ಮಡಿಕೇರಿ, ಏ. ೧೨: ನೇತಾಜಿ ಯುವತಿ ಮಂಡಳಿ ತಾಳತ್‌ಮನೆಯಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ದಿನಾಚರಣೆ ಏರ್ಪಡಿಸಲಾಗಿತ್ತು.
ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾದ ಉಪವಲಯ ಅರಣ್ಯ ಅಧಿಕಾರಿ ಶ್ರೀರಕ್ಷಾ ಮತ್ತು ಅಧ್ಯಕ್ಷೆ ಎಂ.ಸಿ. ಅಕ್ಕಮ್ಮ ನೆರವೇರಿಸಿದರು.
ನಂತರ ಮಹಿಳೆಯರಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮುಖ್ಯ ಅತಿಥಿ ಶ್ರೀರಕ್ಷಾ ಮಾತನಾಡಿ, ಹೆಣ್ಣುಮಕ್ಕಳು ಎಷ್ಟೇ ಮುಂದುವರಿದಿದ್ದರೂ ಸಹ ಕೆಲವೊಂದು ಕಡೆಗಳಲ್ಲಿ ಶೋಷಣೆಗೆ ಒಳಗಾಗುತ್ತಾರೆ ಎಂದು ಹೇಳಿದರು. ಅಧ್ಯಕ್ಷೆ ಎಂ.ಸಿ. ಅಕ್ಕಮ್ಮ ಮಾತನಾಡಿ, ಹೆಣ್ಣಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ದೊರೆಯುತ್ತದೆ. ಹೆಣ್ಣು ತನ್ನ ಮಕ್ಕಳ ಪಾಲನೆ - ಪೋಷಣೆಯಲ್ಲಿ ತುಂಬಾ ಜವಾಬ್ದಾರಿಯುತಳಾಗಿರಬೇಕಾಗುತ್ತದೆ ಎಂದರು. ಚೈತ್ರಾ ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು. ಕಾರ್ಯಕ್ರಮದಲ್ಲಿ ಯುವತಿ ಮಂಡಳಿಯ ಅಧ್ಯಕ್ಷೆ ಸಿಂಧು ಉಪಸ್ಥಿತರಿದ್ದರು. ಮಂಜುಳಾ ಆನಂದ್ ಪ್ರಾರ್ಥಿಸಿದರೆ, ಪದ್ಮರವಿ ನಿರೂಪಿಸಿದರು. ಮೋಹಿನಿ ಎಂ.ಎನ್. ಸ್ವಾಗತಿಸಿ, ನೇತ್ರಾವತಿ ಎ.ಆರ್. ವಂದಿಸಿದರು.