ಗೋಣಿಕೊಪ್ಪಲು, ಏ.೧೩: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ಎಂಟನೇ ದಿನ ೭ ತಂಡಗಳು ಮುನ್ನಡೆ ಸಾಧಿಸಿದವು. ಬಾಚಮಡ ಹಾಗೂ ಮಂಡAಗಡ ತಂಡದ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಂಡAಗಡ ತಂಡವು ೧ ವಿಕೆಟ್ ಕಳೆದುಕೊಂಡು ೧೭೧ ರನ್ ಗಳಿಸಿತು. ಬಾಚಮಾಡ ತಂಡ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ ೪೩ ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು. ಮಂಡAಗಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ಎರಡನೇ ಪಂದ್ಯವು ಬೊಳಂದAಡ ಹಾಗೂ ಐಚೋಡಿಯಂಡ ತಂಡದ ನಡುವೆ ನಡೆಯಿತು. ಬೊಳಂದAಡ ತಂಡವು ಮೊದಲು ಬ್ಯಾಟಿಂಗ್ ಆರಂಭಿಸಿ ನಿಗದಿತ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೫೦ರನ್ ಬಾರಿಸಿ, ಎದುರಾಳಿ ಐಚೋಡಿಯಂಡ ತಂಡಕ್ಕೆ ಸವಾಲು ನೀಡಿತು. ತೀವ್ರ ಪೈಪೋಟಿ ನಡೆಸಿ ೫ ವಿಕೆಟ್ ಕಳೆದುಕೊಂಡು ೪೫ ರನ್ ಗಳಿಸಿತಾದರೂ ಅಂತಿಮವಾಗಿ ಗುರಿ ಮುಟ್ಟಲು ಸಾಧ್ಯವಾಗದೆ ಐಚೋಡಿಯಂಡ ಸೋಲನ್ನು ಅನುಭವಿಸಿತು.
ಇಟ್ಟಿರ ಹಾಗೂ ಕೊಕ್ಕೆಂಗಡ ತಂಡದ ಪಂದ್ಯದಲ್ಲಿ ಇಟ್ಟಿರ ೮೮ ರನ್ ಗಳಿಸಿ ಎದುರಾಳಿ ಕೊಕ್ಕೆಂಗಡ ತಂಡಕ್ಕೆ ಸವಾಲು ನೀಡಿತು. ಬೆನ್ನತ್ತಿದ ಕೊಕ್ಕೆಂಗಡ ತಂಡವು ೨ ವಿಕೆಟ್ ಕಳೆದುಕೊಂಡು ೮೭ ರನ್ ಗಳಿಸಲಷ್ಟೆ ಸಾಧ್ಯವಾಯಿತು.
ಕುಂಡ್ರAಡ ಹಾಗೂ ನಾಗಂಡ ತಂಡದ ನಡುವಿನ ಪಂದ್ಯದಲ್ಲಿ ನಾಗಂಡ ತಂಡವು ಮೊದಲು ಬ್ಯಾಟಿಂಗ್ ಆರಂಭಿಸಿ ೪ ವಿಕೆಟ್ ಕಳೆದುಕೊಂಡು ೪೨ ರನ್ ಕಲೆ ಹಾಕಿತು. ಕುಂಡ್ರAಡ ತಂಡವು ೩ವಿಕೆಟ್ ಕಳೆದುಕೊಂಡು ೪೩ ರನ್ ಗಳಿಸಿ ವಿಜಯ ಸಾಧಿಸಿತು.
ಚೌರಿರ ಹಾಗೂ ತೆನ್ನಿರ ತಂಡದ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೌರಿರ ತಂಡ ನಿಗದಿತ ಓವರ್‌ನಲ್ಲಿ ೬ ವಿಕೆಟ್ ಕಳೆದುಕೊಂಡು ೬೧ ರನ್ ಬಾರಿಸಿತು. ತೆನ್ನಿರ ತಂಡವು ೫ ವಿಕೆಟ್ ಕಳೆದುಕೊಂಡು ೩೮ ರನ್ ಗಳಿಸಿ ಸೋಲನ್ನು ಅನುಭವಿಸಿತು.
ಕೋದಂಡ ಹಾಗೂ ಚೊಟ್ಟಂಗಡ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಚೊಟ್ಟಂಗಡ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೆ ೧೨೬ ರನ್ ಗಳಿಸಿ ಎದುರಾಳಿ ತಂಡಕ್ಕೆ ಬ್ಯಾಟಿಂಗ್ ನೀಡಿತು. ಈ ರನ್ ಬೇಧಿಸುವ ಪ್ರಯತ್ನ ಮಾಡಿದ ಕೋದಂಡ ತಂಡವು ೮ ವಿಕೆಟ್ ಕಳೆದುಕೊಂಡು ಕೇವಲ ೪೮ ರನ್ ಸಂಪಾದಿಸಿ ಸೋಲನ್ನು ಒಪ್ಪಿಕೊಂಡಿತು.
ಮಲ್ಲAಡ ಹಾಗೂ ಅಪ್ಪಾರಂಡ ತಂಡದ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಅಪ್ಪಾರಂಡ ತಂಡವು ನಿಗದಿತ ಓವರ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ೧೫೦ ರನ್‌ಗಳಿಸಿತು. ಬೃಹತ್ ರನ್ ಬೆನ್ನತ್ತಿದ್ದ ಮಲ್ಲಂಡ ತಂಡವು ೭೭ ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿದರು. - ಹೆಚ್.ಕೆ.ಜಗದೀಶ್