ಮಡಿಕೇರಿ, ಏ. ೧೩: ಪಿ.ಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು.

ಶಾಲಾ ಹಿರಿಯ ಮುಖ್ಯ ಶಿಕ್ಷಕಿ ಹೆಚ್.ಕೆ. ಸುಶೀಲ ಮಾತನಾಡಿ, ಶಾಲೆಯಲ್ಲಿ ಸಿಗುವ ಉಚಿತ ಸೌಲಭ್ಯ ಹಾಗೂ ಸರ್ಕಾರದ ವತಿಯಿಂದ ದೊರೆಯುವ ಉಚಿತ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಶಾಲೆಯಲ್ಲಿನ ಸೌಲಭ್ಯಗಳು ನುರಿತ ಶಿಕ್ಷಕರು, ಸುಸಜ್ಜಿತ ನವೀನ ಕಟ್ಟಡ, ಸುಸಜ್ಜಿತ ಪೀಠೋಪಕರಣ ಗಳು, ಅನುಭವಾತ್ಮಕ ಕಲಿಕೆ, ವಿಶಾಲವಾದ ಆಟದ ಮೈದಾನ, ಗ್ರಂಥಾಲಯ, ಉತ್ತಮ ವಿಜ್ಞಾನ, ಗಣಿತ, ಸಮಾಜ ಸಮಾಜ ವಿಜ್ಞಾನ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಕ್ಲಾಸ್, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸೋಲಾರ್ ವ್ಯವಸ್ಥೆ, ಡಿಜಿಟಲ್ ಲೈಬ್ರರಿ (ಗ್ರಂಥಾಲಯ), ಆಧುನಿಕ ಕ್ರೀಡಾ ಉಪಕರಣಗಳು, ಐಡಿಕಾರ್ಡ್ ವ್ಯವಸ್ಥೆ ಇದೆ ಎಂದು ಹೇಳಿದರು.

೬ನೇ ತರಗತಿಯ ಯುವ ಮುತ್ತಪ್ಪ, ೭ನೇ ತರಗತಿಯ ಅಂಚಲ್ ದೇಚಮ್ಮ ಹಾಗೂ ಖುಷಿ ಎಸ್.ವಿ. ಈ ವಿದ್ಯಾರ್ಥಿಗಳು ಮಧ್ಯಪ್ರದೇಶ ರಾಜ್ಯದ ಭೋಪಾಲ್ ಹಾಗೂ ಮನ್ಸೂರ್ ಸ್ಥಳದಲ್ಲಿ ರಾಷ್ಟç ಮಟ್ಟದಲ್ಲಿ ಆಯೋಜಿಸಲಾದ ಹಾಕಿ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಅಧ್ಯಕ್ಷ ಜಗದೀಶ್ ಮಾತನಾಡಿ, ಶಾಲೆಗೆ ಪೋಷಕರ ಸಹಕಾರ ಅಗತ್ಯ ಎಂದು ತಿಳಿಸಿದರು. ೨೦೨೪-೨೫ನೇ ಸಾಲಿನ ನಿರಂತರ ಹಾಗೂ ವ್ಯಾಪಕ ಮೌಲ್ಯ ಮಾಪನದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಕವಿತಾ ನಿರೂಪಿಸಿದರು. ಸಿ.ಸಿ. ಮ್ಯಾಥ್ಯೂ ಸ್ವಾಗತಿಸಿ, ಜಯಮ್ಮ ವಂದಿಸಿದರು.