ಗೋಣಿಕೊಪ್ಪಲು, ಏ. ೭ : ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ಎರಡನೇ ದಿನ ಬಾಚಳೀರ ತಂಡ ಬಾರದ ಕಾರಣ ಅಮ್ಮುಣಿಚಂಡ ತಂಡಕ್ಕೆ ವಾಕ್ ಓವರ್ ಲಭಿಸಿದ್ದು, ಒಟ್ಟು ೭ ತಂಡಗಳು ಮುನ್ನಡೆ ಸಾಧಿಸಿವೆ.

ಕರವಂಡ ಹಾಗೂ ಚೊಟ್ಟೆಯಂಡ ತಂಡದ ನಡುವಿನ ಪಂದ್ಯದಲ್ಲಿ ಕರವಂಡ ತಂಡ ಗೆಲವು ಸಾಧಿಸಿತು.

ನಿಗದಿತ ಓವರ್‌ನಲ್ಲಿ ಚೊಟ್ಟೆಯಂಡ ತಂಡವು ೨೮ ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಕರವಂಡ ತಂಡವು ೪ ವಿಕೆಟ್ ಅಂತರದಿAದ ಜಯಗಳಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಬೊಳ್ಳೇರ ಹಾಗೂ ಕಡೇಮಾಡ ತಂಡದ ನಡುವಿನ ಪಂದ್ಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೊಳ್ಳೇರ ತಂಡ ೪೯ ರನ್ ಗಳಿಸಿತು. ಕಡೇಮಾಡ ತಂಡ ಕೇವಲ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಕಳ್ಳಂಗಡ ಹಾಗೂ ಚಂಬಾAಡ ತಂಡದ ನಡುವಿನ ಪಂದ್ಯದಲ್ಲಿ ಕಳ್ಳಂಗಡ ೯೬ ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಚಂಬಾAಡ ತಂಡ ಎರಡು ವಿಕೆಟ್ ಕಳೆದುಕೊಂಡು ೯೮ ರನ್ ಬಾರಿಸಿ ಜಯ ಗಳಿಸಿತು.

ಬಯವಂಡ ಹಾಗೂ ಅಜ್ಜಿನಿಕಂಡ ತಂಡದ ನಡುವೆ ನಡೆದ ಪಂದ್ಯದಲ್ಲಿ ಅಜ್ಜಿನಿಕಂಡ ತಂಡವನ್ನು ೮೧ ರನ್‌ಗೆ ಕಟ್ಟಿ ಹಾಕಿದ ಬಯವಂಡ ತಂಡವು ಮೂರು ವಿಕೆಟ್‌ಗಳ ಅಂತರದಿAದ ಜಯಗಳಿಸಿತು.

ಪಾರುವಂಗಡ ಹಾಗೂ ತಾತಪಂಡ ನಡುವೆ ನಡೆದ ಪಂದ್ಯದಲ್ಲಿ ತಾತಪಂಡ ತಂಡವು ಪಾರುವಂಗಡ ವಿರುದ್ಧ ಎರಡು ವಿಕೆಟ್ ಕಳೆದುಕೊಂಡು ನಿಗದಿತ ಓವರ್‌ನಲ್ಲಿ ೬೭ ರನ್ ಬಾರಿಸುವ ಮೂಲಕ ಜಯ ಸಾಧಿಸಿತು.

ಅಜ್ಜಿಕುಟ್ಟಿರ ಹಾಗೂ ಕೊಟ್ಟಿಯಂಡ ತಂಡದ ನಡುವೆ ನಡೆದ ಪಂದ್ಯದಲ್ಲಿ ಅಜ್ಜಿಕುಟ್ಟಿರ ತಂಡ ಗೆಲವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಕೊಣಿಯಂಡ ತಂಡ ನಿಗದಿತ ಓವರ್‌ನಲ್ಲಿ ೫೮ ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಅಜ್ಜಿಕುಟ್ಟಿರ ತಂಡ ೮ ವಿಕೆಟ್‌ಗಳ ಅಂತರದಲ್ಲಿ ಜಯಗಳಿಸಿತು.

-ಹೆಚ್.ಕೆ. ಜಗದೀಶ್