ಮಡಿಕೇರಿ, ಏ. ೧೩: ಮುದ್ದಂಡ ಕುಟುಂಬದ ಆತಿಥ್ಯದಲ್ಲಿ ಮಡಿಕೇರಿಯಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಅಲ್ಲಪಂಡ, ಕೂತಂಡ, ಕೋಟೇರ ಭರ್ಜರಿ ಜಯ ಸಾಧಿಸಿದ್ದು, ಒಟ್ಟು ೧೪ ತಂಡಗಳು ಮುನ್ನಡೆ ಸಾಧಿಸಿದವು.

ಅಜ್ಜೇಟ್ಟಿರ ಮತ್ತು ಪುಳ್ಳಂಗಡ ನಡುವಿನ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಪುಳ್ಳಂಗಡ ತಂಡ ಜಯ ಸಾಧಿಸಿತು. ಪುಳ್ಳಂಗಡ ಪರ ಮುತ್ತಣ್ಣ ೨ ಹಾಗೂ ಮುದ್ದಯ್ಯ ೧ ಗೋಲು ದಾಖಲಿಸಿದರು. ಅಜ್ಜೇಟ್ಟಿರ ಪರ ಗೌತಮ್ ಮಂದಣ್ಣ ೧ ಗೋಲು ಬಾರಿಸಿದರು. ಅಜ್ಜೇಟ್ಟಿರ ವಿಕ್ರಮ್ ಉತ್ತಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಅಲ್ಲಪಂಡ ಮತ್ತು ಪಟ್ಟಡ ನಡುವಿನ ಪಂದ್ಯದಲ್ಲಿ ೬-೦ ಗೋಲುಗಳ ಅಂತರದಲ್ಲಿ ಅಲ್ಲಪಂಡ ತಂಡ ವಿಜಯ ಸಾಧಿಸಿತು. ಅಲ್ಲಪಂಡ ಪರ ಬೋಪಣ್ಣ ೨, ಬನ್ಸಿ, ರಿಪಿನ್ ಸೋಮಣ್ಣ, ಗಿರಿ ಚೆಂಗಪ್ಪ, ಲಿಖಿತ್ ಮುತ್ತಣ್ಣ ಹಾಗೂ ಪೂರ್ಣ ಚಿಣ್ಣಪ್ಪ ತಲಾ ೧ ಗೋಲು ದಾಖಲಿಸಿದರು. ಪಟ್ಟಡ ಯಶ್ವಿನ್ ಅಚ್ಚಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕುಲ್ಲಚಂಡ ಮತ್ತು ಆಲೆಮಾಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಕುಲ್ಲಚಂಡ ತಂಡ ಜಯ ಸಾಧಿಸಿತು. ಕುಲ್ಲಚಂಡ ಪರ ಪ್ರಕಾಶ್ ಹಾಗೂ ಬೋಪಣ್ಣ ತಲಾ ೧ ಗೋಲು ದಾಖಲಿಸಿದರು. ಆಲೆಮಾಡ ಪರ ಲಿಖಿನ್ ಅಯ್ಯಪ್ಪ ೧ ಗೋಲು ಬಾರಿಸಿ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಬೊಜ್ಜಂಗಡ ಮತ್ತು ಕೂತಂಡ ನಡುವಿನ ಪಂದ್ಯದಲ್ಲಿ ೬-೦ ಗೋಲುಗಳ ಅಂತರದಲ್ಲಿ ಕೂತಂಡ ಗೆಲುವು ದಾಖಲಿಸಿತು. ಕೂತಂಡ ಪರ ಸಂತೋಷ್ ೨, ಸೋಮಣ್ಣ, ಲಿಖಿತ್ ಕಾಳಯ್ಯ ಹಾಗೂ ಅಯ್ಯಣ್ಣ ತಲಾ ೧ ಗೋಲು ದಾಖಲಿಸಿದರು. ಬೊಜ್ಜಂಗಡ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಬೊಳಿಯಾಡಿರ ಮತ್ತು ಪೆಮ್ಮಂಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಪೆಮ್ಮಂಡ ತಂಡ ಜಯ ಸಾಧಿಸಿತು. ಪೆಮ್ಮಂಡ ಪರ ಸುಗನ್ ಮಂದಣ್ಣ ಹಾಗೂ ಕರಣ್ ಪೊನ್ನಪ್ಪ ತಲಾ ೧ ಗೋಲು ದಾಖಲಿಸಿದರು. ಬೊಳಿಯಾಡಿರ ಡ್ಯಾನಿಶ್ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಅಮ್ಮಣಿಚಂಡ ಮತ್ತು ಬೊಳಕಾರಂಡ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಅಮ್ಮಣಿಚಂಡ ಗೆಲುವು ದಾಖಲಿಸಿತು. ಅಮ್ಮಣಿಚಂಡ ಪರ ಬೆನ್ನಿ ಭೀಮಯ್ಯ ೨, ಯಶ್ವಂತ್ ಹಾಗೂ ಬೋಜಣ್ಣ ತಲಾ ೧ ಗೋಲು ದಾಖಲಿಸಿದರು. ಬೊಳಕಾರಂಡ ನಿಖಿಲ್ ನಂಜಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಅಜ್ಜಮಾಡ ಮತ್ತು ಕೊಟ್ಟಂಗಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಅಜ್ಜಮಾಡ ಜಯ ಸಾಧಿಸಿತು. ಅಜ್ಜಮಾಡ ಪರ ಶಿವನ್ ೨, ಕೊಟ್ಟಂಗಡ ಪರ ರೋಶನ್ ೧ ಗೋಲು ದಾಖಲಿಸಿದರು. ಕೊಟ್ಟಂಗಡ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಐಚೆಟ್ಟಿರ ಮತ್ತು ಕಳಕಂಡ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಐಚೆಟ್ಟಿರ ತಂಡ ಜಯ ಸಾಧಿಸಿತು. ಐಚೆಟ್ಟಿರ ಪರ ಪ್ರತಿಕ್ ದೇವಯ್ಯ ೨, ಆಕಾಶ್ ಅಯ್ಯಣ್ಣ ಹಾಗೂ ವೇದ ಬಿದ್ದಪ್ಪ ತಲಾ ೧ ಗೋಲು ದಾಖಲಿಸಿದರು. ಕಳಕಂಡ ಕಾರ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ನಾಳಿಯಂಡ ಮತ್ತು ತೀತಮಾಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ನಾಳಿಯಂಡ ಜಯ ಸಾಧಿಸಿತು. ನಾಳಿಯಂಡ ಪರ ಸಚಿನ್ ಹಾಗೂ ದಿವಿನ್ ತಲಾ ೧ ಗೋಲು ದಾಖಲಿಸಿದರು. ತೀತಮಾಡ ಪರ ಸಂಗಮ್ ದೇವಯ್ಯ ೧ ಗೋಲು ಬಾರಿಸಿದರು. ತೀತಮಾಡ ಪ್ರದ್ಯೋತ್ ಪೊನ್ನಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕಾಳಿಮಾಡ ಮತ್ತು ಕೊಂಗೇಟಿರ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಕೊಂಗೇಟಿರ ಜಯ ಸಾಧಿಸಿತು. ಕೊಂಗೇಟಿರ ಪರ ಶಾವನ್ ಕಾರ್ಯಪ್ಪ ಹಾಗೂ ಅನಿಶ್ ಉತ್ತಯ್ಯ ತಲಾ ೧ ಗೋಲು ದಾಖಲಿಸಿದರು. ಕಾಳಿಮಾಡ ಕುಶಾಲಪ್ಪ ೧ ಗೋಲು ಬಾರಿಸಿದರು. ಕಾಳಿಮಾಡ ಕಿರಣ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕಲಿಯಾಟಂಡ ಮತ್ತು ಅಮ್ಮಂಡ ನಡುವಿನ ಪಂದ್ಯದಲ್ಲಿ ೩-೨ ಗೋಲುಗಳ ಅಂತರದಲ್ಲಿ ಅಮ್ಮಂಡ ತಂಡ ಜಯ ಸಾಧಿಸಿತು. ಅಮ್ಮಂಡ ಪರ ಕಾರ್ಯಪ್ಪ, ಸೋಮಯ್ಯ ಹಾಗೂ ಸೋಮಣ್ಣ ತಲಾ ೧ ಗೋಲು ದಾಖಲಿಸಿದರು. ಕಲಿಯಾಟಂಡ ಪರ ಕರಣ್ ಕುಟ್ಟಣ್ಣ ಹಾಗೂ ಸುಬ್ಬಯ್ಯ ತಲಾ ೧ ಗೋಲು ದಾಖಲಿಸಿದರು. ಕಲಿಯಾಟಂಡ ಕರಣ್ ಕುಟ್ಟಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ತಾಪಂಡ ಮತ್ತು ಚೇನಂಡ ನಡುವಿನ ಪಂದ್ಯದಲ್ಲಿ ೪-೦ ಗೋಲು ಅಂತರದಲ್ಲಿ ಚೇನಂಡ ಗೆಲುವು ಸಾಧಿಸಿತು. ಚೇನಂಡ ಪರ ಮೌರ್ಯ ತಿಮ್ಮಯ್ಯ ೨, ಉತ್ತಪ್ಪ ಹಾಗೂ ಹರ್ಷ ಅಯ್ಯಣ್ಣ ತಲಾ ೧ ಗೋಲು ದಾಖಲಿಸಿದರು. ತಾಪಂಡ ಕಾರ್ತಿಕ್ ದೇವಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಚೋಯಮಾಡಂಡ ಮತ್ತು ಅಪ್ಪಾರಂಡ ನಡುವಿನ ಪಂದ್ಯದಲ್ಲಿ ೪-೧ ಗೋಲುಗಳ ಅಂತರದಲ್ಲಿ ಚೋಯಮಾಡಂಡ ಜಯ ಸಾಧಿಸಿತು. ಚೋಯಮಾಡಂಡ ಪರ ಬಿಪಿನ್ ಅಯ್ಯಪ್ಪ ಭರ್ಜರಿ ೪ ಗೋಲುಗಳನ್ನು ದಾಖಲಿಸಿದರು. ಅಪ್ಪಾರಂಡ ಪರ ಜಿಪ್ಸಿ ಮಂದಣ್ಣ ೧ ಗೋಲು ದಾಖಲಿಸಿದರು. ಅಪ್ಪಾರಂಡ ನೀಲ್ ಪ್ಲೇಯರ್ ಆಫ್ ದಿ ಪ್ರಶಸ್ತಿ ಪಡೆದರು.

ಕೋಟೆರ ಮತ್ತು ಅಪ್ಪನೆರವಂಡ ನಡುವಿನ ಪಂದ್ಯದಲ್ಲಿ ೫-೧ ಗೋಲುಗಳ ಅಂತರದಲ್ಲಿ ಕೋಟೆರ ತಂಡ ಗೆಲುವು ದಾಖಲಿಸಿತು. ಕೋಟೆರ ಪರ ಕವನ್ ೩, ಭರತ್ ಹಾಗೂ ಅಕ್ಷಯ್ ತಲಾ ೧ ಗೋಲು ದಾಖಲಿಸಿದರು. ಅಪ್ಪನೆರವಂಡ ಪರ ಯಶ್ವಿನ್ ನಾಚಪ್ಪ ೧ ಗೋಲು ಬಾರಿಸಿ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.