ಕಣಿವೆ, ಏ. ೧೨: ಹಾಸನದಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹೆಬ್ಬಾಲೆಯಿಂದ ಕುಶಾಲನಗರದವರೆಗೂ ಕಸದ ತೊಟ್ಟಿಯಾದಂತಿದೆ.

ಹೆಬ್ಬಾಲೆ, ಕಣಿವೆ, ಹುಲುಸೆ, ಹಳೆ ಕೂಡಿಗೆ, ಕೂಡುಮಂಗಳೂರು, ಕೂಡ್ಲೂರು, ಮುಳ್ಳುಸೋಗೆ ಸೇರಿದಂತೆ ಹೆದ್ದಾರಿಯುದ್ದಕ್ಕೂ ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಹೆದ್ದಾರಿ ಬದಿಯ ಕಸದ ತ್ಯಾಜ್ಯಗಳ ರಾಶಿ ಸ್ವಾಗತಿಸುತ್ತಿದೆ. ಹೆಬ್ಬಾಲೆಯ ಸರ್ಕಾರಿ ಆಸ್ಪತ್ರೆಯ ಮುಂಬದಿ ಹಾಗೂ ಪ್ರೌಢಶಾಲೆ ರಸ್ತೆ ಹಾಗೆಯೇ ಹುಲುಸೆ ರಸ್ತೆಯ ಹೆದ್ದಾರಿ ಬದಿ ಪೂರ್ಣ ಕಸಮಯವಾಗಿದೆ.

ಇನ್ನೂ ಕೂಡಿಗೆ ಗ್ರಾಮ ಪಂಚಾಯಿತಿಯ ಹಳೆ ಕೂಡಿಗೆ, ಜಲ ಆಯೋಗದ ಕಚೇರಿ ಬಳಿಯ ಹೆದ್ದಾರಿ ಪೂರ್ಣ ಕಸಮಯವಾಗಿದೆ. ಹಾಗೆಯೇ ಕೂಡ್ಲೂರು, ಗುಮ್ಮನಕೊಲ್ಲಿ, ಮುಳ್ಳುಸೋಗೆ ಗ್ರಾಮಗಳ ಪ್ರವೇಶ ದ್ವಾರಗಳ ಹೆದ್ದಾರಿಗಳ ಬದಿಯಲ್ಲಿ ಕಸದ ರಾಶಿ ನಿರ್ಮಾಣವಾಗಿದ್ದು ಉತ್ತಮ ಪರಿಸರವನ್ನು ನಿರ್ನಾಮ ಮಾಡಿದೆ. ಸಂಬAಧಿಸಿದ ಪಂಚಾಯಿತಿ ಆಡಳಿತ ಇತ್ತ ಗಮನ ಹರಿಸುವ ಮೂಲಕ ಇನ್ನಾದರೂ ತಮ್ಮ ವ್ಯಾಪ್ತಿಯ ಗ್ರಾಮಗಳ ಪರಿಸರವನ್ನು ಸ್ವಚ್ಛವಾಗಿ ಇಡಬೇಕೆಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.