ಸುರೇಶ್ ಬಿಳಿಗೇರಿ
ಮಡಿಕೇರಿ, ಏ. ೧೩: ಇತ್ತೀಚೆಗೆ ಹೆಚ್ಚಾಗುತ್ತಿರುವ ಸೈಬರ್ ಕ್ರೈಂ ಅಪರಾಧಗಳಿಗೆ ಪೂರಕವಾಗಿ ಉತ್ತರ ಭಾರತೀಯ ವಂಚಕರು ಈಗ ಕೊಡಗಿನ ವಿದ್ಯಾರ್ಥಿಗಳನ್ನು ಸ್ಥಳೀಯರು ತಮ್ಮ ಸೈಬರ್ ಕ್ರೈಂ ವಂಚನೆಗಳಿಗೆ ಬಳಸಿಕೊಳ್ಳುತ್ತಿರುವ ಆಘಾತಕಾರಿ ಸತ್ಯ ಬಯಲಾಗಿದೆ. ಸ್ಥಳೀಯರನ್ನು ಪರಿಚಯಿಸಿಕೊಂಡು ಅವರ ಮೂಲಕ ಕೊಡಗಿನ ನಾನಾ ಕಾಲೇಜಿನ ಅಪ್ರಾಪ್ತ ಯುವಕ ವಿದ್ಯಾರ್ಥಿಗಳನ್ನು ಅವರಿಗರಿಯದೆ ಬಳಸಿಕೊಂಡು ದೇಶದಾದ್ಯಂತ ನಡೆಯುತ್ತಿರುವ ಸೈಬರ್ ವಂಚನೆ ಗಳಿಗೆ ಬಳಸಿಕೊಳ್ಳಲಾಗುತ್ತಿದ್ದು ಹಲವು ವಿದ್ಯಾರ್ಥಿಗಳಿಗೆ ಕರ್ನಾಟಕದ ಬೇರೆ ಬೇರೆ ಜಿಲ್ಲೆ ಸೇರಿದಂತೆ ಮಹಾರಾಷ್ಟç, ಗುಜರಾತ್, ತಮಿಳುನಾಡು, ಕೇರಳ ರಾಜ್ಯ ಪೊಲೀಸರಿಂದ ನೋಟಿಸ್ ಬಂದಿದ್ದು ವಿದ್ಯಾರ್ಥಿಗಳ ಭವಿಷ್ಯವೂ ಈಗ ಸಮಸ್ಯೆಗೆ ಸಿಲುಕಿದಂತಾಗಿದೆ. ಈ ಸೈಬರ್ ವಂಚಕರಿಗೆ ಸ್ಥಳೀಯರೇ ಸಹಕರಿಸುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ.
ಹೇಗೆ ನಡೆಯುತ್ತೆ ಈ ವಂಚನೆ?
ಸೈಬರ್ ಕ್ರೈಂ ಅಪರಾಧಗಳಿಗೆ ವಂಚಕರು ಬಡ ಮತ್ತು ಕಾರ್ಮಿಕರ ಮಕ್ಕಳನ್ನೇ ಬಳಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಸ್ನೇಹ ಬೆಳೆಸಿಕೊಳ್ಳುವ ವಂಚಕರು ಬಳಿಕ ಅವರಿಗೆ ಹಣದ ಮತ್ತು ಇನ್ನಿತರ ಆಮೀಷಗಳನ್ನೋಡ್ಡಿ ಅವರ ಅಪ್ರಾಪ್ತ ಅಥವಾ ಕಾಲೇಜು ಸ್ನೇಹಿತರ ಮನವೊಲಿಸಿ ದಾಖಲೆಗಳನ್ನು ಪಡೆದುಕೊಳ್ಳುವಂತೆ ಹೇಳುತ್ತಾರೆ. ಏನಾದರೊಂದು ಸುಳ್ಳು ಹೇಳಿ ಪಡೆದುಕೊಂಡ ದಾಖಲೆಗಳ ಮೂಲಕ ಅವರೇ ಹಣ ಡೆಪಾಸಿಟ್ ಮಾಡಿ ಬ್ಯಾಂಕ್ನಲ್ಲಿ ಖಾತೆ ತೆರಯಲಾಗುತ್ತದೆ. ಜೊತೆಗೆ ಹೊಸ ಸಿಮ್ ಕಾರ್ಡ್ ಪಡೆದು ಅದನ್ನು ಬ್ಯಾಂಕ್ ಅಕೌಂಟ್ಗೆ ಆಕ್ಟಿವೇಟ್ ಮಾಡಿಸಿ ಆ ಸಂಖ್ಯೆಯನ್ನು ವಂಚಕರೇ ಇಟ್ಟುಕೊಳ್ಳುತ್ತಾರೆ. ಸಹಿ ಹಾಕಿದ ಚೆಕ್ ಬುಕ್, ಎಟಿಎಂ, ಪಾಸ್ ಬುಕ್, ಸಿಮ್ ಕಾರ್ಡ್ ಇವು ನಾಲ್ಕನ್ನು ವಂಚಕರೇ ಇಟ್ಟುಕೊಂಡು ಸಿಮ್ ಮೂಲಕ ಯುಪಿಐ ಆಕ್ಟಿವೇಟ್ ಮಾಡಿಕೊಂಡು ಕ್ರಮೇಣ ಸಣ್ಣಪುಟ್ಟ ವಹಿವಾಟು ಮಾಡಿಕೊಳ್ಳುತ್ತಾರೆ. ಅಕೌಂಟ್ ಹೋಲ್ಡರ್ ವಿದ್ಯಾರ್ಥಿಗಳಿಗೆ ೫೦೦-೧೦೦೦ ನೀಡಿ ಮುಂದೆಯೂ ಹಣ ನೀಡುವ ಭರವಸೆ ನೀಡಲಾಗುತ್ತದೆ.
ಸ್ಥಳೀಯ ವಂಚಕರ ಪಾತ್ರವೇನು?
ಕೊಡಗಿನ ವೀರಾಜಪೇಟೆ ತಾಲೂಕಿನ ಸಿದ್ದಾಪುರ, ಅಮ್ಮತ್ತಿ, ಗೋಣಿಕೊಪ್ಪ, ಪಾಲಿಬೆಟ್ಟ ಭಾಗದಲ್ಲಿ ಸೈಬರ್ ಕ್ರೈಂ ಅಪರಾಧಗಳಿಗೆ ಅಪ್ರಾಪ್ತ ಯುವಕರನ್ನು ಬಳಸಿಕೊಳ್ಳಲಾಗುತ್ತಿದೆ. ಸುಹೈಲ್ ಎಂಬ ಯುವಕ ಹಲವು ಯುವಕರ ಬಳಿ ನಮಗೆ ಬೇರೆಡೆಯಿಂದ ಕಾಫಿಯ ಹಣ ಬರಬೇಕಿದ್ದು ನನ್ನ ಅಕೌಂಟ್ ಬ್ಲಾಕ್ ಆಗಿದ್ದು ನಿನ್ನ ಅಕೌಂಟ್ ಮಾಡಿ ಅದರಲ್ಲಿ ವ್ಯವಹಾರ ನಡೆಸುತ್ತೇನೆ, ನಿನಗೂ ಸ್ವಲ್ಪ ಖರ್ಚಿಗೆ ನೀಡುತ್ತೇನೆ ಎಂದು ಸಂದೀಪ್ ಎಂಬ ಯುವಕನ ಬಳಿ ದಾಖಲೆ ಪಡೆದು ಗೋಣಿಕೊಪ್ಪದ ಬ್ಯಾಂಕ್ ಒಂದರಲ್ಲಿ ಅಕೌಂಟ್ ತೆರೆಯುತ್ತಾನೆ. ಅಕೌಂಟ್ ತೆರೆದ ಬಳಿಕ ಬ್ಯಾಂಕ್ನಲ್ಲಿ ದೊರೆತ ಚೆಕ್ ಬುಕ್ ಸಹಿ ಮಾಡಿಸಿಕೊಂಡ ಸುಹೈಲ್ ಎಟಿಎಂ ಮತ್ತು ಪಾಸ್ ಬುಕ್ ಅನ್ನು ಕುಶಾಲನಗರದ ಬಳಿಯ ಆಫ್ರೋಜ್ ಎಂಬ ಯುವಕನಿಗೆ ನೀಡುತ್ತಾನೆ. ಕೇವಲ ಕಾಫಿ ಹಣದ ವಹಿವಾಟಿಗೆ ತನ್ನ ಅಕೌಂಟ್ ಮಾಡಲಾಗಿದೆ ಎಂದು ನಂಬಿದ ಸಂದೀಪ್, ಸುಹೈಲ್ಗೆ ಸಹಿ ಹಾಕಿದ ಚೆಕ್ ಲೀಫ್, ಎಟಿಎಂ ಕೊಟ್ಟು ಸುಮ್ಮನಾಗುತ್ತಾನೆ. ಇವುಗಳನ್ನೆಲ್ಲ ಸುಹೈಲ್, ಆಫ್ರೋಜ್ಗೆ ನೀಡಿ ಅದನ್ನು ಕೇರಳದ ಜುಬಿನ್ ತೋಮಸ್ ಎಂಬವನಿಗೆ ಕಳುಹಿಸಿಕೊಡುತ್ತಾನೆ. ಬ್ಯಾಂಕ್ ಖಾತೆಯಲ್ಲಿ ಏನೇ ವಹಿವಾಟು ಆದರೂ ಸಂದೀಪನಿಗೆ ತಿಳಿಯದಿರಲು ಬ್ಯಾಂಕ್ನಿAದ ಯಾವುದೇ ಮೆಸೇಜ್ ಬಾರದಂತೆ ಹೊಸ ಸಂಖ್ಯೆಯನ್ನು ಬ್ಯಾಂಕ್ ಅಕೌಂಟ್ಗೆ ಲಿಂಕ್ ಮಾಡಲಾಗುತ್ತದೆ.
ಒಂದೇ ದಿನ ೮೬೨೭೨೪ ವಹಿವಾಟು
ಅಪ್ರಾಪ್ತನಾಗಿರುವ ಕಾಲೇಜು ವಿದ್ಯಾರ್ಥಿ ಸಂದೀಪ್ ಖಾತೆಯಲ್ಲಿ ಡಿಸೆಂಬರ್ ಎರಡರಂದು ಒಂದೇ ದಿನ ೯೮೬೦೦೦/- ರೂ ವಹಿವಾಟಾಗಿದ್ದು ವಂಚಕ ಜುಬಿನ್ ಜೋಸೆಫ್ ಕೇರಳದ ಕ್ಯಾಲಿಕೇಟ್ನಲ್ಲಿ ಕುಳಿತುಕೊಂಡು ನಾನಾ ಖಾತೆಗಳಿಂದ ಲಕ್ಷಾಂತರ ರೂ ಕಬಳಿಸಿದ್ದ. ಅದರಲ್ಲಿ ಸಂದೀಪನ ಖಾತೆಗೆ ೮೭೬೨೪೭/- ರೂ ವರ್ಗಾಯಿಸಿದ್ದ. ಅದೇ ದಿನ ಆ ಹಣದಲ್ಲಿ ಮೊದಲು ಕ್ಯಾಲಿಕೇಟ್ ನಿಂದ ವಸೀಮ್ ಎಂಬಾತನ ಹೆಸರಿನಲ್ಲಿ ಚೇರವನ್ನೂರು ಶಾಖೆಯಿಂದ ನಗದು ರೂ ೨೫೦೦೦೦/- ಪಡೆದುಕೊಳ್ಳಲಾಗಿತ್ತು. ಇನ್ನುಳಿದ ಹಣದಲ್ಲಿ ೫೨೫೦೦೦/- ವನ್ನು ಜುಬಿನ್ ಜೋಸೆಫ್ ೪ಏಳನೇ ಪುಟಕ್ಕೆ (ಮೊದಲ ಪುಟದಿಂದ) ಸಂದೀಪನ ಸಹಿ ಹಾಕಿದ ಚೆಕ್ ಬಳಸಿ ಕ್ಯಾಥಲಿಕ್ ಬ್ಯಾಂಕ್ನಲ್ಲಿರುವ ಆತನ ಎಸ್ಬಿ ಖಾತೆಗೆ ಆರ್.ಟಿ.ಜಿ.ಎಸ್ ಮಾಡಿಸಿಕೊಂಡಿದ್ದ.
ನೋಟೀಸ್ ಬಂದಾಗಲೇ ಮನೆಯವರು ಶಾಕ್
ಡಿಸೆಂಬರ್ ಎರಡರಂದು ಸೈಬರ್ ವಂಚನೆ ಬಳಿಕ ಡಿಸೆಂಬರ್ ಎರಡನೇ ವಾರದಲ್ಲಿ ಯುವಕನಿಗೆ ಬ್ಯಾಂಕ್ ಮೂಲಕ ನೋಟೀಸ್ ಬರುತ್ತದೆ. ನಿಮ್ಮ ಖಾತೆಗೆ ತಮಿಳುನಾಡು, ಗುಜರಾತ್, ಕೇರಳದ ಕೆಲವು ಖಾತೆಗಳಿಂದ ಹಣ ವರ್ಗಾವಣೆಯಾಗಿದ್ದು ಅದೇ ದಿನ ನಿಮ್ಮ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದ್ದು ಕಾರಣ ನೀಡಲು ಕೋರಿದ ನೋಟೀಸ್ ನೋಡಿ ಮನೆಯವರು ಆಘಾತಕ್ಕೊಳಾಗಾಗುತ್ತಾರೆ, ಮತ್ತೆ ಮತ್ತೆ ೩ ನೋಟೀಸ್ ಬರುತ್ತದೆ. ಕಾರ್ಮಿಕ ಕುಟುಂಬದ ಸಂದೀಪನ ಹೆತ್ತವರಿಗೆ ಏನು ಮಾಡುವುದೆಂದು ತೋಚದೆ ಚಿಂತೆಗೊಳಗಾಗುತ್ತಾರೆ.
ಹಲವು ಯುವಕರಿಗೆ ನೋಟೀಸ್
ಇದೆ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಹಲವು ಯುವಕರ ಹೆಸರಿನಲ್ಲಿ ವಂಚನೆ ನಡೆದಿದ್ದು ೩೦ಕ್ಕೂ ಹೆಚ್ಚು ಯುವಕರು ಏನು ಮಾಡುವುದೆಂದು ತೋಚದೆ ಸೆಟಲ್ಮೆಂಟ್ ಮಾಡಿಕೊಂಡಿದ್ದು ಇವೆ. ತಪ್ಪೇ ಮಾಡದ ಸಂದೀಪ ಸುಹೈಲ್ ಬಳಿ ಹೇಳಿಕೊಂಡರೂ ಏನು ಪ್ರಯೋಜನವಾಗಿಲ್ಲ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಹುಬ್ಬಳ್ಳಿಯ ಸೈಬರ್ ಠಾಣೆಗೆ ತೆರಳಿ ನನಗೂ ಈ ವಂಚನೆಗೂ ಸಂಬAಧವಿಲ್ಲ ಎಂದು ಹೇಳಿಕೆ ನೀಡಿ ಬರಲಾಗಿದೆ. ಆದರೆ ಮತ್ತೆ ಈಗ ಗುಜರಾತ್ ಮೂಲದ ವ್ಯಕ್ತಿಯ ಖಾತೆಯಿಂದ ಹಣ ವರ್ಗಾವಣೆ ಮಾಡಿದಕ್ಕೆ ಸೂಕ್ತ ದಾಖಲೆ ನೀಡಿ ಎಂದು ನೋಟೀಸ್ ಬಂದಿದ್ದು ಏನು ಅರಿಯದ ಕುಟುಂಬಕ್ಕೀಗ ಹೊಸ ತಲೆನೋವು ಶುರುವಾಗಿದೆ.
ಗೋಣಿಕೊಪ್ಪದ ಬ್ಯಾಂಕ್ನಲ್ಲಿ ೩೦ಕ್ಕೂ ಹೆಚ್ಚು ಪ್ರಕರಣ
ದಕ್ಷಿಣ ಕೊಡಗಿನ ಗೋಣಿಕೊಪ್ಪದಲ್ಲಿರುವ ಖಾಸಗಿ ಬ್ಯಾಂಕ್ ಒಂದರಲ್ಲೇ ೩೦ ಹೆಚ್ಚು ಸೈಬರ್ ಕ್ರೈಂ ವಂಚನೆ ಪ್ರಕರಣಗಳು ದಾಖಲಾಗಿವೆ. ಖಾತೆ ಹೆಚ್ಚಿಸಲು ಸೂಕ್ತ ಭದ್ರತಾ ತಾಂತ್ರಿಕ ವ್ಯವಸ್ಥೆ ಹಾಗೂ ನಿಗವನ್ನು ಇಡದೆ, ಅಪ್ರಾಪ್ತ ಯುವಕರ ಖಾತೆಯನ್ನು ತೆರೆಯುದಕ್ಕಷ್ಟೇ ಸಿದ್ದರಿರುವ ಬ್ಯಾಂಕ್ ಸಿಬ್ಬಂದಿ ಈಗ ಸಂದೀ¥ನಿಗೆ ಕೈಚೆಲ್ಲಿದ್ದಾರೆ. ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಖಾತೆ ತೆರೆಯುವಾಗ ಪೋಷಕರ ಸಹಿಯನ್ನು ಪಡೆದುಕೊಳ್ಳಬೇಕೆಂಬ ನಿಯಮ ಇದ್ದು ಅದನ್ನು ಗಾಳಿಗೆ ತೂರಿ ಯಾರೇ ಬಂದರೂ ಖಾತೆ ತೆರೆದುಕೊಟ್ಟಿದ್ದಲ್ಲದೆ ಆ ಯುವಕನ ಖಾತೆಗೆ ಹಣ ಬಂದರು ಯಾರು, ಯಾಕೆ ಕಳುಹಿಸಿದರು ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಕೇವಲ ನೋಟೀಸ್ ಮಾಡಿ ಸುಮ್ಮನಾಗಿದೆ.
ಉತ್ತರ ಭಾರತಿಯ ಸಿಬ್ಬಂದಿಗಳ ಕೈವಾಡ ಶಂಕೆ
ಈ ಎಲ್ಲಾ ವಂಚನೆಗಳಿಗೂ ಉತ್ತರ ಭಾರತೀಯ ಬ್ಯಾಂಕ್ ಮೂಲದ ನೌಕರರಿಗೂ ಸಂಬAಧವಿರುವ ಸಾಧ್ಯತೆಯಿದೆ. ಜಿಲ್ಲೆಯ ಯಾವುದೇ ಸ್ಥಳೀಯ ಸೊಸೈಟಿ ಬ್ಯಾಂಕ್. ಮಹಿಳಾ ಬ್ಯಾಂಕ್, ಟೀಚರ್ಸ್ ಬ್ಯಾಂಕ್, ಟೌನ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಎಸ್ಬಿಐ ಬ್ಯಾಂಕ್ ಗಳಲ್ಲಿ ಯಾವುದೇ ವಂಚನೆ ಪ್ರಕರಣಗಳು ಆಗಿಲ್ಲ. ಉತ್ತರ ಭಾರತೀಯ ಮೂಲದ ಬ್ಯಾಂಕ್ಗಳಲ್ಲೇ ಹೆಚ್ಚು ವಂಚನೆ ನಡೆಯುತ್ತಿದ್ದು ಇದರಲ್ಲಿ ಉತ್ತರ ಭಾರತೀಯ ಬ್ಯಾಂಕ್ ಸಿಬ್ಬಂದಿಗಳ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತದೆ. ಖಾತೆಯಲ್ಲಿ ಹಣವಿರುವ ಮತ್ತು ವಹಿವಾಟಾಗುವ ವಿಚಾರಗಳು ಹೇಗೆ ಸೈಬರ್ ವಂಚಕರ ಗಮನಕ್ಕೆ ಬರುತ್ತದೆ ಎಂಬುವುದು ಕೂಡ ಇಲ್ಲಿ ನಿಗೂಢ.
ಆಫ್ರೋಜ್ ಹಾಗೂ ಸುಹೈಲ್ ವಿಚಾರಣೆಗೆ ಮೀನಾ ಮೇಷ
ಸೈಬರ್ ವಂಚನೆಯಲ್ಲಿ ತೊಡಗಿಸಿಕೊಂಡಿರುವ ಸುಹೈಲ್ ಹಾಗೂ ಆಫ್ರೋಜ್ ಇಬ್ಬರನ್ನು ಕರ್ನಾಟಕ ಸೈಬರ್ ಕ್ರೆöÊಂ ಪೊಲೀಸರು ವಿಚಾರಣೆಗೆ ಒಳಪಡಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಹತ್ತಾರು ವಂಚನೆ ಪ್ರಕರಣಗಳಿಗೆ ಸಿದ್ದಾಪುರ ಹಾಗೂ ಅಮ್ಮತ್ತಿ ಭಾಗದ ಕೆಲ ಯುವಕರು ಕೈಜೋಡಿಸಿದ್ದು ಆಫ್ರೋಜ್ ಕಿಂಗ್ ಪಿನ್ ಆಗಿದ್ದಾನೆ. ಈತನ ಕುರಿತು ಸಂಪೂರ್ಣ ಮಾಹಿತಿ ನೀಡಿದರೂ ವಂಚನೆಗೊಳಗಾದ ಠಾಣಾ ವ್ಯಾಪ್ತಿಯ ಸೈಬರ್ ಕ್ರೆöÊಂ ಅಧಿಕಾರಿಗಳು ಮಾತ್ರ ಕಳೆದ ೨ ತಿಂಗಳಿನಿAದ ಶಂಕಿತರ ವಿಚಾರಣೆ ಮಾಡಿಲ್ಲ.
ಆಫ್ರೋಜ್ಗೆ ಮಂಗಳೂರು ಹಾಗೂ ಕೇರಳದ ನಂಟು
ಹತ್ತಾರು ಸೈಬರ್ ಕ್ರೆöÊಂ ಪ್ರಕರಣದಲ್ಲಿ ಕಿಂಗ್ ಪಿನ್ ಆಗಿರುವ ಆಫ್ರೋಜ್ ಒಮ್ಮೆ ಕುಶಾಲನಗರದಲ್ಲಿದ್ದರೆ ಮತ್ತೆರೆಡು ದಿನ ಮಂಗಳೂರು ಮತ್ತೆರೆಡು ದಿನ ಕೇರಳಕ್ಕೆ ಪ್ರಯಾಣಿಸುತ್ತಲೇ ಇರುವ ಬಗ್ಗೆ ಪೊಲೀಸ್ ಇಲಾಖೆ ಬಳಿಯೇ ಮಾಹಿತಿ ಇದೆ. ಆದರೂ ಆತನ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸಂದೀಪ್ನAತ ಹಲವು ಅಪ್ರಾಪ್ತ ಯುವಕರು ಸಿದ್ದಾಪುರ, ಗೋಣಿಕೊಪ್ಪ, ಪಾಲಿಬೆಟ್ಟ, ಅಮ್ಮತ್ತಿ ಭಾಗದಲ್ಲಿ ಇದ್ದು ಎಲ್ಲರೂ ತಮಗರಿಯದೆ ವಂಚಕರ ಜಾಲಕ್ಕೆ ಸಿಲುಕಿದ್ದಾರೆ. ಬಡ ಕಾರ್ಮಿಕ ಮಕ್ಕಳ ಮನವೊಲಿಸಿ ಆಮಿಷವೊಡ್ಡಿ ಅವರ ಭವಿಷ್ಯವನ್ನು ಬೀದಿಗೆ ತರುವ ಆಫ್ರೋಜ್ನಂತಹ ನಯವಂಚಕನನ್ನು ಹಿಡಿಯಲು ಮಾತ್ರ ಪೊಲೀಸ್ ಇಲಾಖೆ ಮನಸು ಮಾಡದೇ ಇದ್ದಿದ್ದು ವಿಪರ್ಯಾಸ.