(ವಿಶೇಷ ವರದಿ: ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಏ. ೧೨: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣನವರ ತವರು ಕ್ಷೇತ್ರ ಹುದಿಕೇರಿ ಪಟ್ಟಣದಲ್ಲಿ ನೂತನ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲು ಹಸಿರು ನಿಶಾನೆ ದೊರೆತಿದೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮದ ಜನತೆಗೆ ಹುದಿಕೇರಿ ಹೋಬಳಿಯ ಪಟ್ಟಣದಲ್ಲಿಯೇ ವೈದ್ಯಕೀಯ ಸೌಲಭ್ಯಗಳು ದೊರೆಯಲಿದೆ. ಈ ಭಾಗದ ಜನತೆಯ ಬಹು ವರ್ಷದ ಬೇಡಿಕೆಯು ಈಡೇರಲಿದೆ.

ಗೋಣಿಕೊಪ್ಪ ಹಾಗೂ ಚೀಣಿವಾಡ ಗ್ರಾಮದಲ್ಲಿ ನೂತನ ಆಸ್ಪತ್ರೆ ನಿರ್ಮಾಣದ ಬಗ್ಗೆ ಈ ಹಿಂದೆ ಶಾಸಕ ಎ.ಎಸ್. ಪೊನ್ನಣ್ಣ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಅಂತಿಮವಾಗಿ ಹುದಿಕೇರಿ ಪಟ್ಟಣದ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲಿನ ೩.೫ ಏಕರೆ ಜಾಗದಲ್ಲಿ ನೂತನ ಸಮುದಾಯ ಕೇಂದ್ರ ತೆರೆಯಲು ಹಸಿರು ನಿಶಾನೆ ದೊರೆತಂತಾಗಿದೆ.

ದ.ಕೊಡಗಿನ ನಾಗರಿಕರ ಹಲವು ವರ್ಷಗಳ ಪ್ರಮುಖ ಬೇಡಿಕೆಯಾಗಿದ್ದ ಪೊನ್ನಂಪೇಟೆ ಹೊಸ ತಾಲೂಕು ರಚನೆಯಾಗಿ ೨ ವರ್ಷ ಕಳೆಯುತ್ತಿದ್ದಂತೆಯೇ ಗ್ರಾಮೀಣ ಭಾಗದ ಜನತೆಗೆ ಸರ್ಕಾರಿ ಸೇವೆಗಳು ಪೊನ್ನಂಪೇಟೆ ನಗರದಲ್ಲಿ ಸಿಗುವಂತಾಗಿದೆ. ಪ್ರಮುಖವಾಗಿ ಜನರ ಆರೋಗ್ಯಕ್ಕೆ ಬೇಕಾದ ಅವಶ್ಯಕತೆಗಳಿಗಾಗಿ ವಾಣಿಜ್ಯ ನಗರ ಗೋಣಿಕೊಪ್ಪ ಸಮುದಾಯ ಕೇಂದ್ರದ ಆಸ್ಪತ್ರೆಯನ್ನು ಅವಲಂಭಿಸಿದ್ದರು. ಆರೋಗ್ಯ ಸಮಸ್ಯೆಗಳಿಗಾಗಿ ನಾಗರಿಕರು ಗೋಣಿಕೊಪ್ಪ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿತ್ತು ಇದೀಗ ನೂತನ ಸಮುದಾಯ ಆರೋಗ್ಯ ಕೇಂದ್ರ ಹುದಿಕೇರಿ ಭಾಗದಲ್ಲಿ ಆರಂಭವಾಗುವುದರಿAದ ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಪರಿಹಾರ ಲಭಿಸಿದಂತಾಗಲಿದೆ.

ನೂತನ ತಾಲೂಕು ಆರಂಭವಾಗುತ್ತಿದ್ದAತೆಯೇ ತಾಲೂಕುಮಟ್ಟದ ಆಸ್ಪತ್ರೆ ನಿರ್ಮಾಣಕ್ಕೆ ಹುದಿಕೇರಿ ಭಾಗದ ಬೇಗೂರು ಸಮೀಪವಿರುವ ಚೀಣಿವಾಡದಲ್ಲಿ ಸರ್ವೆ ನಂ.೫೮/೧ರಲ್ಲಿ ೨ ಎಕರೆ ಭೂಮಿಯನ್ನು ಆಸ್ಪತ್ರೆಯ ನಿರ್ಮಾಣಕ್ಕಾಗಿ ಕಾದಿರಿಸಲಾಗಿತ್ತು. ಈ ಸರ್ಕಾರಿ ಜಾಗವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮೀಸಲಿಟ್ಟು

(ಮೊದಲ ಪುಟದಿಂದ) ಸಂಬAಧಿಸಿದ ಜಿಲ್ಲಾಮಟ್ಟದ ಅಧಿಕಾರಿಗಳ ಹೆಸರಿಗೆ ನೋಂದಣಿ ಕೂಡ ಮಾಡಲಾಗಿತ್ತು.

ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರವು ೩೦ ಹಾಸಿಗೆಗಳಿಂದ ೫೦ ಹಾಸಿಗೆಗಳಿಗೆ ಉನ್ನತೀಕರಣಗೊಳ್ಳಲಿದ್ದು ಈ ಆಸ್ಪತ್ರೆಯನ್ನು ಇನ್ನು ಮುಂದೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರಿಂದ ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಆಸ್ಪತ್ರೆಯ ಮೇಲೆ ಇರುತ್ತಿದ್ದ ಒತ್ತಡ ಕಡಿಮೆಯಾಗಲಿದೆ. ಅಲ್ಲದೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರುವುದರಿಂದ ೫೦ ಹಾಸಿಗೆಯ ವ್ಯವಸ್ಥೆಯು ಈ ಆಸ್ಪತ್ರೆಯಲ್ಲಿ ದೊರೆಯಲಿದೆ. ತಾಲೂಕು ಕೇಂದ್ರ ಪೊನ್ನಂಪೇಟೆಯಲ್ಲಿ ರೆಫರಲ್ ಸೆಂಟರನ್ನು ಆರಂಭಿಸಲು ಅನುಮೋದನೆ ಲಭಿಸಿದ್ದು ಪಟ್ಟಣದಲ್ಲಿ ಆರೋಗ್ಯದ ಹಿತದೃಷ್ಠಿಯಿಂದ ನೂತನ ಕೇಂದ್ರ ಆರಂಭವಾಗಲಿದೆ. ಇದರಿಂದ ದ.ಕೊಡಗಿನ ಬಹುತೇಕ ಜನರಿಗೆ ಅನುಕೂಲವಾಗಲಿದೆ. ಕುಟ್ಟ ಭಾಗದ ಸುತ್ತಮುತ್ತಲಿನಲ್ಲಿ ಇರುವ ಜನರಿಗೆ ಕುಟ್ಟ ಆಸ್ಪತ್ರೆಯ ಸೌಲಭ್ಯ ದೊರೆಯಲಿದೆ.

ಹುದಿಕೇರಿ ಹೋಬಳಿಯ ಸುತ್ತಮುತ್ತಲಿನ ನಾಗರಿಕರಿಗೆ ಹುದಿಕೇರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸೌಲಭ್ಯ ದೊರೆಯಲಿದೆ. ಪೊನ್ನಂಪೇಟೆ ನಗರದ ಸುತ್ತಮುತ್ತಲಿನ ಗ್ರಾಮದಲ್ಲಿರುವ ಜನತೆಗೆ ಪಟ್ಟಣದಲ್ಲಿರುವ ರೆಫರಲ್ ಸೆಂಟರ್‌ನ ಪ್ರಯೋಜನ ಸಿಗಲಿದೆ. ತಾಯಿ ಮತ್ತು ಮಕ್ಕಳ ಅನುಕೂಲಕ್ಕಾಗಿ ಗೋಣಿಕೊಪ್ಪ ಎಂಸಿಹೆಚ್ ಆಸ್ಪತ್ರೆಯು ಸಹಾಯವಾಗಲಿದೆ.

ಇನ್ನುಳಿದಂತೆ ಗಂಭೀರ ಸಮಸ್ಯೆಗಳು ಎದುರಾದಲ್ಲಿ ವೀರಾಜಪೇಟೆ ತಾಲೂಕು ಆಸ್ಪತ್ರೆಯ ೪೦೦ ಹಾಸಿಗೆಯ ಸೌಲಭ್ಯವುಳ್ಳ ಆಸ್ಪತ್ರೆಯ ಸೇವೆಗಳು ಲಭ್ಯವಾಗಲಿದೆ. ಈ ಆಸ್ಪತ್ರೆಯನ್ನು ಜಿಲ್ಲಾಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಬರಲಿದೆ. ಇದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಜನತೆಗೆ ಅಗತ್ಯವಿರುವ ಸೌಕರ್ಯಗಳು ಬಹುತೇಕವಾಗಿ ಲಭ್ಯವಾಗಲಿದೆ. ಈಗಾಗಲೇ ಕರ್ನಾಟಕ ಸರ್ಕಾರದ ಆಯವ್ಯಯದಲ್ಲಿ ವೀರಾಜಪೇಟೆ ಆಸ್ಪತ್ರೆಯನ್ನು ಉನ್ನತೀಕರಣಗೊಳಿಸಲು ಹಾಗೂ ೪೦೦ ಹಾಸಿಗೆಯ ಸೌÀಲಭ್ಯಗಳನ್ನು ನೀಡಲು ಅವಕಾಶ ನೀಡಲಾಗಿದೆ.