ವೀರಾಜಪೇಟೆ, ಏ. ೧೩: ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಹಲ್ಲೆ ನಡೆದು ಆಸ್ಪತ್ರೆಗೆ ದಾಖಲಾದ ಘಟನೆ ವೀರಾಜಪೇಟೆ ಚಿಕ್ಕಪೇಟೆ ಯಲ್ಲಿ ನಡೆದಿದೆ. ವೀರಾಜಪೇಟೆ ತಾಲೂಕು ಕುಕ್ಲೂರು ಗ್ರಾಮದ ನಿವಾಸಿ ಹರ್ಷ (೩೭) ಮತ್ತು ಬೇಟೋಳಿ ಗ್ರಾಮದ ನಿವಾಸಿ ನಿಶಾಂತ್ ಲೋಬೊ (೨೮) ಆಸ್ಪತ್ರೆಗೆ ದಾಖಲಾದ ವ್ಯಕ್ತಿಗಳು.

ಹಣಕಾಸಿನ ವ್ಯವಹಾರದ ಹಿನ್ನೆಲೆ ಇವರ ನಡುವೆ ತಗಾದೆ ಉಂಟಾಗಿ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಹರ್ಷ ಮತ್ತು ನಿಶಾಂತ್ ಲೋಬೋ ನೀಡಿರುವ ದೂರಿನ ಮೇರೆಗೆ ಈರ್ವರ ಮೇಲೆ ವೀರಾಜಪೇಟೆ ನಗರ ಠಾಣೆಯಲ್ಲಿ ಪರಸ್ಪರ ಪ್ರಕರಣ ದಾಖಲಾಗಿದೆ.