ನಾಪೋಕ್ಲು, ಏ. ೭: ರಾಮನವಮಿಯ ಪ್ರಯುಕ್ತ ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಬಕ್ಕದಲ್ಲಿ ಶ್ರೀರಾಮ ಭಕ್ತ ಸಮಿತಿ ಶ್ರೀ ಗಜಾನನ ಯುವಕ ಭಕ್ತ ಮಂಡಳಿ ಶ್ರೀ ಕೃಷ್ಣ, ಸಂಕ್ರಾAತಿ, ಸಾಗರ ಸ್ವ ಸಹಾಯ ಸಂಘ ಅಂಬಿಕಾ ಸ್ತಿçÃಶಕ್ತಿ ಸಂಘಗಳ ಸಹಯೋಗದಲ್ಲಿ ಗಣಪತಿ ಹೋಮ, ಕಳಸ ಪೂಜೆ ಹಾಗೂ ಶ್ರೀರಾಮ ದೇವರಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಸಾಮಾಜಿಕ ಕಾರ್ಯಕರ್ತರು ಚಿ.ನಾ. ಸೋಮೇಶ್ ಮಾತನಾಡಿ, ಜಗತ್ತಿನಲ್ಲಿ ಎಲ್ಲರೂ ಒಟ್ಟಾಗಿ ಸೇರಿ ನಮಿಸುವಂತಹ ದೇವರು ಎಂದಿದ್ದರೆ ಅದರಲ್ಲಿ ಶ್ರೀರಾಮ ದೇವರು ಮೊದಲಿಗರು ಎಂದರು. ಇದೇ ಸಂದರ್ಭ ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕುಕ್ಕೇರ ಅಜಿತ್, ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಚಂದ್ರ ಉಡೋತ್ ಭಾಗವಹಿಸಿದ್ದರು.

ಕೈಕಾಡು ಭಗವತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಅಖಿಲೇಶ್ ಅವರು ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಸೂದನ ಜಗತ್, ಲವ ಪೂಜಾರಿ ಮತ್ತು ಬಾಡನ ಸತೀಶ್ ನಾಯಕತ್ವ ವಹಿಸಿ ನಡೆಸಿದರು.