ಮಡಿಕೇರಿ, ಏ. ೧೨: ೨೦೨೫-೨೬ನೇ ಸಾಲಿನ ೨೦೨೫ರ ಏಪ್ರಿಲ್ ೧ ರಿಂದ ೨೦೨೬ ರ ಮಾರ್ಚ್ ೩೧ ರವರೆಗೆ ಇರುವ ಆಸ್ತಿ ತೆರಿಗೆಯನ್ನು ಏಪ್ರಿಲ್ ಮಾಹೆಯಲ್ಲಿ ಶೇ. ೫ ರಷ್ಟು ರಿಯಾಯಿತಿ, ಮೇ ಮತ್ತು ಜೂನ್ ಮಾಹೆಯಲ್ಲಿ- ದಂಡರಹಿತವಾಗಿ ಜುಲೈ ಮಾಹೆಯಿಂದ-ಪ್ರತಿ ಮಾಹೆ ದಂಡಸಹಿತವಾಗಿ ಪಾವತಿಸಿ ರಿಯಾಯಿತಿ, ದಂಡರಹಿತ ಮತ್ತು ದಂಡಸಹಿತವಾಗಿ ಪಾವತಿಸಲು ಅವಕಾಶವಿದೆ. ಆಸ್ತಿ ಮಾಲೀಕರು ಸಕಾಲದಲ್ಲಿ ಆಸ್ತಿತೆರಿಗೆ ಪಾವತಿಸಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ ಎಂದು ಕುಶಾಲನಗರ ಪುರಸಭೆ ಪ್ರಕಟಣೆ ತಿಳಿಸಿದೆ.

ಸರ್ಕಾರದ ಆದೇಶದ ರೀತ್ಯಾ ಈಗಾಗಲೇ ಕೈಬರವಣಿಗೆಯ ಖಾತಾ ದಾಖಲಾತಿಗಳನ್ನು ನಿಷೇಧಿಸಿರುವುದರಿಂದ ಆನ್‌ಲೈನ್‌ನಲ್ಲಿ ಇ-ಆಸ್ತಿ ಖಾತಾ ದಾಖಲಾತಿ ಮಾಡಿಸಿಕೊಂಡಿರುವವರನ್ನು ಹೊರತುಪಡಿಸಿ ಕೈ ಬರವಣಿಗೆ ದಾಖಲಾತಿಗಳನ್ನು ಹೊಂದಿರುವವರು ಸೂಕ್ತ ದಾಖಲಾತಿಗಳನ್ನು ಹಾಜರುಪಡಿಸಿ, ಕೂಡಲೇ ಆಸ್ತಿ ದಾಖಲಾತಿಗಳನ್ನು ಆನ್‌ಲೈನ್‌ನಲ್ಲಿ ನಮೂನೆ-೩ ಹಾಗೂ ನಮೂನೆ-೩ಎ ರಲ್ಲಿ ಇ-ಆಸ್ತಿ ದಾಖಲೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ.

ನೀರು ಅತ್ಯಮೂಲ್ಯವಾದದ್ದು ಬೇಸಿಗೆಯಲ್ಲಿ ನೀರನ್ನು ಕುಡಿಯುವ ಪ್ರಥಮ ಆದ್ಯತೆಯಾಗಿ ಉಪಯೋಗಿಸಿ. ಕಸವನ್ನು ಮೂಲದಿಂದ ಬೇರ್ಪಡಿಸಿ ಹಸಿಕಸ ಹಾಗೂ ಒಣಕಸಗಳಾಗಿ ವಿಂಗಡಿಸಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಸಹಕರಿಸಿ ಹಾಗೂ ಆರೋಗ್ಯವಂತ ಜೀವನವನ್ನು ನಡೆಸಿ. ಪುರಸಭೆಗೆ ಪಾವತಿಸಬೇಕಾದ ಆಸ್ತಿ ತೆರಿಗೆ, ಉದ್ದಿಮೆ ಪರವಾನಗಿ ಜಾಹೀರಾತು ತೆರಿಗೆ, ಅಂಗಡಿ ಬಾಡಿಗೆ, ನೆಲಬಾಡಿಗೆಗಳನ್ನು ಸಕಾಲದಲ್ಲಿ ಪಾವತಿಸಿ ನಗರದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಹಕರಿಸುವಂತೆ ಕೋರಲಾಗಿದೆ.