ಮಡಿಕೇರಿ ಏ. ೧೨:ಮಡಿಕೇರಿಯ ಐತಿಹಾಸಿಕ ಶ್ರೀ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಉತ್ಸವವು ವಿಜೃಂಭಣೆಯಿAದ ನೇರವೇರಿತು. ಈ ಪ್ರಯುಕ್ತ ಇಂದು ಬೆಳಿಗ್ಗೆ ದೇವಸ್ಥಾನದಲ್ಲಿ ರಾಮತಾರಕ ಹೋಮ. ಮಹಾಪೂಜೆ ನೆರವೇರಿತು.
ಹೋಮವನ್ನು ಸಂತೋಷ್ ಭಟ್. ಅರುಣ್ ಭಟ್. ನಿತ್ಯಾನಂದ ಭಟ್ ನೆರವೇರಿಸಿದರು. ಶ್ರೀ ಸನ್ನಿಧಾನಕ್ಕೆ ರಜತ ವೀಳ್ಯದೆಲೆ ಮಾಲೆಯನ್ನು ಪಿಡಬ್ಲುö್ಯಡಿ ಗುತ್ತಿಗೆದಾರರಾದ ಹೆ.ಬಿ.ರಾಜೇಂದ್ರ ಹಾಗೂ ಎಂ.ಎನ್. ಸಂಧ್ಯಾ ಅÀವರು ನೀಡಿದರು. ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯö, ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ಜಿ.ರಾಜೇಂದ್ರ, ವಿಶಾಲ್ ನಂದಕುಮಾರ್, ಅಂಬೆಕಲ್ ಕುಶಾಲಪ್ಪ, ಕಾರ್ಯ ನಿರ್ವಹಣಾಧಿಕಾರಿ ದೇವ್‌ರಾಜ್ ಹಾಜರಿದ್ದರು. ಕೆ.ಕೆ, ಮಹೇಶ್ ಕುಮಾರ್ ನೇತೃತ್ವದಲ್ಲಿ ೫ ತಂಡಗಳಿAದ ಸಂಜೆ ಭಜನಾ ಕಾರ್ಯಕ್ರಮ ನಡೆಯತು. ಹೋಮ ಹಾಗೂ ಪೂಜೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಮಧ್ಯಾಹ್ನ ಸುರೇಶ್ ಹಾಗೂ ಮನೆಯವರು ಮತ್ತು ನಾಗೇಶ್ ಶೆಣೈ ಮನೆಯವರು ಲಘು ಉಪಹಾರದÀ ಪ್ರಸಾದ ಏರ್ಪಡಿಸಿದ್ದರು.