ಕರಿಕೆ, ಏ. ೨: ಇಲ್ಲಿಗೆ ಸಮೀಪದ ಚೇರಂಬಾಣೆ ಬೇಂಗೂರು ಗ್ರಾಮದ ಶ್ರೀ ಕ್ಷೇತ್ರಪಾಲ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಅದ್ದೂರಿ ಯಾಗಿ ನಡೆಯಿತು. ಚಾಮುಂಡಿ ಕ್ಷೇತ್ರ ಪಾಲ, ಸೇರಿದಂತೆ ಇತರೆ ದೈವಗಳ ಕೋಲವವು ದೇವಳಕ್ಕೆ ಪ್ರದರ್ಶ ನಗೈದು ನೆರೆದಿದ್ದ ನೂರಾರು ಭಕ್ತರನ್ನು ಹರಸಿದವು. ಎತ್ತು ಹಾರಾಟ, ಕಳಸ ಸೇವೆ ಸೇರಿದಂತೆ ಇತರೆ ಧಾರ್ಮಿಕ ಕೈಂಕಾರ್ಯಗಳು ನಡೆದವು.