ಗೋಣಿಕೊಪ್ಪಲು, ಏ. ೭: ವೀರಾಜಪೇಟೆ ತಾಲೂಕು ವಿವಿಧೋದ್ದೇಶ ಗ್ರಾಮೀಣ ಮಹಿಳಾ ಸಹಕಾರ ಸಂಘ ಗೋಣಿಕೊಪ್ಪಲು ಇದರ ನೂತನ ಅಧ್ಯಕ್ಷರಾಗಿ ಮಿದೇರಿರ ಕವಿತಾ ರಾಮು ಹಾಗೂ ಉಪಾಧ್ಯಕ್ಷರಾಗಿ ಕೋಳೆರ ಭಾರತಿ ದಿನು ಆಯ್ಕೆಯಾಗಿದ್ದಾರೆ.
ಸಂಘಕ್ಕೆ ಕಾನೂನು ಸಲಹೆಗಾರರಾಗಿ ಬೊಳ್ಳಚಂಡ ಶೃಂಗ ಸೋಮಣ್ಣ, ಸಲಹೆಗಾರರಾಗಿ ಶಂಕರಿ ಪೊನ್ನಪ್ಪ, ಮನೆಯಪಂಡ ಶೀಲಾ ಬೋಪಣ್ಣ, ಮುಲ್ಲೆಂಗಡ ಮುದೋಶ್ ಪೂವಯ್ಯ, ಕದ್ದಣಿಯಂಡ ಹರೀಶ್ ಬೋಪಣ್ಣ ಹಾಗೂ ಮುಲ್ಲೆಂಗಡ ರೇವತಿ ಪೂವಯ್ಯ ನೇಮಕಗೊಂಡಿದ್ದಾರೆ.