ಮುಳ್ಳೂರು, ಏ. ೧೩: ಸಮೀಪದ ಅಂಕನಹಳ್ಳಿ ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಗುರುಸಿದ್ದವೀರೇಶ್ವರಸ್ವಾಮಿಯ ೧೩ನೇ ಜಾತ್ರಾ ಮಹೋತ್ಸವ ಪ್ರಾರಂಭಗೊAಡಿದೆ. ಮೂರು ದಿನಗಳವರೆಗೆ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶನಿವಾರ ಶ್ರೀಕ್ಷೇತ್ರದ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು. ಸಂಜೆ ೬.೩೦ ಕ್ಕೆ ಶ್ರೀ ಸ್ವಾಮಿಯವರಿಗೆ ಕಂಕಣ ಧಾರಣೆ, ಮಹಾಮಂಗಳಾರತಿ ಕಾರ್ಯವನ್ನು ನೆರವೇರಿಸಲಾಯಿತು. ಸಂಜೆ ೭ ಗಂಟೆಗೆ ಶ್ರೀಕ್ಷೇತ್ರದ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿಯವರಿಗೆ ಸೂರ್ಯ ಮಂಡಲೋತ್ಸವ ಕಾರ್ಯವನ್ನು ನೆರವೇರಿಸಲಾಯಿತು

ಶ್ರೀಕ್ಷೇತ್ರದಲ್ಲಿ ಭಾನುವಾರದಂದು ಶ್ರೀ ಮದನಾಧಿ ಅನಘ ನಿರಂಜನ ಜಂಗಮ ಪೂಜಾ ಕಾರ್ಯದಲ್ಲಿ ಗುರುಗಳಿಗೆ ಪಾದಪೂಜೆ ಮಾಡಲಾಯಿತು. ಸಂಜೆ ಶ್ರೀ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವವನ್ನು ನೆರವೇರಿಸಲಾಯಿತು. ಎರಡೂ ದಿನವು ನಡೆದ ಉತ್ಸವದಲ್ಲಿ ಸ್ಥಳೀಯ ಮತ್ತು ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು. ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದ ಕ್ಷೇತ್ರಾಧ್ಯಕ್ಷ ಶ್ರೀ ಮಹಾಂತ ಶಿವಲಿಂಗಸ್ವಾಮೀಜಿ ಅವರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವವು ನಡೆಯುತ್ತಿದೆ.

ಇಂದು ಜಾತ್ರಾ ಮಹೋತ್ಸವಕ್ಕೆ ತೆರೆ

ತಾ. ೧೫ ರಂದು (ಇಂದು) ಜಾತ್ರಾ ಮಹೋತ್ಸವ ಕೊನೆಗೊಳ್ಳಲಿದ್ದು ಬೆಳಿಗ್ಗೆ ೫ ಗಂಟೆಗೆ ಶ್ರೀ ಕ್ಷೇತ್ರನಾಥ ವೀರಭದ್ರೇಶ್ವರಸ್ವಾಮಿಯವರ ಪ್ರೀತ್ಯರ್ಥ ದುಗ್ಗಳ ಹಾಗೂ ಅಗ್ನಿಕೊಂಡೋತ್ಸವ ಸೇವೆ. ಬೆಳಿಗ್ಗೆ ೬ಕ್ಕೆ ವಟುಗಳಿಗೆ ಲಿಂಗದೀಕ್ಷಾ ಕಾರ್ಯಕ್ರಮ, ೭ ಕ್ಕೆ ಶ್ರೀ ಸ್ವಾಮಿಯವರ ಸಣ್ಣ ಚಂದ್ರಮAಡಲೋತ್ಸವ ಕಾರ್ಯ ನಡೆಯಲಿದ್ದು ಬೆಳಿಗ್ಗೆ ೧೧ ಕ್ಕೆ ಶ್ರೀ ಪ್ರಸನ್ನ ತಪೋವನೇಶ್ವರಿ ಅಮ್ಮನವರ ಮುತೈದೆ ಸೇವೆ ಮತ್ತು ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯ ನಡೆಯುತ್ತದೆ. ಮಧ್ಯಾಹ್ನ ೧೨ ಕ್ಕೆ ದಾಸೋಹ ಸೇವೆ ನಡೆಯಲಿದ್ದು, ಪೂರ್ವಾಹ್ನ ೪ ಕ್ಕೆ ತುಮಕೂರು ಸಿದ್ದಗಂಗಾ ಮಠಾದೀಶ ಶ್ರೀ ಸಿದ್ದಲಿಂಗಸ್ವಾಮೀಜಿ ಅವರ ಸಾನಿಧ್ಯದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯುತ್ತದೆ. ಸಂಜೆ ೫.೩೦ ಕ್ಕೆ ಶ್ರೀ ಸ್ವಾಮಿಯವರ ಪ್ರಕಾರ ಪಲ್ಲಕ್ಕಿ ಉತ್ಸವದೊಂದಿಗೆ ಶ್ರೀ ಸ್ವಾಮಿಯವರ ರಥೋತ್ಸವಕ್ಕೆ ಚಾಲನೆ ಕಾರ್ಯದ ನಂತರ ಸಂಜೆ ೫.೩೦ ಕ್ಕೆ ಶ್ರೀ ಸ್ವಾಮಿಯವರ ಮಹಾರಥೋತ್ಸವ ನಡೆಯುತ್ತದೆ ರಾತ್ರಿ ೮ ಕ್ಕೆ ಶ್ರೀ ವೃಷಭಲಿಂಗೇಶ್ವರಸ್ವಾಮಿಯವರ ಸನ್ನಿಧಾನದಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗದೊಂದಿಗೆ ಉತ್ಸವಕ್ಕೆ ತೆರೆಬೀಳುತ್ತದೆ ಎಂದು ಕಾರ್ಯಕ್ರಮ ಸಂಯೋಜಕ ಎಸ್.ಮಹೇಶ್ ತಿಳಿಸಿದರು.