ಸುಂಟಿಕೊಪ್ಪ, ಏ.೧೩: ಕ್ರೆöÊಸ್ತ ಭಕ್ತಾದಿಗಳು ಗರಿಗಳ ಭಾನುವಾರವನ್ನು ಸಂತ ಅಂತೋಣಿಯವರ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಸಂತ ಅಂತೋಣಿ ದೇವಾಲಯ ದ ಧರ್ಮಗುರುಗಳಾದ ವಿಜಯಕುಮಾರ್ ಅವರುಗಳು ಸಂತ ಮೇರಿ ಶಾಲಾ ಶಾಲಾವರಣದಲ್ಲಿ ತೆಂಗಿನ ಗರಿಗಳನ್ನು ಆರ್ಶಿವಚಿಸಿ ನಂತರ ಕ್ರೆöÊಸ್ತ ಬಾಂಧವರಿಗೆ ವಿತರಿಸಿದರು. ನಂತರ ಶಾಲಾ ವರಣದಿಂದ ದೇವಾಲಯದವರೆಗೆ ಮೆರವಣಿಗೆಯನ್ನು ನಡೆಸುವ ಮೂಲಕ ವಿಶೇಷ ಗಾಯನ ಬಲಿಪೂಜೆ ಪ್ರಭೋದನೆಯನ್ನು ಆರ್ಪಿಸಿದರು. ಇದರೊಂದಿಗೆ ಪವಿತ್ರ ವಾರಕ್ಕೆ ಮುನ್ನುಡಿ ಇಡಲಾಯಿತು. ಈ ಸಂದರ್ಭ ಸಂತ ಕ್ಲಾರ ಕನ್ಯಾಸ್ತಿçà ಮಠದ ಕನ್ಯಾಸ್ತಿçÃಯರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಬಲಿಪೂಜೆ, ಪ್ರಭೋದನೆ ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.