ಗೋಣಿಕೊಪ್ಪ ವರದಿ, ಏ. ೭: ಅರಣ್ಯ ನಾಶದಿಂದ ಆರ್ಕಿಡ್ ಸಸ್ಯಗಳ ಮೂಲಕ್ಕೆ ಧಕ್ಕೆಯಾಗುತ್ತಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಕೃಷಿ ಶಾಸ್ತçಜ್ಞ ಡಾ. ಜಡೇಗೌಡ ಆತಂಕ ವ್ಯಕ್ತಪಡಿಸಿದರು.

ಶಂಕರಘಟ್ಟ ಕುವೆಂಪು ವಿಶ್ವ ವಿದ್ಯಾನಿಲಯದ ಅರಣ್ಯ ಶಾಸ್ತç ವಿಭಾಗ, ಮಲೆನಾಡ ಕೂಗು ಹಾಗೂ ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಟೆಕ್ನಾಲಜಿ ಕಾಲೇಜು ಇಕೋ ಕ್ಲಬ್ ಸಹಯೋಗದಲ್ಲಿ ಕೂರ್ಗ್ ಇನ್ಸಿಟ್ಯೂಟ್ ಟೆಕ್ನಾಲಜಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಪಾಂಡೀರ ಕೌಶಿಕ್ ಕಾವೇರಪ್ಪ ನಿರ್ಮಾಣದ ಆರ್ಕಿಡ್ ಸಸ್ಯಗಳ ಡಾಕ್ಯುಮೆಂಟರಿ ಸ್ಕಿçÃನಿಂಗ್ ಕಾರ್ಯಾಗಾರ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ ೧೦೦ ಕ್ಕೂ ಹೆಚ್ಚು ಜಾತಿಗಳ ಆರ್ಕಿಡ್ ಇರುವ ಬಗ್ಗೆ ಅಂದಾಜಿಸಲಾಗಿದೆ. ಈ ಬಗ್ಗೆ ಸಾಕಷ್ಟು ಸಂಶೋಧನೆ ಕೂಡ ನಡೆದಿದೆ. ಕೊಡಗು ಆರ್ಕಿಡ್‌ಗಳ ನೆಲೆ ಬೀಡು ಎಂಬುವುದು ವಿಶೇಷತೆ ಪಡೆದುಕೊಂಡಿದೆ. ಪುಷ್ಪಗಿರಿ, ತಲಕಾವೇರಿ, ಗಾಳಿಬೀಡು, ಬ್ರಹ್ಮಗಿರಿ ಅರಣ್ಯ ವ್ಯಾಪ್ತಿಯಲ್ಲಿ ಹೆಚ್ಚು ಆರ್ಕಿಡ್ ಪ್ರಭೇದಗಳನ್ನು ಕಾಣಬಹು ದಾಗಿದೆ. ಬಲ್ಬೋಫಿಲಮ್ ಮತ್ತು ಡೆಂಡ್ರೊಬಿಯA ಜಾತಿ ಗಳು ಪ್ರಬಲವಾಗಿ ಬೆಳೆಯುತ್ತಿದೆ. ಆರ್ಕಿಡ್‌ಗಳು ಬಹಳ ಮುಖ್ಯ ವಾದ ವಾಣಿಜ್ಯ ಬೆಳೆಯಾಗಿದ್ದು, ಅವುಗಳ ಅವೈಜ್ಞಾನಿಕ ಕೊಯ್ಲು, ಅರಣ್ಯನಾಶ ಮತ್ತು ನಗರೀಕರಣ ದಿಂದಾಗಿ ಮೂಲಕ್ಕೆ ದಕ್ಕೆಯಾಗುತ್ತಿ ರುವುದನ್ನು ಕಾಣಬಹುದಾಗಿದೆ ಎಂದು ಹೇಳಿದರು. ಆರ್ಕಿಡ್‌ಗಳು ಪರಿಸರದ ಸ್ಥಿತಿಯನ್ನು ಸೂಚಿಸುವ ಸಸ್ಯವಾಗಿದೆ. ದಟ್ಟವಾಗಿ ಬೆಳೆಯುವ ಕಡೆಯಲ್ಲಿ ಪರಿಸರ ಸ್ವಚ್ಛವಾಗಿದೆ ಎಂಬ ಅರಿವು ಹೆಚ್ಚಾಗಬೇಕು. ಇದರ ರಕ್ಷಣೆ ಅವಶ್ಯ ಎಂದು ಸಲಹೆ ನೀಡಿ ದರು. ಆರ್ಕಿಡ್‌ಗಳ ಮೂಲಭೂತ ಅಂಶ, ಕೊಡಗಿನಲ್ಲಿ ವೈವಿಧ್ಯತೆ ಮತ್ತು ನಿಯಂತ್ರಿತ ಪರಿಸರದಲ್ಲಿ ಆರ್ಕಿಡ್‌ಗಳ ಕೃಷಿ ಕುರಿತು ಉಪನ್ಯಾಸ ನೀಡಿದರು. ಕಾಲೇಜಿನ ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ದೇವಕಾಡು ಸಂಶೋಧನ ಲೇಖಕಿ ಪುತ್ತಾಮನೆ ವಿದ್ಯಾ ಜಗದೀಶ್ ಕೊಡಗಿನ ದೇವರಕಾಡು ಗಳ ಬಗ್ಗೆ ಜಾಗೃತಿ ಮೂಡಿಸಿದರು. ಹಿರಿಯರು ಸಂರಕ್ಷಿಸಿಕೊAಡು ಬಂದಿರುವ ದೇವಕಾಡುಗಳ ಪೋಷಣೆ ಅಗತ್ಯ. ಸಾಕಷ್ಟು ಜೀವ ಸಂಕುಲ, ಜೀವವೈವಿಧ್ಯತೆ ಮೂಲ ಸ್ಥಾನದ ರಕ್ಷಣೆ ಬಗ್ಗೆ ಅರಿವು ಹೆಚ್ಚಾಗಬೇಕಿದೆ ಎಂದರು. ಯುವ ಪೀಳಿಗೆ ಪರಿಸರ ರಕ್ಷಣೆಗೆ ಒತ್ತು ನೀಡುವುದರಿಂದ ಆರ್ಕಿಡ್ ಸಸ್ಯಗಳ ಪೋಷಣೆಗೂ ಪೂರಕ ವಾತಾವರಣ ಸೃಷ್ಠಿಯಾಗಲಿದೆ ಎಂದರು. ಆರ್ಕಿಡ್ ಸಸ್ಯಗಳ ಡಾಕ್ಯುಮೆಂಟರಿ ನಿರ್ಮಾಪಕ ಪಾಂಡೀರ ಕೌಶಿಕ್ ಕಾವೇರಪ್ಪ, ಕೂರ್ಗ್ ಇನ್ಸಿಟ್ಯೂಟ್ ಟೆಕ್ನಾಲಜಿ ಕಾಲೇಜು ಇಕೋ ಕ್ಲಬ್ ಸಂಚಾಲಕ ಕಾರ್ತಿಕ್ ಇದ್ದರು.