ಸಿದ್ದಾಪುರ, ಏ. ೭: ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಕಾಫಿ ಮಂಡಳಿ ಅಧಿಕಾರಿಗಳ ಸಭೆಯನ್ನು ಸಿದ್ದಾಪುರದ ಸ್ವರ್ಣಮಾಲ ಸಭಾಂಗಣದಲ್ಲಿ ನಡೆಸಲಾಯಿತು. ಸಭೆಯ ನೇತೃತ್ವವನ್ನು ವಹಿಸಿದ್ದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಜಿಲ್ಲೆಯ ರೈತರಿಗೆ ಕಾಫಿ ಮಂಡಳಿಯಿAದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕಾಫಿ ಮಂಡಳಿಯ ಮುಖ್ಯ ಅಧಿಕಾರಿ ಶ್ರೀರಮಣ ರೈತರು ತಮ್ಮ ತೋಟಗಳಿಗೆ, ಬೆಳೆಗಳಿಗೆ ಸಂಬAಧಿಸಿದ ದಾಖಲಾತಿ ಗಳನ್ನು ನೋಂದಾಯಿಸಿಕೊAಡಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಸಬ್ಸಿಡಿಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದರು. ಕಾಫಿ ಮಂಡಳಿ ಅಧಿಕಾರಿ ಲಕ್ಷಿö್ಮಕಾಂತ್ ಮಾತನಾಡಿ, ಕಾಫಿ ಮಂಡಳಿ ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಈ ಹಿನ್ನೆಲೆಯಲ್ಲಿ ಬೆಳೆಗಾರರು ಆನ್‌ಲೈನ್ ಮೂಲಕ ನೋಂದಾಯಿಸಿಕೊAಡಲ್ಲಿ ಕಾಫಿ ಮಂಡಳಿಯ ವತಿಯಿಂದ ಸಿಗುವ ಯೋಜನೆಗಳು ಹಾಗೂ ಪರಿಹಾರ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಾಫಿ ಮಂಡಳಿಯಲ್ಲಿ ಆನ್‌ಲೈನ್ ಮೂಲಕ ನೊಂದಾಯಿಸಿಕೊAಡು ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯುವ ಕುರಿತು ಗ್ರಾಮಮಟ್ಟದಲ್ಲೂ ಕೂಡ ಬೆಳೆಗಾರರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗುವುದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ. ಜಿಲ್ಲಾ ಖಜಾಂಜಿ ಇಟ್ಟಿರ ಸಬಿತಾ ಭೀಮಯ್ಯ. ಜಿಲ್ಲಾ ಸಂಚಾಲಕ ಸುಭಾಷ್ ಸುಬ್ಬಯ್ಯ, ಸಿದ್ದಾಪುರ ಘಟಕದ ಸಂಚಾಲಕ ಸಿ.ಬಿ. ಪೂಣಚ್ಚ, ಕಾರ್ಯದರ್ಶಿ ಎಂ.ವಿ. ಸಜೀವನ್ ಹಾಗೂ ಕಾಫಿ ಮಂಡಳಿಯ ಅಧಿಕಾರಿಗಳಾದ ಡಾ ಚೇತನ್ ಧನ್ಯ ಜಯರಾಂ ಹಾಗೂ ಇನ್ನಿತರರು ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಸಂಘದ ಸಿದ್ದಾಪುರ ಘಟಕದ ಅಧ್ಯಕ್ಷ ದೇವಣೀರ ವಜ್ರ ಬೋಪಣ್ಣ ವಹಿಸಿದ್ದರು.