ಚೆಯ್ಯಂಡಾಣೆ, ಏ. ೭: ಚೇಲಾವರ ಗ್ರಾಮದ ಕಡಿಯತ್‌ನಾಡು ಪೊನ್ನೋಲ ಸಾರ್ಥಾವು ಬೈತೂರ್ ಕಾರ್ಯಾರು ಹಾಗೂ ಪುದಿಯೋದಿ ದೇವರ ಉತ್ಸವವು ತಾ. ೧೩ ರಿಂದ ೧೭ ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾ :೧೩ ರ ಬೆಳಿಗ್ಗೆ ೯ ಗಂಟೆಗೆ ಪಡಿಞರಮ್ಮಂಡ ದೇವತಕ್ಕರ ಮನೆಯಿಂದ ಭಂಡಾರ ಆಗಮಿಸುವುದು, ೧೦ ಗಂಟೆಗೆ ಎತ್ತು ಪೋರಾಟ, ೧೨.೩೦ ಕ್ಕೆ ಮಹಾ ಪೂಜೆ, ೧ ಗಂಟೆಗೆ ಅನ್ನದಾನ, ರಾತ್ರಿ ೮ ಗಂಟೆಗೆ ಅಂದಿ ಬೊಳಕ್, ೯ ಗಂಟೆಗೆ ತೆಂಗಿನಕಾಯಿ ಪೊರುವುದು, ನಂತರ ಮಹಾ ಪೂಜೆ ನಡೆಯಲಿದೆ.

ತಾ.೧೪ ಕ್ಕೆ ಬೆಳಿಗ್ಗೆ ೭.೩೦ಕ್ಕೆ ಕಣಿ ಪೂಜೆ, ೧೦ಕ್ಕೆ ವಿಶೇಷ ಪೂಜೆ, ೧೦.೩೦ಕ್ಕೆ ವಾರ್ಷಿಕ ಮಹಾ ಸಭೆ, ೧೨.೩೦ ಗಂಟೆಗೆ ಮಹಾ ಪೂಜೆ, ೨ ಗಂಟೆಗೆ ದೇವ ತಕ್ಕರ ಮನೆಗೆ ಭಂಡಾರ ಹೊರಡುವುದು.

ತಾ.೧೬ ರಂದು ಬೆಳಿಗ್ಗೆ ೯ ಗಂಟೆಗೆ ಪುದಿಯೋದಿ ದೇವರಿಗೆ ಮೇಲೇರಿ ಸೌದೆ ಕಡಿಯುವುದು, ರಾತ್ರಿ ೭.೩೦ ಕ್ಕೆ ದೇವತಕ್ಕರ ಮನೆಯಿಂದ ಭಂಡಾರ ಬರುವುದು, ೧೦.೩೦ ಕ್ಕೆ ಮೊದಲ ತೋತ, ೧೧.೩೦ ಕ್ಕೆ ಎರಡನೇ ತೋತ, ೧೨ ಗಂಟೆಗೆ ಮೆಲೇರಿ ಅಗ್ನಿ ಹಾಕುವುದು, ೧೨.೩೦ ಗಂಟೆಗೆ ಮೂರನೇ ತೋತ ನಡೆಯಲಿದೆ.

ತಾ.೧೭ ರಂದು ಮುಂಜಾನೆ ೧.೩೦ ಗಂಟೆಗೆ ಬಿರಾಳಿ ತೆರೆ, ೩.೩೦ಕ್ಕೆ ಪುದಿಯೋದಿ ತೆರೆ, ೮ ಗಂಟೆಗೆ ಭದ್ರಕಾಳಿ ತೆರೆ,೧೧ ಗಂಟೆಗೆ ತಕ್ಕರ ಮನೆಗೆ ಭಂಡಾರ ಹಿಂದಿರುಗಲಾಗುವುದು.