶ ನಡೆಯಲಿದೆ.

ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಪ್ರಖ್ಯಾತ ಕೇರಳ ಚಂಡಗಳೊAದಿಗೆ ನಾಪೋಕ್ಲು ಪೇಟೆಯ ಮುಖ್ಯಬೀದಿಯಲ್ಲಿ ಸನ್ನಿಧಾನಕ್ಕೆ ಮೆರವಣಿಗೆ ಮೂಲಕ ಆಗಮನವಾಗಲಿದೆ. ರಾತ್ರಿ ವೆಳ್ಳಾಟಂ ಬಳಿಕ ಕುಟ್ಟಿಚಾತ ಮತ್ತು ಗುಳಿಗ ದೇವರ ವೆಳ್ಳಾಟಂ ನಡೆಯಲಿದೆ ಎಂದರು. ತಾ. ೫ ರಂದು ಗುಳಿಗ ಕೋಲ, ಬಳಿಕ ಕುಟ್ಟಿಚಾತ ಕೋಲ ಹಾಗೂ ತಿರುವಪ್ಪನ್ ಮತ್ತು ಮುತ್ತಪ್ಪ ತೆರೆ ಜರುಗಲಿದೆ. ಉತ್ಸವದ ಅಂಗವಾಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಕೆ. ತಂಗ, ಚಿನ್ನ, ಕಾರ್ಯದರ್ಶಿ ರಾಜೀವನ್, ಉಪ ಕಾರ್ಯದರ್ಶಿ ಮನೋಹರ್, ಖಜಾಂಚಿ ಕಿಶೋರ್ ಪಿ.ಸಿ., ದೇವಾಲಯದ ಪೂಜಾರಿ ಹರಿದಾಸ್ ಮತ್ತು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.ವೀರಾಜಪೇಟೆ: ವೀರಾಜಪೇಟೆ ನಗರದ ಮೀನುಪೇಟೆಯ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ವತಿಯಿಂದ ೮೧ನೇ ವಾರ್ಷಿಕ ತೆರೆ ಮಹೋತ್ಸವ ನಡೆಯಿತು. ಈ ಸಂದರ್ಭ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕಾನಾಡ್ ಎಡಯನ್ನೂರು ನಿವಾಸಿ ನೆಲ್ಲಿತರಸ್ಸಿಯಿಲ್ ಚಂದು ಪಣಿಕರ್ ಎಂಬವರ ಪುತ್ರ ರಾಜನ್ ಪ್ರಾಯ ೬೪ ವರ್ಷ ಅವರಿಗೆ ದೇಗುಲದಲ್ಲಿ ಸಲ್ಲಿಸಿದ ಸುದೀರ್ಘ ದೈವ ಕೋಲ ಸೇವೆಯನ್ನು ಪರಿಗಣಿಸಿ ಪಣಿಕರ್ ಪಟ್ಟ ನೀಡಿ ಗೌರವಿಸಲಾಯಿತು. ಕೇರಳ ರಾಜ್ಯದ ಸಾಂಪ್ರದಾಯಿಕ ಪುರಾತನ ದೇವಾಲಯಗಳಲ್ಲಿ ಸೇವೆ ಮಾಡುವ ವಿಶೇಷ ವ್ಯಕ್ತಿಗಳನ್ನು ಗುರುತಿಸುವುದು ವಾಡಿಕೆಯಾಗಿದೆ. ದೇವಾಲಯಗಳಲ್ಲಿ ನಡೆಯುವ ವಿಶೇಷ ಪೂಜೆಗಳು, ವಾರ್ಷಿಕ ಉತ್ಸವಗಳು ಹಾಗೂ ಇತರ ಸೇವೆಗಳಲ್ಲಿ ಸಕ್ರೀಯರಾಗಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟ ವ್ಯಕ್ತಿಗಳನ್ನು ಗಣನೆ ಮಾಡುವುದು ಸಾಂಪ್ರದಾಯವಾಗಿದೆ.

ಶ್ರೀ ರಾಜನ್ ಅವರ ತಂದೆ ಚಂದು ಪಣಿಕರ್, ತಾತ ಕಣ್ಣನ್ ಪಣಿಕರ್ ಅವರುಗಳ ಕುಟುಂಬ ಶ್ರೀ ಮುತ್ತಪ್ಪನ್ ದೈವದ ವಿವಿಧ ಪ್ರಕಾರಗಳ ಕೋಲಗಳನ್ನು ಕೇರಳ, ಕರ್ನಾಟಕ ರಾಜ್ಯದ ವಿವಿಧೆಡೆಗಳಲ್ಲಿ ಕೋಲ ಕಟ್ಟಿ ನಡೆಸಿಕೊಂಡು ಬಂದವರು. ಇವರುಗಳ ಸೇವೆ ಸುದೀರ್ಘ ಅವಧಿಗೆ ಮೀಸಲಾಗಿರುತ್ತದೆ.

ರಾಜನ್ ಅವರು ತನ್ನ ಅಜ್ಜ ಕಣ್ಣನ್ ಪಣಿಕರ್ ಅವರೊಂದಿಗೆ ವೀರಾಜಪೇಟೆ ಮುತ್ತಪ್ಪ ದೇಗುಲಕ್ಕೆ ಆಗಮಿಸುತಿದ್ದರು. ಬಳಿಕ ತಂದೆಯೊAದಿಗೆ ಹೀಗೆ ಮುಂದುವರೆದ ದೈವ ಕೋಲ ಕಟ್ಟುವ ಕಾಯಕದಲ್ಲಿ ತೊಡಗಿ ಸುಮಾರು ೫೦ ವರ್ಷಗಳು ಸಂದಿವೆ ಸುಮಾರು ೧೨ ವರ್ಷಗಳ ಕಾಲ ವಸೂರಿ ಮಾಲ ತೆರೆನಂತರ ಮೂವತ್ತು ವರ್ಷಗಳು ಶಾಸ್ತಪ್ಪನ್ ತೆರೆಯನ್ನು ಕಟ್ಟುತ್ತಾ ಬಂದಿದ್ದಾರೆ. ಇವರು ಶ್ರೀ ಚೈತನ್ಯ ಮಡಪ್ಪುರ ಶ್ರೀ ಮುತ್ತಪ್ಪನ್ ದೇವಸ್ಥಾನಕ್ಕೆ ನೀಡಿರುವ ಸುದೀರ್ಘ ಸೇವೆಯನ್ನು ಪರಿಗಣಿಸಿ ದೇವಾಲಯದ ಆಡಳಿತ ಮಂಡಳಿ ಮತ್ತು ಉತ್ಸವ ಸಮಿತಿ ಹಾಗೂ ಭಕ್ತಜನಗಳ ಸಮ್ಮುಖದಲ್ಲಿ ದೈವಿಕ ವಿಧಿವಿಧಾನಗಳನ್ನು ಅನುಸರಿಸಿಕೊಂಡು ಶಾಸ್ತçದ ಪ್ರಕಾರ ಶ್ರೀ ರಾಜನ್ ಅವರಿಗೆ ಗೌರವ "ಪಣಿಕರ್" ಪಟ್ಟ ನೀಡಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಶ್ರೀ ಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯದ ಅಧ್ಯಕ್ಷ ಟಿ.ಕೆ. ರಾಜನ್ ಅವರು ಇದು ನಮಗಳಿಗೆ ಸುದಿನದ ಸಂದರ್ಭವಾಗಿದೆ. ದೇವಾಲಯದಲ್ಲಿ ನಡೆಯುವ ದೈವ ಕಾರ್ಯಗಳಿಗೆ ತನ್ನ ದೈವತ್ವವಾದ ಧಾರ್ಮಿಕ ಕಾರ್ಯ, ದೈವ ಕೋಲ ಕಟ್ಟುವ ಹಿರಿಯ ದೈವಕರ್ಮಿಯೋರ್ವರಿಗೆ ಪಣಿಕರ್ ಗೌರವ ಪದವಿ ಪ್ರದಾನ ಮಾಡುತ್ತಿರುವುದು ಸಂತಸ ತಂದಿದೆ. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಗೌರವ ಅಧ್ಯಕ್ಷ ಗೋವಿಂದನ್ ಟಿ.ಎಸ್., ಉಪಾಧ್ಯಕ್ಷ ವಾಸು ಸಿ.ಆರ್., ಕಾರ್ಯದರ್ಶಿ ಪ್ರಭಾಕರನ್, ಆಡಳಿತ ಮಂಡಳಿ ಸದಸ್ಯರುಗಳಾದ ವಲ್ಸನ್, ಪ್ರಕಾಶ್ ಆಲಕಂಡಿ ದೇವಸ್ಥಾನದ ಉತ್ಸವ ಸಮಿತಿಯ ಸದಸ್ಯರುಗಳಾದ ಸುಮೇಶ್ ಪಿ.ಜಿ., ಬಾಬು ಸಿ.ಆರ್., ಸೈಜು ಎಂ.ಕೆ., ದಿನೇಶ್ ನಂಬಿಯಾರ್, ರಂಜಿತ್ ಟಿ.ಜಿ., ಜನಾರ್ದನ, ಗಣೇಶ್ ಟಿ.ಆರ್., ಸತೀಶ್, ಸಜೀವನ್, ಸಂತೋಷ್ ಸೇರಿದಂತೆ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.ಪರಿವಾರ ದೈವಗಳ ವಾರ್ಷಿಕ ಉತ್ಸವ

*ಗೋಣಿಕೊಪ್ಪ: ತಿತಿಮತಿ ಕರಡಿಕೊಪ್ಪ ಶ್ರೀ ಮುತ್ತಪ್ಪ ದೇವರ ಮತ್ತು ಪರಿವಾರ ದೈವಗಳ ವಾರ್ಷಿಕ ಉತ್ಸವ ತಾ. ೧೧, ೧೨ ಹಾಗೂ ೧೩ ರಂದು ನಡೆಯಲಿದೆ.

ತಾ. ೧೧ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ಧ್ವಜಾರೋಹಣ, ಮಕ್ಕಳ ಭವಿಷ್ಯಕ್ಕೆ ಮೌನ ಜ್ಞಾನ, ಸಂಜೆ ೪ ಗಂಟೆಗೆ ಬಾಳುಮನೆ ಗಣಪತಿ ದೇವಸ್ಥಾನದಿಂದ ಕಲಶ, ಮಲೆ ಇಳಿಸುವುದು, ಮುತ್ತಪ್ಪನ್ ವೆಳ್ಳಾಟಂ, ನಂತರ ಅನ್ನದಾನ ನಡೆಯಲಿದೆ. ತಾ. ೧೨ ರಂದು ೩ ಗಂಟೆಗೆ ಮಲೆ ಇಳಿಸುವುದು, ಕುಟ್ಟಿಚ್ಚಾತನ್ ವೆಳ್ಳಾಟಂ, ಮುತ್ತಪ್ಪನ್ ವೆಳ್ಳಾಟಂ, ನಂತರ ೭ ಗಂಟೆಗೆ ವಸೂರಿ ಮಾಲಾ ಸ್ನಾನಕ್ಕೆ ಹೊರಡುವುದು ಮತ್ತು ವೆಳ್ಳಾಟಂ, ೮ ಗಂಟೆಗೆ ಕಂಡಾಕರ್ಣನ್ ವೆಳ್ಳಾಟಂ, ಗುಳಿಗನ್ ವೆಳ್ಳಾಟಂ, ಕಾರ್ಣವರ್ ವೆಳ್ಳಾಟಂ, ಪೂದಿ ವೆಳ್ಳಾಟಂ, ವಿಷ್ಣುಮೂರ್ತಿ ವೆಳ್ಳಾಟಂ ನಡೆಯಲಿದೆ.

ತಾ. ೧೩ ರಂದು ಬೆಳಿಗ್ಗೆ ೩ ಗಂಟೆಗೆ, ಗುಳಿಗನ್ ತೆರೆ, ಕಂಡಾಕರ್ಣನ್ ತೆರೆ, ಕಾರ್ನಾವರ್ ತೆರೆ, ಪೋದಿತೆರೆ, ವಸೂರಿ ಮಾಲಾ ತೆರೆ, ವಿಷ್ಣುಮೂರ್ತಿ ತೆರೆ ನಡೆಯಲಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.