ಚೆಯ್ಯಂಡಾಣೆ, ಏ. ೭: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಿರಿಯ ಹಳೆ ವಿದ್ಯಾರ್ಥಿಗಳು ಶಾಲೆಗೆ ಲ್ಯಾಪ್ಟಾಪ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.
ಹಿರಿಯ ಹಳೆಯ ವಿದ್ಯಾರ್ಥಿಗಳಾದ ಕರ್ನಲ್ ನಾರಾಯಣ ಮೂರ್ತಿ ಹಾಗೂ ಜಯಲಕ್ಷಿö್ಮ, ಮುಂಡ್ಯೋಳAಡ ಭೂಮಿಕಾ ಪೊನ್ನಮ್ಮ, ಬಿಳಿಯಂಡ್ರ ಲಕ್ಷö್ಮಣ ಹಾಗೂ ತೋಟಂಬೈಲು ಮನೋಹರ ಎಂಬ ಹಳೆ ವಿದ್ಯಾರ್ಥಿಗಳು ೪೦ ಸಾವಿರ ಮೌಲ್ಯದ ಎಚ್.ಪಿ ಕಂಪನಿಯ ಲ್ಯಾಪ್ಟಾಪ್ ಅನ್ನು ಮುಖ್ಯ ಶಿಕ್ಷಕಿ ಎಚ್.ಆರ್. ಪ್ರೇಮಾ ಕುಮಾರಿ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭ ಶಿಕ್ಷಕರಾದ ಪೂರ್ಣೇಶ್, ದಮಯಂತಿ, ಜಯಪ್ರದ, ಸತ್ಯಮ್ಮ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.