ಮಡಿಕೇರಿ, ಏ.೭: ಉತ್ತರ ಕೊಡಗಿನ ಗ್ರಾಮೀಣ ಭಾಗದ ೨೬ ಜನ ವಸತಿಗಳಿಗೆ ಶಾಶ್ವತ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ಮಾದಾಪುರದಲ್ಲಿ ೬೬ಕೆವಿ ವಿದ್ಯುತ್ ಸಂಗ್ರಹಾಗಾರದೊAದಿಗೆ ನೂತನ ಉಪಕೇಂದ್ರ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಈ ಹಿಂದೆ ಬಿಜೆಪಿ ಶಾಸಕರಾಗಿದ್ದ ಎಂ. ಪಿ. ಅಪ್ಪಚ್ಚುರಂಜನ್ ಅವರ ಪ್ರಯತ್ನದಿಂದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆಗಾಗಿ ರೂಪಾಯಿ ೩೦ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಮಂಜೂರಾತಿ ನೀಡಿದ್ದರು. ಕಾಮಗಾರಿಗೆ ಈ ಹಿಂದೆಯೇ ಚಾಲನೆ ಲಭಿಸಿತ್ತು. ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮದ ವತಿಯಿಂದಲೇ ನೇರವಾಗಿ ಈ ಕಾಮಗಾರಿ ನಡೆಯುತ್ತಿದೆ. ಈ ಸಲುವಾಗಿ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಪುನರ್ವಸತಿ ಬಡಾವಣೆಯ ಪಕ್ಕದಲ್ಲಿ ಈಗಾಗಲೇ ಜಿಲ್ಲಾಡಳಿತ ಒದಗಿಸಿರುವ ನಿವೇಶನದಲ್ಲಿ ಈ ೬೬ಕೆವಿ ವಿದ್ಯುತ್ ಸಂಗ್ರಹಾಗಾರದೊAದಿಗೆ ನೂತನ ಉಪಕೇಂದ್ರ ತಲೆಯೆತ್ತುತ್ತಿದೆ.

ಪ್ರಸ್ತುತ ವಿದ್ಯುತ್ ಸಂಪರ್ಕ ಯೋಜನೆ ಕೆಲಸ ಸಂಪೂರ್ಣವಾಗಿ ತಡೆಗೋಡೆ ಹಾಗೂ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಅಲ್ಲದೆ ಸಂಬAಧಿಸಿದAತೆ ಎಲ್ಲಾ ಯಂತ್ರೋಪಕರಣಗಳ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಕಲ ಸಿದ್ಧತೆಯೂ ಮುಂದುವರಿದಿದೆ. ಮಾತ್ರವಲ್ಲದೆ ಮಾದಾಪುರ ಸುತ್ತ ಮುತ್ತಲಿನ ಗ್ರಾಮಗಳ ಸಹಿತ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ ಕಿಕ್ಕರಳ್ಳಿ ಮಂಕ್ಯ ಮತ್ತು ಹಟ್ಟಿ ಹೊಳೆ ಮೊದಲಾದೆಡೆಯ ಕಾಂಡನಕೊಲ್ಲಿ ಕಡಂದಾಳು ಹಾಡಗೇರಿ ಹಾಗೂ ಗರಗಂದೂರು ಇತರೆಡೆಗಳಲ್ಲಿ ನೂತನ ವಿದ್ಯುತ್ ಕಂಬಗಳು ಅಳವಡಿಸಲಾಗಿದೆ. ಈ ಪ್ರದೇಶಗಳಲ್ಲಿ ನೂತನ ವಿದ್ಯುತ್ ತಂತಿಗಳನ್ನು ಸಂಪರ್ಕ ಕಲ್ಪಿಸುವ ಕೆಲಸ ಮುಕ್ತಾಯ ಹಂತದಲ್ಲಿದೆ. ಈ ಸಂಬAಧ ಮಾಹಿತಿ ಬಯಸಿದಾಗ ಸಂಬAಧಿಸಿದ ಅಧಿಕಾರಿ ನಿರಂಜನ್ ಅವರು ಪ್ರತಿಕ್ರಿಯಿಸಿ ಪ್ರಸಕ್ತ ಮುಂಗಾರು ಆರಂಭದ ಮೊದಲು ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು. ಅಲ್ಲಿದೆ ಕೆಪಿಟಿಸಿಎಲ್‌ನಿಂದ ಈ ಯೋಜನೆ ಅನುಷ್ಠಾನಗೊಂಡರೆ ಬಹಳಷ್ಟು ವರ್ಷಗಳಿಂದ ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದ ಜನರು ಅನುಭವಿಸುತ್ತಿ ರುವ ಸಂಕಷ್ಟ ನಿವಾರಣೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.