ಸೋಮವಾರಪೇಟೆ, ಏ.೧೩ : ಇಲ್ಲಿನ ಒಕ್ಕಲಿಗರ ಯುವ ವೇದಿಕೆಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಹಾಗೂ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಷಿಯೇಷನ್ ವತಿಯಿಂದ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆದ ಎರಡನೇ ದಿನದ ಕಬಡ್ಡಿ ಪಂದ್ಯಾಟದಲ್ಲಿ ಬಲಿಷ್ಠ ತಂಡಗಳು ಪ್ರತಿಷ್ಠಿತ ಒಕ್ಕಲಿಗ ಕಪ್‌ಗಾಗಿ ತೀವ್ರ ಸೆಣಸಾಟ ನಡೆಸಿದವು.
ವೇದಿಕೆಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಹಾಗೂ ಪದಾಧಿಕಾರಿಗಳ ಉಸ್ತುವಾರಿಯಲ್ಲಿ ಪ್ರೋ ಕಬಡ್ಡಿ ಮಾದರಿಯ ರಾಷ್ಟಿçÃಯ ಮಟ್ಟದ ಪಂದ್ಯಾಟವನ್ನು ಆಯೋಜಿಸಿದ್ದು, ಕಬಡ್ಡಿ ಕ್ರೀಡೆಯಲ್ಲಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಆಟಗಾರರು ಭಾಗಿಯಾಗಿ ಕಬಡ್ಡಿ ಕ್ರೀಡೆಯ ರಸದೌತಣವನ್ನು ಉಣಬಡಿಸಿದರು.
ಹೊನಲುಬೆಳಕಿನ ನಡುವೆ ಮ್ಯಾಟ್ ಮೈದಾನದಲ್ಲಿ ಆಟಗಾರರು ಪಾದರಸದಂತೆ ಓಡಾಡಿ ರೈಡಿಂಗ್-ಕ್ಯಾಚ್‌ನಲ್ಲಿ ದೃಷ್ಟಿ ನೆಟ್ಟಿದ್ದರೆ, ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಸಾವಿರಾರು ಮಂದಿ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಹುರಿದುಂಬಿಸಿದರು.
ರಾಷ್ರೀಯ ಮಟ್ಟದ ಎ. ಗ್ರೇಡ್ ಹೊನಲು ಬೆಳಕಿನ ‘ಒಕ್ಕಲಿಗರ ಕಪ್’ ಕಬಡ್ಡಿ ಪಂದ್ಯಗಳನ್ನು ವೀಕ್ಷಿಸಲು ರಾತ್ರಿ ಜನಸಾಗರವೇ ಹರಿದು ಬಂದಿತ್ತು. ಪ್ರೋ ಕಬಡ್ಡಿಯಲ್ಲಿ ಆಟವಾಡಿರುವ ೪೦ ಮಂದಿ ಆಟಗಾರರು ವಿವಿಧ ತಂಡಗಳಲ್ಲಿ ಕಾಣಿಸಿಕೊಂಡು, ಕರಾರುವಕ್ಕಾದ ದಾಳಿಯಿಂದ ಕಬಡ್ಡಿ ಪ್ರೇಮಿಗಳನ್ನು ರಂಜಿಸಿದರು.
ರಾಷ್ಟçಮಟ್ಟದ ಕಬಡ್ಡಿ ಪಂದ್ಯಾಟ ನಡೆಸಲು ಸಹಕರಿಸಿದ ದಾನಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಾಂಭವಿ ಹಣಕೋಡು, ತಜ್ಞವಿ ಹಾನಗಲ್ ಶೆಟ್ಟಳ್ಳಿ, ಲೋಚನಾ ಕಲ್ಕಂದೂರು, ಅನುಷ್ಯ ತಾಕೇರಿ ಅವರುಗಳನ್ನು ಸನ್ಮಾನಿಸಲಾಯಿತು. ಗುರುರಾಜ್ ಶಿರಸಿ, ಶೇಖರ್‌ಮೂರ್ತಿ ಬೆಂಗಳೂರು ಅವರು ಕಬಡ್ಡಿ ಪಂದ್ಯಾಟಗಳ ನಿರೂಪಣೆ ಮಾಡುವುದರೊಂದಿಗೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಉದಯೋನ್ಮುಖ ಕಬಡ್ಡಿ ಪ್ರತಿಭೆಗಳನ್ನು ಸ್ಥಳೀಯರಿಗೆ ಪರಿಚಯ ಮಾಡಿಕೊಟ್ಟರು.
ಎರಡು ಅಂಕಣದಲ್ಲಿ ನಡೆದ ಬಲಿಷ್ಠ ತಂಡಗಳ ಪ್ರತಿ ಪಂದ್ಯಗಳು ರೋಚಕತೆಯಿಂದ ಕೂಡಿದ್ದವು. ಬಲಿಷ್ಠ ಬಿಪಿಸಿಎಲ್ ತಂಡ ಬೆಂಗಳೂರು ಸಿಟಿ ಪೊಲೀಸ್ ತಂಡದ ವಿರುದ್ಧ ೩೨-೪ ಅಂಕಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು.
ದೆಹಲಿ ರ‍್ಡಿನೆನ್ಸ್ ಫ್ಯಾಕ್ಟರಿ ತಂಡ ಬಲಿಷ್ಠ ಬ್ಯಾಂಕ್ ಆಫ್ ಬರೋಡ ತಂಡವನ್ನು ೨೮-೨೬ ಅಂಕಗಳ ಅಂತರದಲ್ಲಿ ಮಣಿಸಿ ಗೆಲುವಿನ ನಗೆ ಬೀರಿತು. ಸೌತ್ ಸೆಂಟ್ರಲ್ ರೈಲ್ವೇಸ್ ತಂಡ ಸ್ಪರ‍್ಟನ್ ಕ್ಲಬ್ ಹರ್ಯಾಣ ತಂಡವನ್ನು ೩೨-೨೩ ಅಂಕಗಳ ಅಂತರದಲ್ಲಿ ಸೋಲಿಸಿತು. ಇಎಸ್‌ಐ ದೆಹಲಿ ತಂಡ ಕಲ್ಕತ್ತ ಪೊಲೀಸ್ ತಂಡವನ್ನು ೪೩-೨೯ ಅಂಕಗಳ ಅಂತರದಲ್ಲಿ ಮಣಿಸಿತು.
ರೈಲ್ವೆ ವೀಲ್ಸ್ ಫ್ಯಾಕ್ಟರಿ ತಂಡ ಯಂಗ್ ಬುಲ್ಸ್ ತಂಡದ ವಿರುದ್ದ ೪೨-೩೩ ಅಂಕಗಳ ಅಂತರದಲ್ಲಿ ಗೆಲವು ಕಂಡಿತು. ರ‍್ಡಿನೆಸ್ ಫ್ಯಾಕ್ಟರಿ ದೆಹಲಿ ತಂಡ ಸಂಜಯ್ ಗಡಾವತ್ ಕೊಲ್ಲಾಪುರ ತಂಡದ ವಿರುದ್ದ ೪೬-೨೭ ಅಂಕಗಳಿAದ ಗೆಲುವು ಸಾಧಿಸಿತು.
ಟಿಎಂಸಿ ಥಾನೆ ತಂಡ, ಯಂಗ್ ಬುಲ್ಸ್ ತಂಡವನ್ನು ೩೪-೩೦ ಅಂಕಗಳಿAದ ಮಣಿಸಿತು. ಜೆ.ಕೆ.ಅಕಾಡೆಮಿ ತಂಡ ದೆಹಲಿ ಚಂದ್ರವಲಾ ತಂಡವನ್ನು ೪೪-೨೨ ಅಂಕಗಳ ಅಂತರದಲ್ಲಿ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಸ್ಥಳೀಯ ನೃತ್ಯ ಶಾಲೆಗಳ ವಿದ್ಯಾರ್ಥಿಗಳಿಂದ ಮೂಡಿಬಂದ ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.