ನಾಪೋಕ್ಲು, ಏ. ೭: ಇಲ್ಲಿನ ಇಂದಿರಾ ನಗರದ ವಿವೇಕಾನಂದ ಸಂಘ ಹಾಗೂ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಎಂ.ಪಿ ಹರಿದಾಸ್ ಆಯ್ಕೆಯಾಗಿದ್ದಾರೆ.

ಇಂದಿರಾನಗರದ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಕೆ.ಬಿ. ಸುದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ. ಸುನಿಲ್, ಉಪಾಧ್ಯಕ್ಷರಾಗಿ ಯು.ಕೆ. ಶಶಿ, ಖಜಾಂಚಿಯಾಗಿ ವಿನಿಲ್ ಪಪ್ಪು, ಸಹಕಾರ್ಯದರ್ಶಿಯಾಗಿ ಕೆ.ಎಂ. ಸಜಿತ್ (ಅನಿಲ್), ಗೌರವಾಧ್ಯಕ್ಷರಾಗಿ ಡಿ.ಪಿ. ರೇಣುಕೇಶ್ ಸಮಿತಿ ಸದಸ್ಯರಾಗಿ ಕೆ.ಬಿ. ಸುಧೀಶ್, ಕೆ.ಟಿ. ರೋಷನ್, ರವಿ, ವಿಕ್ರಂ, ಕಾರ್ತಿಕ್, ಪ್ರಕಾಶ್, ವಿನಾಯಕ ಟಿ.ಎಂ. ಗಣೇಶ್, ಸಂದೇಶ್, ಜಲೇಂದ್ರ ಆಯ್ಕೆಯಾದರು.