ಮಡಿಕೇರಿ, ಏ. ೧೨ : ಮುಕ್ಕಾಟಿರ (ಬೇತ್ರಿ) ಕುಟುಂಬದ ವತಿಯಿಂದ ಕೊಡವ ಕುಟುಂಬಗಳ ನಡುವೆ ಗೋಣಿಕೊಪ್ಪ ಅರುವತೊಕ್ಕಲುವಿನ ಅಕ್ಲೋನ್ ಟರ್ಫ್ ಮೈದಾನದಲ್ಲಿ ತಾ. ೯ರಂದು ಆರಂಭಗೊAಡಿರುವ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ ತಾ ೧೩ರಂದು (ಇಂದು) ಮುಕ್ತಾಯಗೊಳ್ಳಲಿದೆ. ೭೩ ಕುಟುಂಬಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು ಭಾನುವಾರ ಸಂಜೆ ೪.೩೦ಕ್ಕೆ ಮೊದಲ ಸೆಮಿಫೈನಲ್ ಹಾಗೂ ೫ ಗಂಟೆಗೆ ಎರಡನೆಯ ಸೆಮಿಫೈನಲ್ ಜರುಗಲಿದೆ. ಸಂಜೆ ೭ ಗಂಟೆಗೆ ಫೈನಲ್ ಜರುಗಲಿದೆ.

ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹಾಗೂ ಆಸ್‌ಪ್ರೇ ಗ್ರೂಪ್ ಆಫ್ ಕಂಪೆನೀಸ್‌ನ ಮಾಚೆಟ್ಟಿರ ಜನಿತ್ ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ಜರುಗಲಿದೆ.