ಸುಂಟಿಕೊಪ್ಪ, ಏ. ೨: ಕೆದಕಲ್ ವ್ಯಾಪ್ತಿಯ ೭ನೇ ಮೈಲ್‌ನಲ್ಲಿ ಬಸ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಈರ್ವರು ಚಾಲಕರು ಸೇರಿದಂತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುಂಟಿಕೊಪ್ಪದಿAದ ಮಂಗಳೂರಿಗೆ ತೆರಳುತ್ತಿದ್ದ ವೊಲ್‌ವೊ ಬಸ್ (ಕೆಎ ೫೭ ಎಫ್ ೧೮೨೫) ಮಡಿಕೇರಿ ಕಡೆಯಿಂದ ಸುಂಟಿಕೊಪ್ಪ ಕಡೆಗೆ ಆಗಮಿಸುತ್ತಿದ್ದ ಕ್ಯಾಂಟರ್ ಲಾರಿ (ಕೆಎ ೫೧ ಎಚ್ ೩೪೨೯)ಕೆದಕಲ್ ವ್ಯಾಪ್ತಿಯ ೭ನೇ ಮೈಲ್ ತಿರುವಿನಲ್ಲಿ ಮುಖಮುಖಿ ಡಿಕ್ಕಿಯಾಗಿದ್ದು ಬಸ್ ಚಾಲಕ ಶಿವಾನಂದ್ ಹಾಗೂ ಲಾರಿ ಚಾಲಕ ಪ್ರತಾಪ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಬಸ್‌ನಲ್ಲಿ ಒಟ್ಟು ೫೦ ಮಂದಿ ಪ್ರಯಾಣಿಸುತ್ತಿದ್ದು ಅದೃಷ್ಟವಶಾತ್ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಜಗದೀಶ್ ಮತ್ತು ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.